ಕರ್ನಾಟಕ SIR ವಿರುದ್ಧ ಪ್ರಕಾಶ್ ರಾಜ್ ಆಕ್ರೋಶ : ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಕುರಿತು ನಟ ಪ್ರಕಾಶ್ ರಾಜ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮತದಾರರಿಗೆ ಸಾಕಷ್ಟು ಸಮಯ ಮತ್ತು ಅವಕಾಶ ನೀಡದೆ ಪರಿಶೀಲನಾ ನೋಟಿಸ್‌ಗಳನ್ನು ನೀಡಲಾಗುತ್ತಿದೆ ಎಂದು ಆರೋಪಿಸಿರುವ ಅವರು, ಮುಂದಿನ ದಿನಗಳಲ್ಲಿ ನಾಗರಿಕ ಸಮಾಜದ ಭಾಗವಾಗಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಾಮಾಜಿಕ ಲೆಕ್ಕಪರಿಶೋಧನೆ ನಡೆಸುವುದಾಗಿ ಹೇಳಿದ್ದಾರೆ. ಮತದಾರರಿಗೆ ಕನಿಷ್ಠ ಆರು ತಿಂಗಳ ಕಾಲ ನೋಟಿಸ್ ನೀಡಿ ತಮ್ಮ ದಾಖಲೆಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಬೇಕು ಎಂದು ಹೇಳಿದ್ದಾರೆ. ಕೇವಲ ಒಂದು ಅಥವಾ ಎರಡು ದಿನಗಳ ಮುನ್ನ ನೋಟಿಸ್ ನೀಡುವುದರಿಂದ ಜನರಿಗೆ ಅಗತ್ಯ ದಾಖಲೆಗಳನ್ನು ಒದಗಿಸಲು ತೊಂದರೆಯಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
Roblox ಮಹತ್ವದ ಘೋಷಣೆ – ಸ್ವತಂತ್ರ ಆ್ಯಪ್‌ಗಳಾಗಿ ಆಟ ಬಿಡುಗಡೆಗೆ ಅವಕಾಶ : ಆನ್‌ಲೈನ್ ಗೇಮಿಂಗ್ ಮತ್ತು ಗೇಮ್-ಕ್ರಿಯೇಷನ್ ಪ್ಲಾಟ್‌ಫಾರ್ಮ್ Roblox, ಗೇಮ್ ರಚನೆಕಾರರಿಗೆ ಮತ್ತಷ್ಟು ದೊಡ್ಡ ಅವಕಾಶ ಕಲ್ಪಿಸುವ ಮಹತ್ವದ ಘೋಷಣೆ ಮಾಡಿದೆ. ಇನ್ನು ಮುಂದೆ ರಚನೆಕಾರರು ತಮ್ಮ Roblox ಗೇಮ್‌ಗಳನ್ನು ಕೇವಲ Roblox ಪ್ಲಾಟ್‌ಫಾರ್ಮ್‌ನೊಳಗೆ ಸೀಮಿತಗೊಳಿಸದೆ, ಮೊಬೈಲ್, PC ಮತ್ತು ಕನ್ಸೋಲ್‌ಗಳಲ್ಲಿ ಸ್ವತಂತ್ರ ಆ್ಯಪ್‌ಗಳಾಗಿ ಲಭ್ಯವಾಗುವಂತೆ ಮಾಡಲು ಸಾಧ್ಯವಾಗಲಿದೆ. ಇತ್ತಿಚೆಗೆ ನಡೆದ Roblox Developers Conferenceನಲ್ಲಿ ಈ ಹೊಸ ಯೋಜನೆಯನ್ನು ಪ್ರಕಟಿಸಲಾಗಿದೆ. ಸ್ವತಂತ್ರ ಆ್ಯಪ್‌ಗಳ ಮೂಲಕ ಗೇಮ್‌ಗಳನ್ನು ವಿತರಿಸಲು ಅಗತ್ಯವಿರುವ ತಂತ್ರಜ್ಞಾನ ಮತ್ತು ಸೇವೆಗಳನ್ನು Roblox ಒದಗಿಸಲಿದೆ. ಇದರಿಂದ Robloxನಲ್ಲಿ ಗೇಮ್ ರಚಿಸುವ ಸೃಜನಶೀಲರಿಗೆ ತಮ್ಮ ಆಟಗಳನ್ನು ಹೆಚ್ಚಿನ ಸಂಖ್ಯೆಯ ಆಟಗಾರರಿಗೆ ತಲುಪಿಸಲು ಹೊಸ ಮಾರ್ಗ ಸಿಗಲಿದೆ. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
‘ಬೇಲ್’ ಚಿತ್ರದ ‘ಕುಮಾರಿ’ ಸಾಂಗ್ ಔಟ್ – ನಿವೇದಿತಾ ಗೌಡ ಡ್ಯಾನ್ಸ್‌ಗೆ ಅಭಿಮಾನಿಗಳು ಫಿದಾ : ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅಭಿನಯದ ಬಹುನಿರೀಕ್ಷಿತ ‘ಬೇಲ್’ ಸಿನಿಮಾ ಬಿಡುಗಡೆಗೂ ಮುನ್ನವೇ ಒಂದೊಂದೇ ಅಪ್‌ಡೇಟ್‌ಗಳ ಮೂಲಕ ಸಿನಿಪ್ರಿಯರ ಗಮನ ಸೆಳೆಯುತ್ತಿದೆ. ಚಿತ್ರದ ಟೀಸರ್ ಈಗಾಗಲೇ ಕುತೂಹಲ ಮೂಡಿಸಿದ್ದು, ಇದೀಗ ‘ಕುಮಾರಿ’ ಎಂಬ ಹೊಸ ಹಾಡು ಬಿಡುಗಡೆಯಾಗಿದೆ. ‘ಕುಮಾರಿ’ ಹಾಡಿನ ವಿಶೇಷ ಆಕರ್ಷಣೆಯಾಗಿ ಬಿಗ್‌ಬಾಸ್ ಖ್ಯಾತಿಯ ನಿವೇದಿತಾ ಗೌಡ ಕಾಣಿಸಿಕೊಂಡಿದ್ದಾರೆ. ಹಾಡಿನಲ್ಲಿ ಅವರು ಗ್ಲಾಮರಸ್ ಲುಕ್‌ನಲ್ಲಿ ಹೆಜ್ಜೆ ಹಾಕಿದ್ದು, ಅವರ ಡ್ಯಾನ್ಸ್ ಹಾಗೂ ಸ್ಕ್ರೀನ್ ಪ್ರೆಸೆನ್ಸ್ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ‘ಲೂಸ್ ಮಾದ’ ಯೋಗಿ ಕೂಡ ಹಾಡಿನಲ್ಲಿ ಕಾಣಿಸಿಕೊಂಡಿರುವುದು ಮತ್ತೊಂದು ವಿಶೇಷವಾಗಿದೆ. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಜಾಸೇವೆಗೆ ಬಂದರು – ಬರಿಗೈಲಿ ಮರಳಿದರು! : ಜನರ ಸಮಸ್ಯೆಗಳನ್ನು ನೇರವಾಗಿ ಆಲಿಸಿ, ಸರ್ಕಾರಿ ಸೌಲಭ್ಯಗಳನ್ನು ಜನರ ಬಳಿಗೆ ತಲುಪಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಜಾರಿಗೆ ತಂದಿರುವ ‘ಪ್ರಜಾಸೇವೆ’ ಕಾರ್ಯಕ್ರಮದ ಕುರಿತು ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನಲ್ಲಿ ಗೊಂದಲ ಉಂಟಾಗಿ, ನೂರಾರು ಸಾರ್ವಜನಿಕರು ಪರದಾಡಿದ ಘಟನೆ ನಡೆದಿದೆ. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
BRICSನಲ್ಲಿ ಮೋದಿ ಮಹತ್ವದ ಕರೆ – ಜಾಗತಿಕ ಆಡಳಿತದ ಪಿರಮಿಡ್ ಬದಲಾಗಬೇಕು : ಬ್ರಿಕ್ಸ್ ಅನ್ನು ಮತ್ತಷ್ಟು ಬಲಪಡಿಸುವುದರ ಜತೆಗೆ ಜಾಗತಿಕ ಆಡಳಿತ ವ್ಯವಸ್ಥೆಯಲ್ಲೂ ಅಗತ್ಯವಾದ ಸುಧಾರಣೆಗಳನ್ನು ತರಲು ದಾರಿ ರೂಪಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ನವದೆಹಲಿಯಲ್ಲಿ ನಡೆಯುತ್ತಿರುವ 18ನೇ BRICS ಶೃಂಗಸಭೆಯ ಸಂದರ್ಭದಲ್ಲಿ ಮಾತನಾಡಿದ ಅವರು, ಇಂದಿನ ಜಾಗತಿಕ ಆಡಳಿತ ವ್ಯವಸ್ಥೆಯ ಸ್ವರೂಪದ ಕುರಿತು ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಜಾಗತಿಕ ಆಡಳಿತದ ಪ್ರಸ್ತುತ ರಚನೆಯನ್ನು ಪಿರಮಿಡ್‌ಗೆ ಹೋಲಿಸಿದ ಪ್ರಧಾನಿ ಮೋದಿ, ಅಧಿಕಾರ ಮತ್ತು ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆ ಮೇಲ್ಭಾಗದಲ್ಲಿ ಹೆಚ್ಚು ಕೇಂದ್ರೀಕೃತವಾಗಿದೆ ಎಂದು ಹೇಳಿದರು. ಆದರೆ, ಆ ನಿರ್ಧಾರಗಳಿಂದ ಪರಿಣಾಮಕ್ಕೊಳಗಾಗುವ ಹಲವು ರಾಷ್ಟ್ರಗಳು ಕೆಳ ಹಂತದಲ್ಲಿದ್ದು, ನಿರ್ಧಾರಗಳನ್ನು ರೂಪಿಸುವ ಪ್ರಕ್ರಿಯೆಯಲ್ಲಿ ಅವುಗಳ ಪಾತ್ರ ಸೀಮಿತವಾಗಿದೆ ಎಂದು ಅವರು ವಿವರಿಸಿದರು. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
BRICS ಶೃಂಗಸಭೆಯಲ್ಲಿ ಮೋದಿ–ಯುಎಇ ಕ್ರೌನ್ ಪ್ರಿನ್ಸ್ ಭೇಟಿ : 18ನೇ BRICS ಶೃಂಗಸಭೆಯ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸೆಪ್ಟೆಂಬರ್ 12ರಂದು ಅಬುಧಾಬಿಯ ಕ್ರೌನ್ ಪ್ರಿನ್ಸ್ ಶೇಖ್ ಖಾಲಿದ್ ಬಿನ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರನ್ನು ಭೇಟಿಯಾಗಿ ಭಾರತ–ಯುಎಇ ದ್ವಿಪಕ್ಷೀಯ ಸಂಬಂಧಗಳ ಕುರಿತು ಮಹತ್ವದ ಮಾತುಕತೆ ನಡೆಸಿದರು. ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರ ಪರವಾಗಿ ಶೇಖ್ ಖಾಲಿದ್ ಅವರು ನವದೆಹಲಿಯಲ್ಲಿ ನಡೆಯುತ್ತಿರುವ 18ನೇ BRICS ಶೃಂಗಸಭೆಯಲ್ಲಿ ಯುಎಇ ನಿಯೋಗವನ್ನು ಮುನ್ನಡೆಸುತ್ತಿದ್ದಾರೆ. ಭಾರತ ಮತ್ತು ಯುಎಇ ನಡುವಿನ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆ ಹಲವು ಕ್ಷೇತ್ರಗಳಲ್ಲಿ ವೇಗವಾಗಿ ವಿಸ್ತರಿಸುತ್ತಿರುವುದನ್ನು ಉಭಯ ನಾಯಕರು ಗಮನಿಸಿದರು. ರಾಜಕೀಯ, ವಾಣಿಜ್ಯ, ಇಂಧನ, ಸಂಸ್ಕೃತಿ ಹಾಗೂ ಜನರಿಂದ ಜನರ ನಡುವಿನ ಸಂಪರ್ಕ ಸೇರಿದಂತೆ ವಿವಿಧ ಕ್ಷೇತ್ರಗಳ ಸಹಕಾರವನ್ನು ಮತ್ತಷ್ಟು ಬಲಪಡಿಸುವ ಅಗತ್ಯದ ಬಗ್ಗೆ ಚರ್ಚಿಸಿದರು. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
ಬಳ್ಳಾರಿ ಚಲೋಗೆ ನಾಗೇಂದ್ರ ತಿರುಗೇಟು – ಕಾಂಗ್ರೆಸ್‌ನಿಂದ ಶೀಘ್ರ ಕೌಂಟರ್ ಸಮಾವೇಶ : ಬಿಜೆಪಿಯ ‘ಬಳ್ಳಾರಿ ಚಲೋ’ ಪಾದಯಾತ್ರೆ ಹಾಗೂ ಸಮಾವೇಶದ ಕುರಿತು ಮಾಜಿ ಸಚಿವ ಬಿ. ನಾಗೇಂದ್ರ ವ್ಯಂಗ್ಯವಾಡಿದ್ದು, ಬಿಜೆಪಿಯವರಿಗೆ ಯಾವುದೇ ಪ್ರಮುಖ ವಿಷಯವಿಲ್ಲದ ಕಾರಣ ಪಾದಯಾತ್ರೆ ನಡೆಸಿದ್ದಾರೆ ಎಂದು ಟೀಕಿಸಿದ್ದಾರೆ. ‘ಬಿಜೆಪಿ ನಾಯಕರಿಗೆ ಮನೆಯಲ್ಲಿ ನಡೆಯಲು ಸಮಯವಿರಲಿಲ್ಲ. ಕೊಬ್ಬು, ಕೊಲೆಸ್ಟ್ರಾಲ್ ಮತ್ತು ಫ್ಯಾಟ್ ಕಡಿಮೆ ಮಾಡಿಕೊಳ್ಳಲು ಪಾದಯಾತ್ರೆ ಮಾಡಿದ್ದಾರೆ’ ಎಂದು ಲೇವಡಿ ಮಾಡಿದರು. ಪಾದಯಾತ್ರೆಯಿಂದ ಒಬ್ಬರು ಐದು ಕೆ.ಜಿ. ತೂಕ ಇಳಿಸಿಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದ ಅವರು, ಬಿಜೆಪಿಗೆ ಹೆದರಿ ತಾವು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದ ನಾಗೇಂದ್ರ, ಕಾಂಗ್ರೆಸ್ ಪಕ್ಷಕ್ಕೆ ಮುಜುಗರವಾಗಬಾರದು ಎಂಬ ಕಾರಣಕ್ಕೆ ರಾಜೀನಾಮೆ ನೀಡಿದ್ದಾಗಿ ಹೇಳಿದರು. ಬಿಜೆಪಿಯಲ್ಲಿನ ಕೆಟ್ಟತನವನ್ನು ತೊಳೆದುಹಾಕಲು ಪಾದಯಾತ್ರೆ ನಡೆಸಿದ್ದಾರೆ ಎಂದು ಟೀಕಿಸಿದರು. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
ವಿಶ್ವ ಮಾರುಕಟ್ಟೆಯಲ್ಲಿ ಭಾರತದ ಕೃಷಿ ಶಕ್ತಿ – ರಫ್ತು ಹೆಚ್ಚಿಸಲು FTAಗಳ ಮೇಲೆ ಕೇಂದ್ರದ ಒತ್ತು : ರತದ ಕೃಷಿ ಮತ್ತು ಆಹಾರ ಉತ್ಪನ್ನಗಳ ರಫ್ತು ಕ್ಷೇತ್ರವು ಜಾಗತಿಕ ಮಾರುಕಟ್ಟೆಯಲ್ಲಿ ಮತ್ತಷ್ಟು ವಿಸ್ತರಿಸುವತ್ತ ಸಾಗುತ್ತಿದೆ. ಕೇಂದ್ರ ಸರ್ಕಾರದ ಇತ್ತೀಚಿನ ಮಾಹಿತಿಯ ಪ್ರಕಾರ, 2025-26ನೇ ಹಣಕಾಸು ವರ್ಷದಲ್ಲಿ ಭಾರತದ ಕೃಷಿ ರಫ್ತು USD 52.55 ಶತಕೋಟಿಗೆ ಏರಿಕೆಯಾಗಿದೆ. ಹಿಂದಿನ ಹಣಕಾಸು ವರ್ಷದಲ್ಲಿ ಇದು USD 51.12 ಶತಕೋಟಿಯಾಗಿದ್ದು, ಸುಮಾರು ಶೇ.2.8ರಷ್ಟು ಬೆಳವಣಿಗೆ ದಾಖಲಾಗಿದೆ. ಭಾರತವು ಈಗಾಗಲೇ ವಿಶ್ವದ ಪ್ರಮುಖ ಕೃಷಿ ಉತ್ಪನ್ನ ರಫ್ತುದಾರ ರಾಷ್ಟ್ರಗಳ ಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ. ಅಕ್ಕಿ, ಸಮುದ್ರ ಉತ್ಪನ್ನಗಳು, ಮಸಾಲೆಗಳು, ಸಂಸ್ಕರಿಸಿದ ಆಹಾರ ಸೇರಿದಂತೆ ಹಲವು ಉತ್ಪನ್ನಗಳಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರತದ ಬೇಡಿಕೆ ಹೆಚ್ಚುತ್ತಿದೆ. 2025-26ರಲ್ಲಿ ಅಕ್ಕಿ ರಫ್ತು ಸುಮಾರು USD 11.5 ಶತಕೋಟಿ, ಸಮುದ್ರ ಉತ್ಪನ್ನಗಳ ರಫ್ತು USD 8.4 ಶತಕೋಟಿ ಮತ್ತು ಮಸಾಲೆಗಳ ರಫ್ತು USD 4.3 ಶತಕೋಟಿಗೆ ತಲುಪಿದೆ. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
BRICS 2026 – ಜಗತ್ತಿನ ಮುಂದೆ ಭಾರತದ 37 ಡೀಪ್‌ಟೆಕ್ ಆವಿಷ್ಕಾರಗಳ ಅನಾವರಣ : BRICS 2026ರಲ್ಲಿ ‘Bharat Innovates’ ಪ್ರದರ್ಶನದ ಮೂಲಕ ಭಾರತದ 37 ಡೀಪ್‌ಟೆಕ್ ಆವಿಷ್ಕಾರಗಳು ಜಾಗತಿಕ ವೇದಿಕೆಯಲ್ಲಿ ಅನಾವರಣಗೊಂಡಿವೆ. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
6 ವರ್ಷಗಳ ಬಳಿಕ ಭಾರತ–ಚೀನಾ ನಡುವೆ ಮತ್ತೆ ನೇರ ವಿಮಾನ ಸಂಪರ್ಕ : ಭಾರತ ಮತ್ತು ಚೀನಾ ನಡುವಿನ ನೇರ ವಿಮಾನ ಸಂಪರ್ಕ ಮತ್ತಷ್ಟು ಬಲಗೊಳ್ಳುವ ಸೂಚನೆ ದೊರೆತಿದೆ. ಚೀನಾದ ಪ್ರಮುಖ ವಿಮಾನಯಾನ ಸಂಸ್ಥೆ China Southern Airlines ಸುಮಾರು ಆರು ವರ್ಷಗಳ ಬಳಿಕ ಗುವಾಂಗ್‌ಝೌ–ನವದೆಹಲಿ ನೇರ ಪ್ರಯಾಣಿಕ ವಿಮಾನ ಸೇವೆಯನ್ನು ಸೆಪ್ಟೆಂಬರ್ 21, 2026ರಿಂದ ಪುನರಾರಂಭಿಸುವುದಾಗಿ ಘೋಷಿಸಿದೆ. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
FASTag ಬ್ಯಾಂಕ್ ಬದಲಾಯಿಸಲು ಇನ್ನು ಹೊಸ ಸ್ಟಿಕ್ಕರ್ ಬೇಡ: ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಮುಂಬೈನಲ್ಲಿ ನಡೆದ Global Fintech Fest 2026ರಲ್ಲಿ ‘OneTag’ FASTag ಪೋರ್ಟೆಬಿಲಿಟಿ ವ್ಯವಸ್ಥೆಗೆ ಚಾಲನೆ ನೀಡಿದ್ದಾರೆ. ಇದರ ಮೂಲಕ ವಾಹನ ಸವಾರರು FASTagನ ಭೌತಿಕ ಸ್ಟಿಕ್ಕರ್ ಬದಲಾಯಿಸದೇ, ಅದೇ ಟ್ಯಾಗ್ ಅನ್ನು ಉಳಿಸಿಕೊಂಡು ವಿತರಕ ಬ್ಯಾಂಕ್ ಬದಲಾಯಿಸಬಹುದು. ಇದುವರೆಗೆ FASTag ನೀಡಿದ ಬ್ಯಾಂಕ್ ಬದಲಾಯಿಸಬೇಕಾದರೆ ಹಳೆಯ FASTag ಮುಚ್ಚಿ, ಹೊಸ ಬ್ಯಾಂಕ್‌ನಿಂದ ಮತ್ತೊಂದು ಟ್ಯಾಗ್ ಪಡೆಯಬೇಕಾಗುತ್ತಿತ್ತು. ಇದರಿಂದ ವಿಂಡ್‌ಶೀಲ್ಡ್‌ನಲ್ಲಿದ್ದ ಹಳೆಯ ಸ್ಟಿಕ್ಕರ್ ತೆಗೆದು ಹೊಸದನ್ನು ಅಳವಡಿಸುವುದು, ಹೊಸ KYC/ಆನ್‌ಬೋರ್ಡಿಂಗ್ ಪ್ರಕ್ರಿಯೆ ನಡೆಸುವುದು ಸೇರಿದಂತೆ ಹಲವು ಹಂತಗಳಿದ್ದವು. OneTag ಮೂಲಕ ಈಗ ಈ ತೊಂದರೆ ಕಡಿಮೆಯಾಗಲಿದೆ. ವಾಹನದಲ್ಲಿರುವ ಹಳೆಯ FASTag ಸ್ಟಿಕ್ಕರ್, Tag ID ಮತ್ತು ವಾಹನ ನೋಂದಣಿ ಸಂಖ್ಯೆಯನ್ನು ಉಳಿಸಿಕೊಂಡೇ ಹೊಸ ವಿತರಕ ಬ್ಯಾಂಕ್‌ಗೆ ಪೋರ್ಟ್ ಮಾಡಿಕೊಳ್ಳಬಹುದು. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
(ಮಾಹಿತಿ ಅಪ್ಡೇಟ್ ಆಗಲಿದೆ)
ಪ್ರತಿ ಹೊಸ ಅಪ್‌ಡೇಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿರಿ 👉 ಇಂದಿನ ಪ್ರಮುಖ ಲೈವ್ ಅಪ್‌ಡೇಟ್‌ಗಳನ್ನು ‘ಸಂಯುಕ್ತ ಕರ್ನಾಟಕ’ ಜಾಲತಾಣದಲ್ಲಿ ನಿರಂತರವಾಗಿ ಓದಿರಿ.






















