SK Home Ad
Home ನಮ್ಮ ಜಿಲ್ಲೆ ಉತ್ತರ ಕನ್ನಡ ದಾಂಡೇಲಿ ರೈಲ್ವೆ ಅಂಡರ್ ಬ್ರೀಡ್ಚ್ ಕಾಮಗಾರಿ: ಮಣ್ಣು ಕುಸಿದು ಓರ್ವ ಸಾವು

ದಾಂಡೇಲಿ ರೈಲ್ವೆ ಅಂಡರ್ ಬ್ರೀಡ್ಚ್ ಕಾಮಗಾರಿ: ಮಣ್ಣು ಕುಸಿದು ಓರ್ವ ಸಾವು

0
3

ದಾಂಡೇಲಿ (ಉತ್ತರಕನ್ನಡ) ಸಂ.ಕ. ಸಮಾಚಾರ : ರೇಲ್ವೆಅಂಡರ್‌ಬ್ರಿಡ್ಜ್ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದ ವೇಳೆ ಏಕಾಏಕಿ ಮಣ್ಣು ಕುಸಿದು ರೈಲ್ವೆ ಇಲಾಖೆಯ ತಾಂತ್ರಿಕ ಸಿಬ್ಬಂದಿಯೊಬ್ಬರು ಮಣ್ಣಿನಡಿ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೊಬ್ಬ ಹಿರಿಯ ರೈಲ್ವೆ ಅಧಿಕಾರಿ ಗಾಯಗೊಂಡಿರುವ ದಾರುಣ ಘಟನೆ ಗುರುವಾರ ರಾತ್ರಿ ದಾಂಡೇಲಿ ತಾಲೂಕಿನ ಬರ್ಚಿ–ಕರ್ಕಾ ರಸ್ತೆಯ ಬೇಡರ ಶಿರಗೂರು ಸಮೀಪ ಸಂಭವಿಸಿದೆ.

ಅಳ್ನಾವರ–ಅಂಬೇವಾಡಿ ರೈಲ್ವೆ ಸೆಕ್ಷನ್ ವ್ಯಾಪ್ತಿಯ ಎಲ್‌ಸಿ ನಂ. 11ರಲ್ಲಿ ಕರ್ಕಾ–ಬರ್ಚಿ ರೈಲ್ವೆ ಮಾರ್ಗದ ಅಂಡರ್‌ಬ್ರಿಡ್ಜ್ ಕಾಮಗಾರಿ ಪ್ರಗತಿಯಲ್ಲಿತ್ತು. ಈ ವೇಳೆ ಕಾಮಗಾರಿಗಾಗಿ ತೆರವುಗೊಳಿಸಲಾಗಿದ್ದ ಮಣ್ಣು ಏಕಾಏಕಿ ಕುಸಿದು ಸ್ಥಳದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಿಬ್ಬಂದಿಯ ಮೇಲೆ ಬಿದ್ದಿದೆ. ಪರಿಣಾಮ, ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಜಾಲವಾಡಗಿ ಗ್ರಾಮದ ನಿವಾಸಿ, ರೈಲ್ವೆ ಇಲಾಖೆಯ ಟೆಕ್ನಿಷಿಯನ್ ಮಹೇಶ ಶೇಖಪ್ಪ ತಳವಾರ (33) ಮಣ್ಣಿನಡಿ ಸಿಲುಕಿ ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಘಟನೆಯಲ್ಲಿ ಸ್ಥಳದಲ್ಲಿದ್ದ ರೈಲ್ವೆ ಇಲಾಖೆಯ ಹಿರಿಯ ಸೆಕ್ಷನ್ ಎಂಜಿನಿಯರ್, ಗದಗದ ರಾಜೀವ್ ಗಾಂಧಿನಗರ ನಿವಾಸಿ ಮಕ್ತುಂ ಹುಸೇನ್ ಮಹಮ್ಮದ್ ಹುಸೇನ್ ಮುಲ್ಲಾ (57) ಗಾಯಗೊಂಡಿದ್ದಾರೆ. ಗಾಯಾಳುವನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.