ಜೈನ ಅಭಿವೃದ್ಧಿ ನಿಗಮ ಸ್ಥಾಪನೆಗೆ 10 ದಿನಗಳ ಗಡುವು: ಡಿಸೆಂಬರ್‌ನಲ್ಲಿ ಸಲ್ಲೇಖನ ವ್ರತಕ್ಕೆ ಆಚಾರ್ಯ ಗುಣಧರನಂದಿ ನಿರ್ಧಾರ
ಹುಬ್ಬಳ್ಳಿ: ಜೈನ ಅಭಿವೃದ್ಧಿ ನಿಗಮ ಸ್ಥಾಪನೆ ಸೇರಿದಂತೆ ಸಮಾಜದ ಐದು ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ರಾಜ್ಯ ಸರ್ಕಾರಕ್ಕೆ 10 ದಿನಗಳ ಗಡುವು ನೀಡುತ್ತಿದ್ದು, ಈ ಅವಧಿಯಲ್ಲಿ ಲಿಖಿತ ಭರವಸೆ ದೊರೆಯದಿದ್ದರೆ ಹಂತ ಹಂತವಾಗಿ ಹೋರಾಟ ತೀವ್ರಗೊಳಿಸಿ, ಅಂತಿಮವಾಗಿ ಡಿಸೆಂಬರ್‌ನಲ್ಲಿ ಸಲ್ಲೇಖನ ವ್ರತ ಸ್ವೀಕರಿಸುವ ನಿರ್ಧಾರ ಕೈಗೊಂಡಿದ್ದೇನೆ ಎಂದು ವರೂರು ನವಗ್ರಹ ತೀರ್ಥ ಕ್ಷೇತ್ರದ ಆಚಾರ್ಯ ಗುಣಧರನಂದಿ ಮಹಾರಾಜರು ಘೋಷಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೈನ ಸಮಾಜಕ್ಕೆ ಆಗುತ್ತಿರುವ ಅನ್ಯಾಯವನ್ನು ಕಣ್ಣೆದುರು ನೋಡಿಕೊಂಡು ಸುಮ್ಮನಿರಲು ಸಾಧ್ಯವಿಲ್ಲ. ಕಳೆದ ಮೂರು ವರ್ಷಗಳಿಂದ ನಿರಂತರವಾಗಿ ಸರ್ಕಾರದ ಗಮನ ಸೆಳೆಯುತ್ತಿದ್ದರೂ ಭರವಸೆಗಳೇ ಹೆಚ್ಚಾಗಿವೆ, ಬೇಡಿಕೆಗಳ ಈಡೇರಿಕೆಗೆ ನಿರ್ಣಾಯಕ ಕ್ರಮ ಕೈಗೊಂಡಿಲ್ಲ. ಇನ್ನು ಕಾಯುವ ತಾಳ್ಮೆ ಇಲ್ಲ. ಸರ್ಕಾರಕ್ಕೆ ನೀಡಿರುವ 10 ದಿನಗಳ ಗಡುವಿನೊಳಗೆ ಸ್ಪಷ್ಟವಾದ ಲಿಖಿತ ಭರವಸೆ ಸಿಗದಿದ್ದರೆ ಹೋರಾಟ ಆರಂಭಿಸಲಾಗುವುದು ಎಂದು ಎಚ್ಚರಿಸಿದರು.
ಜೈನ ಸಮಾಜದ ನ್ಯಾಯಕ್ಕಾಗಿ ಅಗತ್ಯಬಿದ್ದರೆ ಅನ್ನ-ಜಲ ತ್ಯಜಿಸಿ ಹೋರಾಟ ನಡೆಸುತ್ತೇನೆ. ನನ್ನ ಬೇಡಿಕೆಗಳು ಈಡೇರುವವರೆಗೆ ಹಿಂದೆ ಸರಿಯುವುದಿಲ್ಲ. ನವೆಂಬರ್‌ನಲ್ಲಿ ಪಾದಯಾತ್ರೆ ಹಾಗೂ ಸತ್ಯಾಗ್ರಹ ನಡೆಸಿದ ಬಳಿಕವೂ ಸರ್ಕಾರ ಸ್ಪಂದಿಸದಿದ್ದರೆ ಡಿಸೆಂಬರ್‌ನಲ್ಲಿ ಸಲ್ಲೇಖನ ವ್ರತ ಸ್ವೀಕರಿಸುವ ನಿರ್ಧಾರ ಮಾಡಿದ್ದೇನೆ. ಇದು ತಾತ್ಕಾಲಿಕ ಆಕ್ರೋಶದ ನಿರ್ಧಾರವಲ್ಲ; ಸಮಾಜದ ಹಿತಕ್ಕಾಗಿ ಕೈಗೊಂಡಿರುವ ಗಂಭೀರ ನಿರ್ಧಾರ ಎಂದು ಹೇಳಿದರು.
ಸಲ್ಲೇಖನ ವ್ರತವು ಜೈನ ಧಾರ್ಮಿಕ ಪರಂಪರೆಯಲ್ಲಿ ಮಹತ್ವದ ಆಚರಣೆಯಾಗಿದೆ. ಸರ್ಕಾರ ತಮ್ಮ ಬೇಡಿಕೆಗಳಿಗೆ ನ್ಯಾಯಯುತ ಪರಿಹಾರ ಕಲ್ಪಿಸಬೇಕು ಎಂಬುದು ತಮ್ಮ ಆಶಯವಾಗಿದೆ ಎಂದು ತಿಳಿಸಿದರು.
- ಕರ್ನಾಟಕ SIR: ಅಂತಿಮ ಮತದಾರರ ಪಟ್ಟಿ ಪ್ರಕಟ: ನಿಮ್ಮ ಹೆಸರು ಇದೆಯೇ ಈಗಲೇ ಪರಿಶೀಲಿಸಿ
- ಸರಕಾರಕ್ಕೆ 10 ದಿನದ ಗಡುವು: ನವೆಂಬರ್‌ನಲ್ಲಿ ಬೃಹತ್ ಪಾದಯಾತ್ರೆ, ಡಿಸೆಂಬರ್‌ನಲ್ಲಿ ಸಲ್ಲೇಖನ ವ್ರತ
- ಪರೀಕ್ಷೆ ಮುಂದೂಡುವ ನಿರ್ಧಾರ KEAಗೆ ಬಿಟ್ಟದ್ದು: ಸರ್ಕಾರದ ಹಸ್ತಕ್ಷೇಪವಿಲ್ಲ
- ವಿಶ್ವ ಕಾರ್ಯನಿರತ ಚಿಕಿತ್ಸಾ ದಿನ: ಸ್ವಾವಲಂಬಿ ಬದುಕಿಗೆ ಆಕ್ಯುಪೇಷನಲ್ ಥೆರಪಿ ಬಲ
- AI ಎಫೆಕ್ಟ್: 60,000 ಉದ್ಯೋಗಿಗಳಿಗೆ ಸ್ವಯಂಪ್ರೇರಿತ ನಿರ್ಗಮನದ ಆಫರ್




















