SK Home Ad
Home ನಮ್ಮ ಜಿಲ್ಲೆ ಉತ್ತರ ಕನ್ನಡ ಉತ್ತರ ಕನ್ನಡ ಜಿಲ್ಲಾ ಪಂಚಾಯತ ಮೀಸಲಾತಿ ಪ್ರಕಟ: 27 ಸ್ಥಾ‌ನ ಮಹಿಳೆಯರಿಗೆ ಮೀಸಲು‌

ಉತ್ತರ ಕನ್ನಡ ಜಿಲ್ಲಾ ಪಂಚಾಯತ ಮೀಸಲಾತಿ ಪ್ರಕಟ: 27 ಸ್ಥಾ‌ನ ಮಹಿಳೆಯರಿಗೆ ಮೀಸಲು‌

0
128

ದಾಂಡೇಲಿ ( ಉತ್ತರ ಕನ್ನಡ) ಸಂ.ಕ. ಸಮಾಚಾರ : ಸರ್ಕಾರ ಜಿಲ್ಲಾ ಪಂಚಾಯತ ಮೀಸಲಾತಿ ಪ್ರಕಟಿಸಿದ್ದು, ಉತ್ತರ ಕನ್ನಡ ಜಿಲ್ಲಾಪಂಚಾಯತ್ ಗೆ ಒಟ್ಟು 53 ಸ್ಥಾನಗಳಿವೆ. ಇವುಗಳಲ್ಲಿ 27 ಸ್ಥಾನ ಮಹಿಳೆಯರಿಗೆ ಮೀಸಲಾಗಿವೆ ಎಂದು ಸರ್ಕಾರದ ಗೆಜೆಟ್ ಪ್ರಕಟಣೆಯಲ್ಲಿ ತಿಳಿಸಿದೆ.‌

30 ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಸ್ಥಾನ ಕ್ಷೇತ್ರ ಇವೆ. ಸಾಮಾನ್ಯ ವರ್ಗದಲ್ಲಿ 15 ಸ್ಥಾನ ಮಹಿಳೆಯರಿಗೆ ಮೀಸಲಾಗಿವೆ. , ಹಿಂದುಳಿದ ಅ ವರ್ಗಕ್ಕೆ 14. ಇವೆ.ಇವುಗಳಲ್ಲಿ 7 ಕ್ಷೇತ್ರ ಮಹಿಳೆಯರಿಗೆ ಇವೆ. ಹಿಂದುಳಿದ ಬಿ ವರ್ಗಕ್ಕೆ4 ಕ್ಷೇತ್ರ ಇವೆ.ಇವುಗಳಲ್ಲಿ 2 ಮಹಿಳೆಯರಿಗೆ ಮೀಸಲು. ಎಸ್ಟಿ ಗಳಿಗೆ ಎರಡು ಕ್ಷೇತ್ರಗಳಿದ್ದು, ಮಹಿಳೆಗೆ 1 , ಪುರಷಗೆ ಒಂದು ಸ್ಥಾನ, 4 ಕ್ಷೇತ್ರ ಎಸ್ಸಿ ಗಳಿಗೆ ಕಾಯ್ದಿರಿಸಿದ್ದು ಇದರಲ್ಲಿ 2 ಕ್ಷೇತ್ರ ಎಸ್ಸಿ ಮಹಿಳೆಗೆ ಮೀಸಲು ಇರಿಸಲಾಗಿದೆ. ಯಾವ ಕ್ಷೇತ್ರ ಸಾಮಾನ್ಯ, ಯಾವುದು ಹಿಂದುಳಿದ ವರ್ಗಕ್ಕೆ ಎಂಬುದು ಮುಂದಿನ ದಿನಗಳಲ್ಲಿ ತಿಳಿಯಲಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಒಟ್ಟು ಕ್ಷೇತ್ರಗಳ ಸಂಖ್ಯೆ ಮೀಸಲಾತಿಯನ್ನು ಸರ್ಕಾರ ಬುಧುವಾರ ಪ್ರಕಟಿಸಿದೆ.