SK Home Ad
Home ಸಿನಿ ಮಿಲ್ಸ್ ಕಿರಣ್ ಶಾಸ್ತ್ರಿ ದಿಟ್ಟ ನಿಲುವಿಗೆ ಕಿಚ್ಚನ ಚಪ್ಪಾಳೆ; ಸುದೀಪ್ ಜಾಕೆಟ್ ಜೊತೆ ₹1 ಲಕ್ಷ ಬಂಪರ್...

ಕಿರಣ್ ಶಾಸ್ತ್ರಿ ದಿಟ್ಟ ನಿಲುವಿಗೆ ಕಿಚ್ಚನ ಚಪ್ಪಾಳೆ; ಸುದೀಪ್ ಜಾಕೆಟ್ ಜೊತೆ ₹1 ಲಕ್ಷ ಬಂಪರ್ ಗಿಫ್ಟ್!

0
7

BBK13: ‘ಬಿಗ್ ಬಾಸ್ ಕನ್ನಡ ಸೀಸನ್-13’ರ ಹತ್ತನೇ ವಾರದ ಕಿಚ್ಚನ ಪಂಚಾಯಿತಿಯಲ್ಲಿ ಸ್ಪರ್ಧಿ ಕಿರಣ್ ಶಾಸ್ತ್ರಿ ತಮ್ಮ ದಿಟ್ಟ ನಿಲುವಿನಿಂದ ನಿರೂಪಕ ಕಿಚ್ಚ ಸುದೀಪ್ ಅವರ ಮನಗೆದ್ದಿದ್ದಾರೆ. ಗಗನ್ ಚಿನ್ನಪ್ಪ ಜೊತೆಗೆ ಕಿರಣ್ ಅವರಿಗೂ ‘ಕಿಚ್ಚನ ಚಪ್ಪಾಳೆ’ ಲಭಿಸಿದ್ದು, ವಿಶೇಷವಾಗಿ ಸುದೀಪ್ ಅವರ ಜಾಕೆಟ್ ಹಾಗೂ ₹1 ಲಕ್ಷ ನಗದು ಬಹುಮಾನವನ್ನು ಪಡೆದು ಮಿಂಚಿದ್ದಾರೆ.

ಲಕ್ಸುರಿ ಬಜೆಟ್ ಟಾಸ್ಕ್‌ನಲ್ಲಿ ನಡೆದ ನಿಯಮ ಉಲ್ಲಂಘನೆ ಮತ್ತು ನಂತರದ ಗೊಂದಲ ಈ ಬೆಳವಣಿಗೆಗೆ ಕಾರಣವಾಯಿತು. ಉಸ್ತುವಾರಿ ವಹಿಸಿದ್ದ ಮಹಾರಾಣಿ ಗಾನವಿ ಗೌಡ ಫಲಿತಾಂಶ ಘೋಷಿಸುವಲ್ಲಿ ಎಡವಿದ್ದು ಮನೆಯಲ್ಲಿ ಜಗಳಕ್ಕೆ ದಾರಿ ಮಾಡಿಕೊಟ್ಟಿತ್ತು. ಈ ವೇಳೆ ಧ್ವನಿ ಎತ್ತಿದ ಕಿರಣ್ ಶಾಸ್ತ್ರಿ, ಯುವರಾಣಿಯರಾಗಿದ್ದ ಆಸಿಯಾ, ಸೌಂದರ್ಯ ಹಾಗೂ ಮಹಾರಾಣಿ ಗಾನವಿ ಮೂವರಿಗೂ ‘ಕಳಪೆ’ ಪಟ್ಟ ನೀಡಿ ಜೈಲಿಗೆ ಕಳುಹಿಸಲೇಬೇಕು ಎಂದು ಪಟ್ಟು ಹಿಡಿದರು.

ಮನೆಯ ಒತ್ತಡಕ್ಕೆ ಮಣಿಯದೆ ಸೂಕ್ತ ಕಾರಣಗಳೊಂದಿಗೆ ಇತರ ಸ್ಪರ್ಧಿಗಳ ಮನವೊಲಿಸಿದ ಕಿರಣ್, ತಮ್ಮ ನಿಲುವಿನಿಂದಾಗಿ ಬಿಗ್ ಬಾಸ್ ಮನೆಯ ನಿರ್ಧಾರವನ್ನೇ ಬದಲಿಸುವಲ್ಲಿ ಯಶಸ್ವಿಯಾದರು. ಆಸಿಯಾ ಕೂಡ ಇದಕ್ಕೆ ಸಮ್ಮತಿ ಸೂಚಿಸಿದ್ದರಿಂದ ಮೂವರು ಜೈಲು ಸೇರಬೇಕಾಯಿತು.

ವಯಸ್ಸಿನಲ್ಲಿ ಕಿರಿಯರಾದರೂ ತಿಳುವಳಿಕೆಯಲ್ಲಿ ಎಲ್ಲರಿಗಿಂತ ಮುಂದಿರುವ ಕಿರಣ್, ಏಕಾಂಗಿಯಾಗಿ ನಿಂತು ಸ್ಟ್ಯಾಂಡ್ ತೆಗೆದುಕೊಂಡಿದ್ದನ್ನು ಸುದೀಪ್ ಶ್ಲಾಘಿಸಿದರು. ಈ ಸಾಧನೆಗಾಗಿ ಸೀಸನ್-12ರ ಗ್ರ್ಯಾಂಡ್ ಓಪನಿಂಗ್‌ನಲ್ಲಿ ತಾವು ಧರಿಸಿದ್ದ ವಿಶೇಷ ಜಾಕೆಟ್, ₹1 ಲಕ್ಷ ಬಹುಮಾನ ಹಾಗೂ ಫೋಟೋ ಫ್ರೇಮ್ ಉಡುಗೊರೆಯಾಗಿ ನೀಡಿ ಗೌರವಿಸಿದರು.