SK Home Ad
Home ಸುದ್ದಿ Samyukta Karnataka News Live: ಅಕ್ಟೋಬರ್‌ನಿಂದ WhatsApp Business ಬಳಕೆದಾರರಿಗೆ ಹೊಸ ಶುಲ್ಕ?

Samyukta Karnataka News Live: ಅಕ್ಟೋಬರ್‌ನಿಂದ WhatsApp Business ಬಳಕೆದಾರರಿಗೆ ಹೊಸ ಶುಲ್ಕ?

0
35
WhatsApp ಬಳಕೆಗೆ ಹಣ ಪಾವತಿಸಬೇಕೇ? ಇಲ್ಲಿದೆ ಸ್ಪಷ್ಟನೆ

ಅಕ್ಟೋಬರ್‌ನಿಂದ WhatsApp Business API ಬಳಸುವವರಿಗೆ ಹೊಸ ಹೊರೆ ? : WhatsApp Business Platform/API ಬಳಸುವ ವ್ಯವಹಾರಗಳಿಗೆ ಅಕ್ಟೋಬರ್‌ನಿಂದ ಪ್ರತಿ ಮೆಸೇಜ್‌ಗೆ ಶುಲ್ಕ ವಿಧಿಸುವ ಕುರಿತು ಹೊಸ ದರ ವ್ಯವಸ್ಥೆ ಜಾರಿಗೆ ಬರಲಿದೆ ಎಂಬ ಮಾಹಿತಿ ಇದೀಗ ಗಮನ ಸೆಳೆದಿದೆ. ಈ ಬದಲಾವಣೆ ಭಾರತೀಯ ವ್ಯವಹಾರಗಳಿಗೂ ಅನ್ವಯಿಸುವ ಸಾಧ್ಯತೆ ಇದೆ, ಆದರೆ ₹0.14ರ ದರವು ಯಾವ ರೀತಿಯ ಮೆಸೇಜ್‌ಗೆ ಮತ್ತು ಯಾವ ವರ್ಗದ business messageಗೆ ಅನ್ವಯಿಸುತ್ತದೆ ಎಂಬುದನ್ನು ಪ್ರಸ್ತುತ Metaಯ ಅಧಿಕೃತ pricing category ಆಧರಿಸಿ ನೋಡಬೇಕಾಗಿದೆ. (ಮಾಹಿತಿ ಅಪ್​ಡೇಟ್ ಆಗಲಿದೆ)

ರೈತರಿಗೆ ದೆಹಲಿಗೆ ಬನ್ನಿ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮುಕ್ತ ಆಹ್ವಾನ : ಕಬ್ಬಿನ ನ್ಯಾಯಯುತ ಬೆಲೆ ಹೆಚ್ಚಳಕ್ಕೆ ಆಗ್ರಹಿಸಿ ಹುಬ್ಬಳ್ಳಿಯಲ್ಲಿ ಇಂದು ಪ್ರತಿಭಟನೆಗೆ ಮುಂದಾಗಿರುವ ಕರ್ನಾಟಕದ ಕಬ್ಬು ಬೆಳೆಗಾರರಿಗೆ ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ಅವರು ದೆಹಲಿಗೆ ಬಂದು ಮುಕ್ತ ಚರ್ಚೆ ನಡೆಸುವಂತೆ ಆಹ್ವಾನ ನೀಡಿದ್ದಾರೆ. ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ವಿಡಿಯೋ ಸಂದೇಶ ಹಂಚಿಕೊಂಡಿರುವ ಸಚಿವರು, ರೈತರು ಬೀದಿಗಿಳಿದು ಪ್ರತಿಭಟನೆ ನಡೆಸುವ ಅಗತ್ಯವಿಲ್ಲ, ನೇರವಾಗಿ ರಾಷ್ಟ್ರ ರಾಜಧಾನಿಗೆ ಬಂದರೆ ಅಧಿಕಾರಿಗಳ ಜೊತೆ ಕೂರಿಸಿ ಸಮಸ್ಯೆ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದ್ದಾರೆ. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರತಿ ಹೊಸ ಅಪ್‌ಡೇಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿರಿ 👉 ಇಂದಿನ ಪ್ರಮುಖ ಲೈವ್ ಅಪ್‌ಡೇಟ್‌ಗಳನ್ನು ‘ಸಂಯುಕ್ತ ಕರ್ನಾಟಕ’ ಜಾಲತಾಣದಲ್ಲಿ ನಿರಂತರವಾಗಿ ಓದಿರಿ.

(ಮಾಹಿತಿ ಅಪ್​ಡೇಟ್ ಆಗಲಿದೆ)