ಅರಣ್ಯ ಹುತಾತ್ಮರ ದಿನ – ಕಾಡು ಉಳಿಸಲು ಪ್ರಾಣ ತ್ಯಾಗ ಮಾಡಿದವರಿಗೆ ದೇಶದ ನಮನ : ದೇಶದ ಅರಣ್ಯ, ವನ್ಯಜೀವಿ ಮತ್ತು ನೈಸರ್ಗಿಕ ಸಂಪತ್ತಿನ ರಕ್ಷಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಾ ಜೀವ ಕಳೆದುಕೊಂಡ ಅರಣ್ಯ ಸಿಬ್ಬಂದಿ, ಅರಣ್ಯ ಕಾವಲುಗಾರರು ಹಾಗೂ ಸಂರಕ್ಷಣಾ ಕಾರ್ಯಕರ್ತರನ್ನು ಸ್ಮರಿಸಲು ಭಾರತವು ಸೆಪ್ಟೆಂಬರ್ 11ರಂದು ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನವನ್ನು ಆಚರಿಸುತ್ತಿದೆ. ಅರಣ್ಯ ರಕ್ಷಣೆಯ ಕರ್ತವ್ಯದಲ್ಲಿ ಎದುರಾಗುವ ಕಾಡ್ಗಿಚ್ಚು, ಅಕ್ರಮ ಬೇಟೆ, ಮರಗಳ ಅಕ್ರಮ ಕಡಿತ ಹಾಗೂ ಇತರ ಅಪಾಯಗಳ ನಡುವೆಯೂ ಸೇವೆ ಸಲ್ಲಿಸುವ ಸಿಬ್ಬಂದಿಯ ತ್ಯಾಗವನ್ನು ಈ ದಿನ ಸ್ಮರಿಸುತ್ತದೆ. ಖೇಜರ್ಲಿಯ ಅಮೃತಾ ದೇವಿ ಬಿಷ್ಣೋಯಿ ತ್ಯಾಗದಿಂದ ಇಂದಿನ ಅರಣ್ಯ ಸಂರಕ್ಷಣೆಯವರೆಗೆ ವಿಶೇಷ ವರದಿ. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
ವಿವೇಕಾನಂದರ ಚಿಕಾಗೋ ಭಾಷಣ ಸ್ಮರಿಸಿದ ಪ್ರಧಾನಿ ಮೋದಿ : ಸೆಪ್ಟೆಂಬರ್ 11ರ ದಿನಾಂಕವು ಇತಿಹಾಸದಲ್ಲಿ ಎರಡು ವಿಭಿನ್ನ ಆದರೆ ಜಾಗತಿಕವಾಗಿ ಮಹತ್ವದ ಘಟನೆಗಳನ್ನು ನೆನಪಿಸುವ ದಿನವಾಗಿದೆ. 1893ರಲ್ಲಿ ಇದೇ ದಿನ ಅಮೆರಿಕದ ಚಿಕಾಗೋದಲ್ಲಿ ಸ್ವಾಮಿ ವಿವೇಕಾನಂದರು ವಿಶ್ವ ಧರ್ಮ ಸಂಸತ್ತಿನಲ್ಲಿ ಐತಿಹಾಸಿಕ ಭಾಷಣ ಮಾಡಿದ್ದರು. ಮತ್ತೊಂದೆಡೆ, 2001ರ ಸೆಪ್ಟೆಂಬರ್ 11ರಂದು ಅಮೆರಿಕದಲ್ಲಿ ನಡೆದ ಭಯೋತ್ಪಾದಕ ದಾಳಿ ಸಾವಿರಾರು ಜೀವಗಳನ್ನು ಬಲಿ ಪಡೆದ ದುರಂತವಾಗಿ ಇತಿಹಾಸದಲ್ಲಿ ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಸ್ವಾಮಿ ವಿವೇಕಾನಂದರ ಚಿಕಾಗೋ ಭಾಷಣವನ್ನು ಸ್ಮರಿಸಿಕೊಂಡಿದ್ದಾರೆ. ಪ್ರಧಾನಿ ಮೋದಿ ತಮ್ಮ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ವಿವೇಕಾನಂದರ ಭಾಷಣದ ಪ್ರಮುಖ ಅಂಶಗಳನ್ನು ಉಲ್ಲೇಖಿಸಿ, ಸಹಿಷ್ಣುತೆ, ಸಾರ್ವತ್ರಿಕ ಸ್ವೀಕಾರ, ಧಾರ್ಮಿಕ ಸಾಮರಸ್ಯ ಮತ್ತು ಮಾನವೀಯತೆಯ ಸಂದೇಶ ಇಂದಿಗೂ ಪ್ರಸ್ತುತವಾಗಿದೆ ಎಂಬುದನ್ನು ಒತ್ತಿಹೇಳಿದ್ದಾರೆ. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರತಿ ಹೊಸ ಅಪ್‌ಡೇಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿರಿ 👉 ಇಂದಿನ ಪ್ರಮುಖ ಲೈವ್ ಅಪ್‌ಡೇಟ್‌ಗಳನ್ನು ‘ಸಂಯುಕ್ತ ಕರ್ನಾಟಕ’ ಜಾಲತಾಣದಲ್ಲಿ ನಿರಂತರವಾಗಿ ಓದಿರಿ.
(ಮಾಹಿತಿ ಅಪ್ಡೇಟ್ ಆಗಲಿದೆ)





















