FASTag ಬ್ಯಾಂಕ್ ಬದಲಾಯಿಸಲು ಇನ್ನು ಹೊಸ ಸ್ಟಿಕ್ಕರ್ ಬೇಡ: ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಮುಂಬೈನಲ್ಲಿ ನಡೆದ Global Fintech Fest 2026ರಲ್ಲಿ ‘OneTag’ FASTag ಪೋರ್ಟೆಬಿಲಿಟಿ ವ್ಯವಸ್ಥೆಗೆ ಚಾಲನೆ ನೀಡಿದ್ದಾರೆ. ಇದರ ಮೂಲಕ ವಾಹನ ಸವಾರರು FASTagನ ಭೌತಿಕ ಸ್ಟಿಕ್ಕರ್ ಬದಲಾಯಿಸದೇ, ಅದೇ ಟ್ಯಾಗ್ ಅನ್ನು ಉಳಿಸಿಕೊಂಡು ವಿತರಕ ಬ್ಯಾಂಕ್ ಬದಲಾಯಿಸಬಹುದು. ಇದುವರೆಗೆ FASTag ನೀಡಿದ ಬ್ಯಾಂಕ್ ಬದಲಾಯಿಸಬೇಕಾದರೆ ಹಳೆಯ FASTag ಮುಚ್ಚಿ, ಹೊಸ ಬ್ಯಾಂಕ್‌ನಿಂದ ಮತ್ತೊಂದು ಟ್ಯಾಗ್ ಪಡೆಯಬೇಕಾಗುತ್ತಿತ್ತು. ಇದರಿಂದ ವಿಂಡ್‌ಶೀಲ್ಡ್‌ನಲ್ಲಿದ್ದ ಹಳೆಯ ಸ್ಟಿಕ್ಕರ್ ತೆಗೆದು ಹೊಸದನ್ನು ಅಳವಡಿಸುವುದು, ಹೊಸ KYC/ಆನ್‌ಬೋರ್ಡಿಂಗ್ ಪ್ರಕ್ರಿಯೆ ನಡೆಸುವುದು ಸೇರಿದಂತೆ ಹಲವು ಹಂತಗಳಿದ್ದವು. OneTag ಮೂಲಕ ಈಗ ಈ ತೊಂದರೆ ಕಡಿಮೆಯಾಗಲಿದೆ. ವಾಹನದಲ್ಲಿರುವ ಹಳೆಯ FASTag ಸ್ಟಿಕ್ಕರ್, Tag ID ಮತ್ತು ವಾಹನ ನೋಂದಣಿ ಸಂಖ್ಯೆಯನ್ನು ಉಳಿಸಿಕೊಂಡೇ ಹೊಸ ವಿತರಕ ಬ್ಯಾಂಕ್‌ಗೆ ಪೋರ್ಟ್ ಮಾಡಿಕೊಳ್ಳಬಹುದು. (ಮಾಹಿತಿ ಅಪ್ಡೇಟ್ ಆಗಲಿದೆ)
ಪ್ರತಿ ಹೊಸ ಅಪ್‌ಡೇಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿರಿ 👉 ಇಂದಿನ ಪ್ರಮುಖ ಲೈವ್ ಅಪ್‌ಡೇಟ್‌ಗಳನ್ನು ‘ಸಂಯುಕ್ತ ಕರ್ನಾಟಕ’ ಜಾಲತಾಣದಲ್ಲಿ ನಿರಂತರವಾಗಿ ಓದಿರಿ.





















