SK Home Ad
Home ಸಿನಿ ಮಿಲ್ಸ್ ಇಂಟರ್ನೆಟ್ ಇಲ್ಲದೆಯೂ ಲಭ್ಯ ಯುಪಿಐ ಸೇವೆ: ‘ಗ್ಲೋಬಲ್ ಫಿನ್‌ಟೆಕ್ ಫೆಸ್ಟ್ 2026’ರಲ್ಲಿ ಹೊಸ ಫೀಚರ್‌ಗಳ ಅನಾವರಣ

ಇಂಟರ್ನೆಟ್ ಇಲ್ಲದೆಯೂ ಲಭ್ಯ ಯುಪಿಐ ಸೇವೆ: ‘ಗ್ಲೋಬಲ್ ಫಿನ್‌ಟೆಕ್ ಫೆಸ್ಟ್ 2026’ರಲ್ಲಿ ಹೊಸ ಫೀಚರ್‌ಗಳ ಅನಾವರಣ

0
12

ಇಂಟರ್ನೆಟ್ ಸಂಪರ್ಕವಿಲ್ಲದೆಯೂ ಸುಲಭವಾಗಿ ಯುಪಿಐ ಪಾವತಿ ಮಾಡಲು ಅನುಕೂಲವಾಗುವಂತೆ ಭಾರತೀಯ ರಿಸರ್ವ್ ಬ್ಯಾಂಕ್ (RBI) ಎರಡು ಹೊಸ ವೈಶಿಷ್ಟ್ಯಗಳನ್ನು ಈಗ ಪರಿಚಯಿಸಿದೆ. ‘ಟ್ಯಾಪ್ ಆಂಡ್ ಪೇ’ ಮತ್ತು ಎಐ ಆಧಾರಿತ ‘ಮೈ ಯುಪಿಐ’ (MyUPI) ಸೌಲಭ್ಯಗಳು ಮುಂಬೈನಲ್ಲಿ ನಡೆದ ‘ಗ್ಲೋಬಲ್ ಫಿನ್‌ಟೆಕ್ ಫೆಸ್ಟ್ 2026’ರಲ್ಲಿ RBI ಗವರ್ನರ್ ಸಂಜಯ್ ಮಲ್ಹೋತ್ರಾ ಅಧಿಕೃತವಾಗಿ ಅನಾವರಣಗೊಳಿಸಿದ್ರು.

‘ಟ್ಯಾಪ್ ಆಂಡ್ ಪೇ’ ಸೌಲಭ್ಯದ ಮೂಲಕ ಗ್ರಾಹಕರು ತಮ್ಮ ಸ್ಮಾರ್ಟ್‌ಫೋನ್ ಅನ್‌ಲಾಕ್ ಮಾಡಿ, ಪಿಒಎಸ್ (PoS) ಯಂತ್ರದ ಮೇಲೆ ಸ್ಪರ್ಶಿಸುವ (Tap) ಮೂಲಕ ತಕ್ಷಣವೇ ಪಾವತಿ ಮಾಡಬಹುದು. ಕಾಂಟ್ಯಾಕ್ಟ್‌ಲೆಸ್ ಕಾರ್ಡ್ ಮಾದರಿಯಲ್ಲೇ ಇದು ಕಾರ್ಯನಿರ್ವಹಿಸಲಿದ್ದು, ಚಿಲ್ಲರೆ ವ್ಯಾಪಾರಸ್ಥರ ಬಳಿ ಶೀಘ್ರ ವಹಿವಾಟಿಗೆ ನೆರವಾಗಲಿದೆ. ಮತ್ತೊಂದೆಡೆ, ‘ಮೈ ಯುಪಿಐ’ ವೇದಿಕೆಯು ಎಐ ತಂತ್ರಜ್ಞಾನ ಹಾಗೂ ಭಾರತೀಯ ಪಾವತಿ ನಿಗಮದ (NPCI) ಸಣ್ಣ ಭಾಷಾ ಮಾದರಿಯನ್ನು ಬಳಸಿಕೊಂಡು ಗ್ರಾಹಕರ ಸೇವೆ ಮತ್ತು ದೂರು ಪರಿಹಾರವನ್ನು ಇನ್ನಷ್ಟು ಸರಳಗೊಳಿಸಲಿದೆ.

ಈ ನೂತನ ವ್ಯವಸ್ಥೆಯಡಿ 5,000 ರೂಪಾಯಿಗಳವರೆಗಿನ ಸಣ್ಣ ಪ್ರಮಾಣದ ವಹಿವಾಟುಗಳಿಗೆ ಯುಪಿಐ ಪಿನ್ (PIN) ನಮೂದಿಸುವ ಅಗತ್ಯವಿರುವುದಿಲ್ಲ. ಆದ್ರೆ 5,000 ರೂಪಾಯಿಗಿಂತ ಹೆಚ್ಚಿನ ಮೊತ್ತದ ಪಾವತಿಗಳಿಗೆ ಪಿಒಎಸ್ ಟರ್ಮಿನಲ್‌ನಲ್ಲಿ ಪಿನ್ ನಮೂದಿಸುವುದು ಕಡ್ಡಾಯವಾಗಿದೆ.

“ಮೈ ಯುಪಿಐ ವೇದಿಕೆಯು ಬಳಕೆದಾರರಿಗೆ ವಿವಿಧ ಬ್ಯಾಂಕ್‌ಗಳು ಹಾಗೂ ಆ್ಯಪ್‌ಗಳಲ್ಲಿನ ವಹಿವಾಟು ಮತ್ತು ಆಟೋಪೇ ವಿವರಗಳನ್ನು ಒಂದೇ ಸ್ಥಳದಲ್ಲಿ ವೀಕ್ಷಿಸಲು ಅವಕಾಶ ನೀಡುತ್ತದೆ. ದೇಶದ ಶೇಕಡಾ 89ರಷ್ಟು ಡಿಜಿಟಲ್ ಪಾವತಿಗಳು ಯುಪಿಐ ಮೂಲಕವೇ ನಡೆಯುತ್ತಿದ್ದು, ಈ ಹೊಸ ಬದಲಾವಣೆಗಳು ಗ್ರಾಹಕರಿಗೆ ಹೆಚ್ಚಿನ ಭದ್ರತೆ ಮತ್ತು ನಿಯಂತ್ರಣವನ್ನು ನೀಡಲಿವೆ” ಎಂದು ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ತಿಳಿಸಿದ್ದಾರೆ.