SK Home Ad
Home ಸಿನಿ ಮಿಲ್ಸ್ ಬಿಗ್ ಬಾಸ್ 13 ಮನೆಗೆ ‘ಕಿಚ್ಚಾಸ್ ಕಿಂಗ್ಸ್ ಬೆಂಗಳೂರು’ ರೇಸ್ ಕಾರು ಎಂಟ್ರಿ; ಸ್ಪರ್ಧಿಗಳಿಂದ ಆಲ್...

ಬಿಗ್ ಬಾಸ್ 13 ಮನೆಗೆ ‘ಕಿಚ್ಚಾಸ್ ಕಿಂಗ್ಸ್ ಬೆಂಗಳೂರು’ ರೇಸ್ ಕಾರು ಎಂಟ್ರಿ; ಸ್ಪರ್ಧಿಗಳಿಂದ ಆಲ್ ದಿ ಬೆಸ್ಟ್!

0
3

BBK13: ‘ಬಿಗ್ ಬಾಸ್ ಕನ್ನಡ ಸೀಸನ್-13’ರ ದೊಡ್ಮನೆಗೆ ವಿಶೇಷ ಅತಿಥಿಯಾಗಿ ಮೋಟಾರ್ ಸ್ಪೋರ್ಟ್ಸ್ ರೇಸ್ ಕಾರು ಎಂಟ್ರಿ ಕೊಟ್ಟಿದ್ದು, ಮನೆಮಂದಿಯ ಗಮನ ಸೆಳೆದಿದೆ. ಕಿಚ್ಚ ಸುದೀಪ್ ಅವರ ಒಡೆತನದ ‘ಕಿಚ್ಚಾಸ್ ಕಿಂಗ್ಸ್ ಬೆಂಗಳೂರು’ ತಂಡಕ್ಕೆ ಸೇರಿದ, ಇಂಡಿಯನ್ ರೇಸಿಂಗ್ ಲೀಗ್‌ನಲ್ಲಿ ಬಳಸುವ ‘ವುಲ್ಫ್ ಜಿಬಿ08 ಥಂಡರ್’ ಮಾದರಿಯ ಸಿಂಗಲ್-ಸೀಟರ್ ರೇಸ್ ಕಾರನ್ನು ಕಂಡು ಸ್ಪರ್ಧಿಗಳು ಸಂತಸ ವ್ಯಕ್ತಪಡಿಸಿದ್ದಾರೆ.

ಕಾರಿನ ವಿಶೇಷ ವಿನ್ಯಾಸ ಮತ್ತು ವೇಗದ ಸಾಮರ್ಥ್ಯದ ಬಗ್ಗೆ ಮಾಹಿತಿ ಪಡೆದ ಮನೆಯ ಸದಸ್ಯರು, ಕಾರಿನ ಸುತ್ತ ಸೇರಿ ಸಂಭ್ರಮಿಸಿದ್ದಾರೆ. ಈ ವೇಳೆ ಎಲ್ಲಾ ಸ್ಪರ್ಧಿಗಳು ಒಟ್ಟಾಗಿ ಸುದೀಪ್ ಅವರ ತಂಡಕ್ಕೆ ಶುಭ ಹಾರೈಸಿದ್ದಾರೆ.

ಕಿಚ್ಚ ಸುದೀಪ್ ಮತ್ತು ಪ್ರಿಯಾ ಸುದೀಪ್ ಮಾಲೀಕತ್ವದ ಈ ತಂಡವನ್ನು ಜುಲೈ 2025ರಲ್ಲಿ ಅನಾವರಣಗೊಳಿಸಲಾಗಿತ್ತು. ಇಂಡಿಯನ್ ರೇಸಿಂಗ್ ಫೆಸ್ಟಿವಲ್ ಅಡಿಯಲ್ಲಿ ಬರುವ ‘ಕಿಚ್ಚಾಸ್ ಕಿಂಗ್ಸ್ ಬೆಂಗಳೂರು’ ತಂಡವು ನವೆಂಬರ್ 28 ಮತ್ತು 29ರಂದು ಗ್ರೇಟರ್ ನೋಯ್ಡಾದ ಬುದ್ಧ ಇಂಟರ್‌ನ್ಯಾಷನಲ್ ಸರ್ಕ್ಯೂಟ್‌ನಲ್ಲಿ ನಡೆಯಲಿರುವ ರೇಸ್‌ನಲ್ಲಿ ಪಾಲ್ಗೊಳ್ಳಲಿದೆ.

ಇದರ ಬೆನ್ನಲ್ಲೇ ಡಿಸೆಂಬರ್ 5 ಮತ್ತು 6ರಂದು ನವಿ ಮುಂಬೈನಲ್ಲಿ ನಡೆಯಲಿರುವ ಸ್ಟ್ರೀಟ್ ಸರ್ಕ್ಯೂಟ್ ನೈಟ್ ರೇಸ್‌ನಲ್ಲೂ ತಂಡ ಕಣಕ್ಕಿಳಿಯಲಿದೆ. ಸಿನಿಮಾ, ಕ್ರಿಕೆಟ್ ಜೊತೆಗೆ ಮೋಟಾರ್ ಸ್ಪೋರ್ಟ್ಸ್‌ನಲ್ಲೂ ತೊಡಗಿಸಿಕೊಂಡಿರುವ ಸುದೀಪ್, ಬಿಗ್ ಬಾಸ್ ಮೂಲಕ ತಮ್ಮ ತಂಡಕ್ಕೆ ನೀಡಿರುವ ಪ್ರಚಾರ ವೀಕ್ಷಕರಲ್ಲಿ ಕುತೂಹಲ ಮೂಡಿಸಿದೆ.