KSRTC ಬಸ್-ಲಾರಿ ನಡುವೆ ಭೀಕರ ಡಿಕ್ಕಿ : ಚಿತ್ರದುರ್ಗ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಕಣಿವೆ ಬಳಿ KSRTC ಬಸ್ ಮತ್ತು ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ KSRTC ಬಸ್ ಚಾಲಕ ಸ್ಥಳದಲ್ಲೇ ದುರ್ಮರಣ ಹೊಂದಿದ್ದಾರೆ. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
ವಾಣಿಜ್ಯ ಸಿಲಿಂಡರ್ ಬೆಲೆ ಏರಿಕೆ : ಹಬ್ಬದ ಋತುವಿನ ಆರಂಭದಲ್ಲೇ ಹೋಟೆಲ್, ರೆಸ್ಟೋರೆಂಟ್, ಕ್ಯಾಟರಿಂಗ್ ಸೇರಿದಂತೆ ವಾಣಿಜ್ಯ ಬಳಕೆದಾರರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಅಕ್ಟೋಬರ್ 1, 2026ರಿಂದ ಜಾರಿಗೆ ಬರುವಂತೆ 19 ಕೆ.ಜಿ. ವಾಣಿಜ್ಯ LPG ಸಿಲಿಂಡರ್ ಬೆಲೆಯನ್ನು ₹62.50ರಷ್ಟು ಹೆಚ್ಚಿಸಲಾಗಿದೆ. ದೆಹಲಿಯಲ್ಲಿ ಸೆಪ್ಟೆಂಬರ್‌ನಲ್ಲಿ ₹2,747.50 ಇದ್ದ 19 ಕೆ.ಜಿ. ವಾಣಿಜ್ಯ ಸಿಲಿಂಡರ್ ಬೆಲೆ ಇದೀಗ ₹2,810ಕ್ಕೆ ಏರಿಕೆಯಾಗಿದೆ. ಇದು ಸುಮಾರು ಶೇ.2.3ರಷ್ಟು ಹೆಚ್ಚಳವಾಗಿದೆ. ದೇಶದ ಇತರ ನಗರಗಳಲ್ಲಿಯೂ ವಾಣಿಜ್ಯ LPG ದರ ಏರಿಕೆಯಾಗಿದೆ. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
ಅಂಕಣ ಬರಹ | ಹುಬ್ಬಳ್ಳಿ ರೈತ ಹೋರಾಟ – ಹತ್ತಿಕ್ಕದಿರಿ, ಸ್ಪಂದಿಸಿ : ಸಂಯುಕ್ತ ಕರ್ನಾಟಕ ಕಾರ್ಯನಿರ್ವಾಹಕ ಹಾಗೂ ಸಂಪಾದಕರಾದ ಮೋಹನ ಹೆಗಡೆ ಅವರ ಅಂಕಣ ಗುರುವಾರ ದಿನಪತ್ರಿಕೆಯಲ್ಲಿ ಪ್ರಕಟವಾದ ಲೇಖನದಲ್ಲಿ ಹುಬ್ಬಳ್ಳಿಯಲ್ಲಿ ನಡೆದ ರೈತರ ಪ್ರತಿಭಟನೆಯು 1980ರ ದಶಕದ ಚಳವಳಿಯನ್ನು ನೆನಪಿಸುವಂತಿದ್ದು, ಕಬ್ಬು ಬೆಳೆಗಾರರು ತಮ್ಮ ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೀದಿಗಿಳಿದಿದ್ದರು. ಪಂಜಾಬ್, ಮಹಾರಾಷ್ಟ್ರ ರಾಜ್ಯಗಳಿಗೆ ಇರುವ ಕಬ್ಬು ಹಾಗೂ ಎಥಿನಾಲ್ ಖರೀದಿ ನೀತಿಗೂ, ಕರ್ನಾಟಕದ ನೀತಿಗೂ ವ್ಯತ್ಯಾಸವಿದ್ದು, ಕೇಂದ್ರ ಸರ್ಕಾರದ ತಾರತಮ್ಯವನ್ನು ಅಂಕಣದಲ್ಲಿ ಪ್ರಶ್ನಿಸಲಾಗಿದೆ.ಇಳುವರಿ ಕಮ್ಮಿಯಿರುವ ಹಾಗೂ ಸರಿಯಾಗಿ ಬಲಿಯದ ಕಬ್ಬನ್ನು ನುರಿಸಲು ಕಾರ್ಖಾನೆಗಳು ತರಾತುರಿ ಮಾಡುತ್ತಿದ್ದು, ಇದು ರೈತರಿಗೆ ನಷ್ಟ ಉಂಟುಮಾಡುತ್ತಿದೆ. ಸಕ್ಕರೆ ಕಾರ್ಖಾನೆಗಳು ರಾಜಕಾರಣಿಗಳ ಕಪಿಮುಷ್ಟಿಯಲ್ಲಿದ್ದು, ರೈತರ ಬೆಳೆ ಹಾಗೂ ದರದಲ್ಲಿ ಮೋಸವಾಗುತ್ತಿದೆ. ಒಟ್ಟಿನಲ್ಲಿ, ಇದು ಸಕ್ಕರೆ ಕಾರ್ಖಾನೆಗಳು ಮತ್ತು ರಾಜಕಾರಣಿಗಳ ಹಿಡಿತದಲ್ಲಿ ಸಿಲುಕಿ ವಂಚನೆಗೆ ಒಳಗಾಗುತ್ತಿರುವ ಕಬ್ಬು ಬೆಳೆಗಾರರ ನ್ಯಾಯಯುತ ಹಕ್ಕುಗಳಿಗಾಗಿ ಹುಬ್ಬಳ್ಳಿಯಲ್ಲಿ ನಡೆದ ಪ್ರತಿಭಟನೆಯ ಧ್ವನಿಯಾಗಿದೆ. ಕೇಂದ್ರ ಸರ್ಕಾರ ಮತ್ತು ಸ್ಥಳೀಯ ನಾಯಕರು ತಾರತಮ್ಯವಿಲ್ಲದೆ ಸ್ವಾಮಿನಾಥನ್ ವರದಿ ಹಾಗೂ ಸೂಕ್ತ ಬೆಂಬಲ ಬೆಲೆಯನ್ನು ಜಾರಿಗೆ ತಂದು ರೈತರ ಬವಣೆಯನ್ನು ಬಗೆಹರಿಸಬೇಕು ಎನ್ನುವುದೇ ಈ ಅಂಕಣದ ಆಶಯವಾಗಿದೆ.
ಪ್ರತಿ ಹೊಸ ಅಪ್‌ಡೇಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿರಿ 👉 ಇಂದಿನ ಪ್ರಮುಖ ಲೈವ್ ಅಪ್‌ಡೇಟ್‌ಗಳನ್ನು ‘ಸಂಯುಕ್ತ ಕರ್ನಾಟಕ’ ಜಾಲತಾಣದಲ್ಲಿ ನಿರಂತರವಾಗಿ ಓದಿರಿ.
- ಚಿತ್ರದುರ್ಗ: ಕಣಿವೆ ಬಳಿ KSRTC ಬಸ್-ಲಾರಿ ನಡುವೆ ಭೀಕರ ಡಿಕ್ಕಿ – ಬಸ್ ಚಾಲಕ ಸ್ಥಳದಲ್ಲೇ ಸಾವು
- LPG Price Hike: ಹಬ್ಬದ ಹೊಸ್ತಿಲಲ್ಲೇ ವಾಣಿಜ್ಯ ಸಿಲಿಂಡರ್ ಬೆಲೆ ಏರಿಕೆ
- Samyukta Karnataka News Live: ವ್ಯಾಪಾರಿಗಳಿಗೆ ಹಬ್ಬದ ಶಾಕ್: ವಾಣಿಜ್ಯ LPG ಬೆಲೆಯಲ್ಲಿ ಏರಿಕೆ
- ಅಂಕಣ ಬರಹ | ಹುಬ್ಬಳ್ಳಿ ರೈತ ಹೋರಾಟ: ಹತ್ತಿಕ್ಕದಿರಿ, ಸ್ಪಂದಿಸಿ
- 400+ ರನ್ಗಳ ಸರದಾರ ಭಾರತ: ವಿಂಡೀಸ್ ವಿರುದ್ಧದ ಗೆಲುವಿನೊಂದಿಗೆ ಹೊಸ ದಾಖಲೆ
(ಮಾಹಿತಿ ಅಪ್ಡೇಟ್ ಆಗಲಿದೆ)






















