SK Home Ad
Home ಸಿನಿ ಮಿಲ್ಸ್ ಬಿಗ್ ಬಾಸ್ ಮನೆ ಮಗಳು ಐಶ್ವರ್ಯಾ ನಿಶ್ಚಿತಾರ್ಥ: ತಂದೆ, ತಾಯಿ ಸ್ಥಾನದಲ್ಲಿ ನಿಂತ ಡಾಲಿ ರಾಜೇಶ್...

ಬಿಗ್ ಬಾಸ್ ಮನೆ ಮಗಳು ಐಶ್ವರ್ಯಾ ನಿಶ್ಚಿತಾರ್ಥ: ತಂದೆ, ತಾಯಿ ಸ್ಥಾನದಲ್ಲಿ ನಿಂತ ಡಾಲಿ ರಾಜೇಶ್ ದಂಪತಿ ಯಾರು ಗೊತ್ತಾ?

0
8

‘ಬಿಗ್ ಬಾಸ್ ಕನ್ನಡ ಸೀಸನ್ 11’ರ ಮೂಲಕ ಕನ್ನಡಿಗರ ಮನೆಮಾತಾಗಿದ್ದ ಜನಪ್ರಿಯ ಕಿರುತೆರೆ ಕಲಾವಿದರಾದ ಶಿಶಿರ್ ಶಾಸ್ತ್ರಿ ಹಾಗೂ ಐಶ್ವರ್ಯ ಸಿಂಧೋಗಿ ಇದೀಗ ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ತಮ್ಮ ಹೊಸ ಜೀವನದತ್ತ ಮೊದಲ ಹೆಜ್ಜೆ ಇಟ್ಟಿದ್ದು, ಅಭಿಮಾನಿ ವಲಯದಲ್ಲಿ ಸಂಭ್ರಮ ಮನೆಮಾಡಿದೆ.

ಬಿಗ್‌ ಬಾಸ್‌ ಮನೆಯ ಮೂಲಕ ಆರಂಭವಾದ ಐಶ್ವರ್ಯ ಸಿಂಧೋಗಿ ಮತ್ತು ಶಿಶಿರ್ ಶಾಸ್ತ್ರಿ ಸ್ನೇಹ ಪ್ರೀತಿಯಾಗಿ ರೂಪಗೊಂಡಿ ಇಂದು ತಮ್ಮ ಹೊಸ ಜೀವನಕ್ಕೆ ಕಾಲಿಡುತ್ತಿದ್ದಾರೆ.  ಅಷ್ಟಕ್ಕೂ ಬಿಗ್​ಬಾಸ್​​ ವೀಕ್ಷಕರಿಗೆ ತಿಳಿದಿರುವಂತೆ, ಐಶ್ವರ್ಯಾ ಸಿಂಧೋಗಿ ಅವರಿಗೆ ಅಮ್ಮ-ಅಪ್ಪ ಇಲ್ಲ.

ಇಬ್ಬರು ಕೂಡ ಎರಡು ವರ್ಷಗಳ ಅಂತರದಲ್ಲಿ ಸಾವನ್ನಪ್ಪಿದ್ದಾರೆ. 2018ರಲ್ಲಿ ಐಶ್ವರ್ಯಾ ತಂದೆ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ನಂತರ 2020ರಲ್ಲಿ ಬಹುಅಂಗಾಂಗ ವೈಫಲ್ಯದಿಂದ ಐಶ್ವರ್ಯಾ ಅವರ ತಾಯಿ ಕೂಡ ಸಾವನ್ನಪ್ಪಿದ್ದರು. ಬಳಿಕ ಒಬ್ಬಂಟಿಯಾಗಿ ನಟನಾ ಲೋಕದಲ್ಲಿ ಮಿಂಚುತ್ತಿದ್ದಾರೆ ಐಶ್ವರ್ಯ. ಇದೇ ಕಾರಣಕ್ಕೆ ಬಿಗ್​ಬಾಸ್​ನಲ್ಲಿ ಕೂಡ ಐಶ್ವರ್ಯ ಅವರನ್ನು ಕಿಚ್ಚ ಸುದೀಪ್​ ಅವರು ಮನೆ ಮಗಳು ಎಂದು ಹೇಳಿ ಆಶೀರ್ವಾದ ಮಾಡಿ ಬೀಳ್ಕೊಟ್ಟಿದ್ದರು.

ಮದುವೆಯ ಸಂದರ್ಭದಲ್ಲಿ ಅಪ್ಪ-ಅಮ್ಮ ಮಗಳನ್ನು ಕನ್ಯಾದಾನ ಮಾಡಬೇಕು. ಆದರೆ ಈ ಸುಂದರ ಕ್ಷಣವನ್ನು ಐಶ್ವರ್ಯ ಮಿಸ್​ ಮಾಡಿಕೊಳ್ಳುತ್ತಿದ್ದು, ಡಾಲಿ ರಾಜೇಶ್​ ದಂಪತಿ  ಮುಂದೆ ನಿಂತು  ಮಗಳನ್ನು ಕನ್ಯಾದಾನ ಮಾಡುತ್ತಾರೆ.

ಆಮಂತ್ರಣ ಪತ್ರಿಕೆ ಕೊಡುವಾಗ ರಾಜೇಶ್​ ಅವರು, ನಮ್ಮ ಮಗು ಒಳ್ಳೆಯ ಮನೆ ಸೇರಿದ್ದು, ಒಳ್ಳೆಯವನ ಕೈ ಸೇರಿದೆ. ಅದಕ್ಕಿಂತ ಹೆಚ್ಚು ಏನು ಹೇಳಬೇಕು ಎಂದು ತಿಳಿಯುತ್ತಿಲ್ಲ. ಅದು ನನ್ನ ಭಾಗ್ಯ ಎಂದಿದ್ದಾರೆ.  

ತಂದೆ –ತಾಯಿ ಇಲ್ಲದ ಐಶ್ವರ್ಯ ಸಿಂಧೋಗಿ ಅವರಿಗೆ  ಸಿಲ್ಲಿ ಲಲ್ಲಿ ಧಾರವಾಹಿಯ ಇನ್ಸಪೆಕ್ಟರ್‌  ಪಾತ್ರ ನಿರ್ವಹಿಸುತ್ತಿದ್ದು ಅದರಲ್ಲಿ “ಏ ಸುವರಕ್ಕೆ ಬಚ್ಚೆ “ ಎಂಬ ಡೈಲಾಗ್‌ ನಿಂದ ಜನಪ್ರಿರಾಗಿದ್ದ    ಕನ್ನಡ ಕಿರುತೆರೆ ಮತ್ತು ಚಿತ್ರರಂಗದ ನಟ ರಾಜೇಶ್  ದಂಪತಿ ತಂದೆ ತಾಯಿ ಸ್ಥಾನದಲ್ಲಿ ನಿಂತು ಮದ್ವೆ ಮಾಡಿಸ್ತಿದ್ದಾರೆ.