SK Home Ad
Home ಸುದ್ದಿ ರಾಜ್ಯ ಕಾಶ್ಮೀರದ ಯುವ ಉದ್ಯಮಿಗೆ ಕನ್ನಡಿಗರಿಂದ ಪ್ರಶಂಸೆಗಳ ಮಹಾಪೂರ

ಕಾಶ್ಮೀರದ ಯುವ ಉದ್ಯಮಿಗೆ ಕನ್ನಡಿಗರಿಂದ ಪ್ರಶಂಸೆಗಳ ಮಹಾಪೂರ

0
60

ಹುಬ್ಬಳ್ಳಿ: ಜಮ್ಮು ಮತ್ತು ಕಾಶ್ಮೀರದ 17 ವರ್ಷದ ಯುವ ಉದ್ಯಮಿ ಕುರಿತು ಸಂಯುಕ್ತ ಕರ್ನಾಟಕದ ವೆಬ್‌ ಪೊರ್ಟಲ್‌ನಲ್ಲಿ ಪ್ರಕಟವಾದ ʻಗ್ರಾಮೀಣ ವಿದ್ಯಾರ್ಥಿಯ AI ಕ್ರಾಂತಿ: ಶಿಕ್ಷಣ ಕ್ಷೇತ್ರದಲ್ಲಿ ಹೊಸ ಸಂಚಲನ!ʼ ಸುದ್ದಿಗೆ ಓದುಗರಿಂದ ಪ್ರಶಂಸೆಗಳ ಮಹಾಪೂರವೇ ಹರಿದುಬಂದಿದೆ.

ಈ ಕುರಿತಂತೆ ಸುದ್ದಿ ಪ್ರಕಟವಾದ ಕೆಲವೇ ಗಂಟೆಗಳಲ್ಲಿ ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯ ಡೂಂಗಿ ಗ್ರಾಮದ ಯುವ ಉದ್ಯಮಿ ಇಮ್ರಾನ್ ಚೌಧರಿ, ಈ ಕುರಿತು ಸಂಯುಕ್ತ ಕರ್ನಾಟಕದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, “ಇದು ನನಗೆ ನಿಜಕ್ಕೂ ವಿಶೇಷ ಕ್ಷಣ. ಕನ್ನಡ ಭಾಷಾ ಮಾಧ್ಯಮ ವೇದಿಕೆಯಿಂದ ಜಮ್ಮು ಮತ್ತು ಕಾಶ್ಮೀರದಿಂದ ನನ್ನ ಪ್ರಯಾಣವನ್ನು ನೋಡುವುದು ಅದ್ಭುತವಾಗಿದೆ. ಹೊಸತನವನ್ನು ಗುರುತಿಸಿ ಬೆಂಬಲಿಸಿದ್ದಕ್ಕಾಗಿ ಸಂಯುಕ್ತ ಕರ್ನಾಟಕಕ್ಕೆ ಧನ್ಯವಾದಗಳು” ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಅಲ್ಲದೇ ಸುದ್ದಿ ಪ್ರಕಟವಾದ ಬಳಿಕ ತಮ್ಮ ಈ ಸಾಧನೆಗೆ ಕರ್ನಾಟಕದಿಂದ ಅತೀ ಹೆಚ್ಚು ಪ್ರಶಂಸೆಗಳು ಬಂದಿದ್ದು, “ಜನರು ನನ್ನ ಕೆಲಸಕ್ಕೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ” ಎಂದು ಸ್ವತಃ ಇಮ್ರಾನ್ ಚೌಧರಿ ಅವರೇ ಹೇಳಿಕೊಂಡಿದ್ದಾರೆ.

ಇಮ್ರಾನ್ ಚೌಧರಿ ತಮ್ಮ 17ನೇ ವಯಸ್ಸಿನಲ್ಲೇ ಅವರು ಲಾಗ್ನೆವರ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ (Lagnever Technologies Pvt. Ltd.) ಸಂಸ್ಥೆಯನ್ನು ಸ್ಥಾಪಿಸಿದ್ದು, ಅದರ ಪ್ರಮುಖ ಉತ್ಪನ್ನವಾದ ಲಾಗ್ನೆವರ್ AI ಶಿಕ್ಷಣ ಕ್ಷೇತ್ರದಲ್ಲಿ ಹೊಸ ಸಂಚಲನ ಮೂಡಿಸಿದೆ.

ಈ AI ಆಧಾರಿತ ಶಿಕ್ಷಣ ವೇದಿಕೆ ಈಗಾಗಲೇ 10 ಸಾವಿರಕ್ಕೂ ಹೆಚ್ಚು ಡೌನ್ಲೋಡ್‌ಗಳನ್ನು ದಾಖಲಿಸಿದ್ದು, ವಿದ್ಯಾರ್ಥಿಗಳಿಂದಲೂ ಉತ್ತಮ ಪ್ರತಿಕ್ರಿಯೆ ಪಡೆದಿದೆ. ಸ್ಥಾಪನೆಯಾದ ಕೇವಲ ಆರು ತಿಂಗಳಲ್ಲೇ ಲಾಗ್ನೆವರ್ ಟೆಕ್ನಾಲಜೀಸ್ ಸುಮಾರು ₹5 ಕೋಟಿ ಮೌಲ್ಯಮಾಪನ ತಲುಪಿರುವುದು ವಿಶೇಷವಾಗಿತ್ತು.