SK Home Ad
Home ನಮ್ಮ ಜಿಲ್ಲೆ ಧಾರವಾಡ ಜೈನ ಅಭಿವೃದ್ಧಿ ನಿಗಮ ಘೋಷಿಸದಿದ್ದರೆ ಹೋರಾಟ: ಗುಣಧರನಂದಿ ಶ್ರೀ ಎಚ್ಚರಿಕೆ

ಜೈನ ಅಭಿವೃದ್ಧಿ ನಿಗಮ ಘೋಷಿಸದಿದ್ದರೆ ಹೋರಾಟ: ಗುಣಧರನಂದಿ ಶ್ರೀ ಎಚ್ಚರಿಕೆ

0
1

ಹುಬ್ಬಳ್ಳಿ: ಜೈನ ಸಮುದಾಯವೂ ಕಳೆದ ಮೂರ‍್ನಾಲ್ಕು ವರ್ಷಗಳಿಂದ ಜೈನ ಸಮುದಾಯಕ್ಕೆ ಜೈನ ಅಭಿವೃದ್ಧಿ ನಿಗಮ ರಚನೆಗೆ ಒತ್ತಾಯಿಸುತ್ತಾ ಬಂದಿದೆ. 20 ದಿನದೊಳಗೆ ಜೈನ ಅಭಿವೃದ್ಧಿ ನಿಗಮ ಘೋಷಿಸಬೇಕು ಎಂದು ವರೂರು ನವಗ್ರಹ ತೀರ್ಥ ಕ್ಷೇತ್ರದ ರಾಷ್ಟ್ರಸಂತ ಆಚಾರ್ಯ ಗುಣಧರ ನಂದಿ ಮಹಾರಾಜರು ಸಚಿವರಿಗೆ ಮನವಿ ಮಾಡಿದರು.

ನವಗ್ರಹತೀರ್ಥ ಕ್ಷೇತ್ರದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ವಿಶೇಷ ಸನ್ಮಾನ ಕಾರ್ಯಕ್ರಮದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಯು.ಟಿ. ಖಾದರ್ ಅವರಿಗೆ ಒತ್ತಾಯಿಸಿದರು.

ಜೈನ್ ಅಭಿವೃದ್ಧಿ ನಿಗಮ ರಚನೆಗೆ ಸಂಬಂಧಿಸಿ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಹಾಗೂ ಜಿ. ಪರಮೇಶ್ವರ ಸೇರಿದಂತೆ ಹಲವು ನಾಯಕರಿಗೆ ಮನವಿ ಸಲ್ಲಿಸಲಾಗಿದೆ. ಎಲ್ಲರೂ ಭರವಸೆ ನೀಡಿದ್ದರೂ, ಈವರೆಗೂ ಬೇಡಿಕೆ ಈಡೇರಿಲ್ಲ. ಹೀಗಾಗಿ 20 ದಿನಗಳೊಳಗೆ ಜೈನ್ ಅಭಿವೃದ್ಧಿ ನಿಗಮ ಘೋಷಿಸದಿದ್ದರೆ ತೀವ್ರ ಹೋರಾಟ ಆರಂಭಿಸಲಾಗುವುದು ಎಂದು ಮಹಾರಾಜರು ಎಚ್ಚರಿಸಿದರು.

ಸಚಿವ ಯು.ಟಿ. ಖಾದರ್ ಮನವಿ ಸ್ವೀಕರಿಸಿ ಮಾತನಾಡಿ, ಜೈನ ಸಂಸ್ಥೆಯ ಅಭಿವೃದ್ಧಿಗೆ ಸರ್ಕಾರ ಈಗಾಗಲೇ ಸುಮಾರು 2.75 ಕೋಟಿ ಅನುದಾನ ನೀಡಿದ್ದು, ಮುಂದಿನ ದಿನಗಳಲ್ಲಿಯೂ ಅಗತ್ಯ ಸಹಕಾರ ನೀಡಲಾಗುವುದು. ಜೈನ್ ಸಮುದಾಯದ ಬೇಡಿಕೆಯಾದ ಜೈನ ಅಭಿವೃದ್ಧಿ ನಿಗಮ ಸ್ಥಾಪನೆ ಕುರಿತು ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಿ ಸಕಾರಾತ್ಮಕವಾಗಿ ಸ್ಪಂದಿಸುವಂತೆ ಪ್ರಯತ್ನಿಸುವುದಾಗಿ, ಅಲ್ಪ ಸಮಯ ಕೊಡುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಶಾಸಕರಾದ ಪ್ರಸಾದ ಅಬ್ಬಯ್ಯ, ಯಾಸೀರ್‌ಖಾನ್ ಪಠಾಣ, ಪ್ರಧಾನಮಂತ್ರಿಗಳ ಹೊಸ 15 ಅಂಶಗಳ ರಾಜ್ಯಮಟ್ಟದ ಸದಸ್ಯ ಮಹೇಂದ್ರ ಸಿಂಘಿ, ಕಾಂಗ್ರೆಸ್ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಚಂದ್ರಶೇಖರ್ ಜುಟ್ಟಲ್, ಅನಿಲಕುಮಾರ ಪಾಟೀಲ ಇತರರು ಇದ್ದರು.