SK Home Ad
Home ಸುದ್ದಿ ಈರುಳ್ಳಿ ದರ ಭಾರೀ ಏರಿಕೆ; ಕೆ.ಜಿ ಗೆ 240 ರೂ ದಾಟಿದ ಬೆಲೆ | ಗ್ರಾಹಕರ...

ಈರುಳ್ಳಿ ದರ ಭಾರೀ ಏರಿಕೆ; ಕೆ.ಜಿ ಗೆ 240 ರೂ ದಾಟಿದ ಬೆಲೆ | ಗ್ರಾಹಕರ ಜೇಬಿಗೆ ಬಿತ್ತು ಕತ್ತರಿ

0
54

ರಾಜ್ಯದಲ್ಲಿ ಬರಗಾಲ ಪರಿಣಾಮ ದಿನನಿತ್ಯ ಬಳಸುವ ತರಕಾರಿಗಳ ಬೆಲೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಇದೀಗ ಈ ಲಿಸ್ಟ್ ಲ್ಲಿ ಈರುಳ್ಳಿ ಸೇರಿದಂತಾಗಿದೆ, ರಾಜ್ಯದಲ್ಲಿ ಈರುಳ್ಳಿ ಬೆಲೆ 55 ರಿಂದ 70ಕ್ಕೆ ಏರಿಕೆಯಾಗಿದೆ. ಸಾಂಬಾರ್ ಈರುಳ್ಳಿ 240ಕ್ಕೆ ಭಾರೀ ಏರಿಕೆಯಾಗಿದ್ದು ಜನರ ಜೇಬಿಗೆ ಕತ್ತರಿ ಹಾಕುತ್ತಿವೆ.

ರಾಜ್ಯದಲ್ಲಿ ಬರಗಾಲ ಪರಿಣಾಮ ಶೇ.50% ಕ್ಕೂ ಹೆಚ್ಚು ಈರುಳ್ಳಿ ನಷ್ಟವಾಗಿದ್ದು, ಹಿಂದಿನ ವರ್ಷದಲ್ಲಿ ಅತಿಯಾದ ಮಳೆಯಿಂದ ಈರುಳ್ಳಿ ಬೆಳೆ ಹಾನಿಗೀಡಾಗಿತ್ತು. ಈರುಳ್ಳಿಯನ್ನು ಮುಂಗಾರು, ಹಿಂಗಾರು ಮತ್ತು ಬೇಸಿಗೆ ಹಂಗಾಮಿನಲ್ಲೂ ಬೆಳೆಯಬಹುದು ಆದರೆ, ಕರ್ನಾಟಕದಲ್ಲಿ ಮುಖ್ಯವಾಗಿ ಮುಂಗಾರು ಹಂಗಾಮಿನಲ್ಲಿಯೇ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತದೆ.

ಪ್ರಸ್ತುತ ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ ಈರುಳ್ಳಿ 70ರೂ ಆಗಿದ್ದು 100ಕ್ಕೆ ಏರುವ ಸಾಧ್ಯತೆ ಇದೆ. ದಸರಾ ಮತ್ತು ದೀಪಾವಳಿ ಹಬ್ಬದ ಸಂದರ್ಭದಲ್ಲಿ ಈರುಳ್ಳಿ ಏರಿಕೆಯಾಗಿ ಮತ್ತೆ ಇಳಿಕೆಯಾಗಿದ್ದವು.

ಈರುಳ್ಳಿ ದರ ಏಷ್ಟು
ಈರುಳ್ಳಿ ಬೆಲೆ 50 ರಿಂದ 70 ಕೆಜಿ.ಗೆ
ಸಾಂಬಾರ್ ಈರುಳ್ಳಿ (ಸಣ್ಣ ಈರುಳ್ಳಿ) 240ಕೆಜಿ
(55 ರಿಂದ 100 ಏರಿಕೆಯಾಗಿ 240ಕ್ಕೆ ತಲುಪಿದೆ.)


ಉತ್ಪಾದನೆಯ ಕೊರತೆ ಉಂಟಾಗಿ ಈರುಳ್ಳಿ ಗಗನಕ್ಕೆ ಏರಿವೆ ಇದೆ ರೀತಿ ಇನ್ನು ಉತ್ಪಾದನಾ ಮಟ್ಟ ಕಡಿಮೆಯಾದರೆ ಈರುಳ್ಳಿಗೆ ಬಂಗಾರಕ್ಕೆ ಹೋಲಿಸಬೇಕಾಗುತ್ತದೆ. ಈವರೆಗೆ ಮಹಾರಾಷ್ಟ್ರ ದಿಂದ ಈರುಳ್ಳಿ ಪೂರೈಕೆಯಾಗುತ್ತಿತ್ತು, ಆದರೆ ಕೆಲವು ವಾರಗಳಿಂದ ವಿಜಯಪುರ ಜಿಲ್ಲೆಯಿಂದ ಈರುಳ್ಳಿ ಬರುತ್ತಿದೆ. ಹಾಗಾಗಿ ಈರುಳ್ಳಿ ದರ 70ಕ್ಕೆ ಇದೆ.
ರಾಜ್ಯದಲ್ಲಿ ಶೇ.60 ಈರುಳ್ಳಿ ಮಹಾರಾಷ್ಟ್ರ ಮತ್ತು ಶೇ 40 ಈರುಳ್ಳಿ ವಿಜಯಪುರಿಂದ ಪೂರೈಕೆಯಾಗುತ್ತಿವೆ.
2026-27 ರ ಮುಂಗಾರು ಹಂಗಾಮಿನಲ್ಲಿ ರಾಜ್ಯದ ಒಟ್ಟು 1.54 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬಿತ್ತನೆಯಗಿತ್ತು ಆದರೆ, ಸುಮಾರು 1.28 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟ ಸಂಭವಿಸಿದೆ.
ಮುಂದೆ ಈರುಳ್ಳಿ ದರ ಇನ್ನು ಏರಿಕೆಯಾಗುತ್ತ ಅಥವಾ ಇನ್ನು ದರ ಇಳಿಯುತ್ತಾ ಎಂಬುದು ಕುತುಹಲವಾಗಿದೆ. ಇನ್ನು ಈರುಳ್ಳಿ ಲಿಸ್ಟ್ ಲ್ಲಿ ಬೇರೆ ತರಕಾರಿ ಸೇರಬಹುದಾ ಎಂಬುದು ಮುಂದಿನ ದಿನಗಳಲ್ಲಿ ತಿಳಿಯಬಹುದು.