SK Home Ad
Home ಸಿನಿ ಮಿಲ್ಸ್ ​ಸ್ಯಾಂಡಲ್‌ವುಡ್‌ನಿಂದ ಟಾಲಿವುಡ್‌ಗೆ: ಸಾಲು ಸಾಲು ಸಿನಿಮಾಗಳಲ್ಲಿ ಸೌತ್ ಬೆಡಗಿ ಆಶಿಕಾ ಬ್ಯುಸಿ

​ಸ್ಯಾಂಡಲ್‌ವುಡ್‌ನಿಂದ ಟಾಲಿವುಡ್‌ಗೆ: ಸಾಲು ಸಾಲು ಸಿನಿಮಾಗಳಲ್ಲಿ ಸೌತ್ ಬೆಡಗಿ ಆಶಿಕಾ ಬ್ಯುಸಿ

0
17

ಬೆಂಗಳೂರು: ಕನ್ನಡ ಚಿತ್ರರಂಗದ ‘ಚುಟು ಚುಟು’ ಬೆಡಗಿ ಆಶಿಕಾ ರಂಗನಾಥ್, ತಮ್ಮ ನಟನೆ ಮತ್ತು ಸೌಂದರ್ಯದ ಮೂಲಕ ಪ್ರಾದೇಶಿಕ ಗಡಿಗಳನ್ನು ಮೀರಿ ಸೌತ್ ಸಿನಿರಂಗದಲ್ಲಿ ಮಿಂಚುತ್ತಿದ್ದಾರೆ. ಕೇವಲ ಸೌಂದರ್ಯಕ್ಕಷ್ಟೇ ಸೀಮಿತವಾಗದೆ, ನೆನಪಿನಲ್ಲಿ ಉಳಿಯುವಂತಹ ಸವಾಲಿನ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಿರುವ ಈ ನಟಿಗೆ ಈಗ ಟಾಲಿವುಡ್‌ನಲ್ಲೂ ಭಾರಿ ಬೇಡಿಕೆ ಕೇಳಿಬರುತ್ತಿವೆ.

ನಟಿ ಆಶಿಕಾ 2016ರಲ್ಲಿ ‘ಕ್ರೇಜಿ ಬಾಯ್’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಚೊಚ್ಚಲ ಪ್ರವೇಶ ಮಾಡುವ ಮೂಲಕ, ನಟ ಶರಣ್ ಜೊತೆ ಅಭಿನಯಿಸಿದ ‘ರ್ಯಾಂಬೋ 2’ ಚಿತ್ರದ ‘ಚುಟು ಚುಟು’ ಹಾಡು ಆಶಿಕಾ ಚಿತ್ರರಂಗದಲ್ಲಿ ಬಹುದೊಡ್ಡ ಬ್ರೇಕ್ ನೀಡಿತು. ಆ ಬಳಿಕ ‘ಮುಗುಳು ನಗೆ’, ‘ಮಾಸ್ ಲೀಡರ್’, ‘ತಾಯಿಗೆ ತಕ್ಕ ಮಗ’, ‘ಅವತಾರ ಪುರುಷ’ ಹಾಗೂ ‘ರೆಮೋ’ ಮುಂತಾದ ಸಿನಿಮಾಗಳ ಮೂಲಕ ಕನ್ನಡಿಗರ ಮನಗೆದ್ದರು. ಶ್ರೀಮುರಳಿ ಜೋಡಿಯಾಗಿ ನಟಿಸಿದ ‘ಮದಗಜ’ ಚಿತ್ರದ ಅತ್ಯುತ್ತಮ ಅಭಿನಯಕ್ಕಾಗಿ ಇವರಿಗೆ ‘ಸೈಮಾ’ ಪ್ರಶಸ್ತಿ ಲಭಿಸಿತು.

ಕನ್ನಡದಲ್ಲಿ ಯಶಸ್ಸಿನ ಉತ್ತುಂಗದಲ್ಲಿದ್ದಾಗಲೇ ಟಾಲಿವುಡ್‌ಗೆ ಹೆಜ್ಜೆ ಇಟ್ಟ ಆಶಿಕಾ, 2023ರಲ್ಲಿ ಕಲ್ಯಾಣ್ ರಾಮ್ ಜೋಡಿಯಾಗಿ ‘ಅಮಿಗೋಸ್’ ಚಿತ್ರದಲ್ಲಿ ನಟಿಸಿದರು. ನಂತರ ನಾಗಾರ್ಜುನ ‘ನಾ ಸಾಮಿ ರಂಗ’ (2024) ಸಿನಿಮಾದ ‘ವರಲಕ್ಷ್ಮಿ’ ಪಾತ್ರ ತೆಲುಗು ಪ್ರೇಕ್ಷಕರಿಂದ ಅಪಾರ ಮೆಚ್ಚುಗೆ ಗಳಿಸಿತು. ಆಶಿಕಾ ನಟನೆಯನ್ನು ಕಂಡು ಹಿರಿಯ ನಿರ್ದೇಶಕ ಗುಣಶೇಖರ್ ಬಹಿರಂಗವಾಗಿ ಶ್ಲಾಘಿಸಿದ್ದರು.

ಸದ್ಯ ಮೆಗಾಸ್ಟಾರ್ ಚಿರಂಜೀವಿ ಅಭಿನಯದ ಬಹುನಿರೀಕ್ಷಿತ ‘ವಿಶ್ವಂಭರ’ ಸಿನಿಮಾದಲ್ಲಿ ಪ್ರಮುಖ ಪಾತ್ರವೊಂದನ್ನು ಪೋಷಿಸುತ್ತಿರುವ ಆಶಿಕಾ, ದಕ್ಷಿಣ ಭಾರತದ ಮುಂಚೂಣಿ ನಟಿಯರಲ್ಲಿ ಒಬ್ಬರಾಗಿ ಹೊರಹೊಮ್ಮುತ್ತಿದ್ದಾರೆ ಎನ್ನಲಾಗುತ್ತಿದೆ.