SK Home Ad
Home ಸುದ್ದಿ Metaದ ಹೊಚ್ಚ ಹೊಸ ಕ್ರಾಂತಿ; ಹೊಸ AI ಏಜೆಂಟ್‌ನಿಂದ ದಿನ ನಿತ್ಯದ ಕೆಲಸಗಳನ್ನು ಮಾಡಲಿದೆ ಇನ್ನಷ್ಟು...

Metaದ ಹೊಚ್ಚ ಹೊಸ ಕ್ರಾಂತಿ; ಹೊಸ AI ಏಜೆಂಟ್‌ನಿಂದ ದಿನ ನಿತ್ಯದ ಕೆಲಸಗಳನ್ನು ಮಾಡಲಿದೆ ಇನ್ನಷ್ಟು ಸುಲಭ

0
26

Metaದ ಹೊಚ್ಚ ಹೊಸ ಕ್ರಾಂತಿ; ಹೊಸ AI ಏಜೆಂಟ್‌ನಿಂದ ದಿನ ನಿತ್ಯದ ಕೆಲಸಗಳನ್ನು ಮಾಡಲಿದೆ ಇನ್ನಷ್ಟು ಸುಲಭ

ನಮ್ಮ ದಿನನಿತ್ಯದ ಡಿಜಿಟಲ್ ಕಾರ್ಯಗಳು ಇನ್ನಷ್ಟು ಸುಲಭಗೊಳಿಸಲು Meta ಹೊಸ ಪರ್ಸನಲ್ ಆಟೋಮನಸ್ ಆರ್ಟಿಫಿಶಿಯಲ್ ಇಂಟಿಲಿಜೆಂಸ್ (AI) ಏಜೆಂಟ್ ಎಂಬ ಹೆಸರಿನ Meta Muse AI ಅನ್ನು ಪರಿಚಯಿಸಿದೆ.

ಈ AI ಬಳಕೆದಾರರ ದಿನನಿತ್ಯದ ಹಲವು ಡಿಜಿಟಲ್ ಕೆಲಸಗಳನ್ನು ಸ್ವಯಂಚಾಲಿತವಾಗಿ ನಿರ್ವಹಿಸಲು ಸಹಾಯ ಮಾಡಲಿದೆ. ಸಾಮಾನ್ಯ ಚಾಟ್‌ಬಾಟ್‌ಗಳಿಗಿಂತ ಭಿನ್ನವಾಗಿ, ಬಳಕೆದಾರರು ನೀಡುವ ಗುರಿಯನ್ನು ಅರ್ಥಮಾಡಿಕೊಂಡು ಅದರ ಭಾಗವಾದ ಹಲವು ಹಂತಗಳನ್ನು ಸ್ವತಃ ಪೂರ್ಣಗೊಳಿಸುವುದು ಇದರ ಪ್ರಮುಖ ವೈಶಿಷ್ಟ್ಯವಾಗಿದೆ.

ಈ AI ಏಜೆಂಟ್ ಇ-ಮೇಲ್ ಕಳುಹಿಸುವುದು, ಆನ್‌ಲೈನ್‌ನಲ್ಲಿ ಮಾಹಿತಿ ಹುಡುಕುವುದು, ಫಾರ್ಮ್‌ಗಳನ್ನು ಭರ್ತಿ ಮಾಡುವುದು, ಟಿಕೆಟ್ ಬುಕಿಂಗ್, ಆನಲೈನ್ ಗಾಡಿ ಮಾರಾಟಕ್ಕೆ ಲಿಸ್ಟ್ ಮಾಡುವುದು, ಸೇರಿದಂತೆ ಹಲವು ಕೆಲಸಗಳನ್ನು AI ಏಜೆಂಟ್ ನಿರ್ವಹಿಸುವ ಸಾಮರ್ಥ್ಯ ಹೊಂದಿದೆ.
Meta Muse AI ಆಪ್ ಅನ್ನು ಶುಲ್ಕ ವಿಲ್ಲದೆ ಫ್ರೀ ಆಗಿ Apple App Store ಮತ್ತು Google Play Store ಮೂಲಕ Download ಮಾಡಿ ಬಳಸಬಹುದಾಗಿದೆ.

ಮುಂದಿನ ದಿನಗಳಲ್ಲಿ ಹೆಚ್ಚಿನ ಸೇವೆಗಳು ಮತ್ತು ಸಾಧನಗಳೊಂದಿಗೆ ಸಂಪರ್ಕಿಸುವ ಸಾಧ್ಯತೆಯಿದೆ. AI ತಂತ್ರಜ್ಞಾನವನ್ನು ಕೇವಲ ಪ್ರಶ್ನೆಗಳಿಗೆ ಉತ್ತರಿಸುವುದರಿಂದ ನೈಜ ಕೆಲಸಗಳನ್ನು ನಿರ್ವಹಿಸುವ ಹಂತಕ್ಕೆ ಕೊಂಡೊಯ್ಯುವ ಪ್ರಯತ್ನವಾಗಿ ಇದನ್ನು ನೋಡಲಾಗುತ್ತಿದೆ.