SK Home Ad
Home ಸುದ್ದಿ ರಾಜ್ಯ ಬರಗಾಲದಲ್ಲೂ ಸಿಎಂ ನಿವಾಸ ಶೃಂಗಾರಕ್ಕೆ 100 ಕೋಟಿ ವೆಚ್ಚ

ಬರಗಾಲದಲ್ಲೂ ಸಿಎಂ ನಿವಾಸ ಶೃಂಗಾರಕ್ಕೆ 100 ಕೋಟಿ ವೆಚ್ಚ

0
30

ಶಿವಮೊಗ್ಗ: ಬರಗಾಲ ಮತ್ತು ಆರ್ಥಿಕ ಸಂಕಷ್ಟದ ನಡುವೆ ಮುಖ್ಯಮಂತ್ರಿಗಳ ನಿವಾಸದ ಶೃಂಗಾರ ಮತ್ತು ಅಲಂಕಾರಕ್ಕೆ 100 ಕೋಟಿ ರೂ.ವೆಚ್ಚ ಮಾಡಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದು ಮುಖ್ಯಮಂತ್ರಿಗಳ ಪ್ರಾಮಾಣಿಕತೆ ಮತ್ತು ಜನಸೇವೆಯ ಬದ್ಧತೆ ಯನ್ನು ಪ್ರಶ್ನಿಸುವ ವಿಚಾರವಾಗಿದೆ ಎಂದರು.

ಹಿರಿಯೂರಿನಲ್ಲಿ ಬಿಜೆಪಿ ಕಾರ್ಯಕರ್ತರು ಮನೆ ಬಾಗಿಲಿಗೆ ಬಂದರೆ ಬಹಿಷ್ಕರಿಸಿ ಎಂದು ಮುಖ್ಯಮಂತ್ರಿ ಹೇಳಿರುವುದು ಅವರ ಉದ್ಧಟತನದ ಮನೋಭಾವವನ್ನು ತೋರಿಸುತ್ತದೆ. ಪರಿಷತ್ ಚುನಾವಣೆಯಲ್ಲಿ ನಾಲ್ಕು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ಮತದಾರರು ನೀಡಿರುವ ತೀರ್ಪು ಸರ್ಕಾರದ ವಿರುದ್ಧದ ಜನಾಭಿಪ್ರಾಯಕ್ಕೆ ಸಾಕ್ಷಿಯಾಗಿದೆ ಎಂದರು.

ಮುಖ್ಯಮಂತ್ರಿ ಕಾಡುಗೊಲ್ಲ ಸಮುದಾಯದ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ. ಕಳೆದ ಮೂರೂವರೆ ವರ್ಷಗಳಲ್ಲಿ ಈ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಸರ್ಕಾರ ಯಾವ ಪ್ರಯತ್ನ ಮಾಡಿದೆ? ಚುನಾವಣೆ ಬಂದಾಗ ಮಾತ್ರ ಸಮು ದಾಯ ನೆನಪಾಗುವುದು ರಾಜಕೀಯ ಲಾಭದ ಉದ್ದೇಶವಲ್ಲದೆ ಮತ್ತೇನು ಎಂದು ಪ್ರಶ್ನಿಸಿದರು.

ಹಿರಿಯೂರಿಗೆ ನೀರು ಹರಿಸುವ ಯೋಜನೆಗಳ ವಿಚಾರದಲ್ಲಿ ಬಿಜೆಪಿ ಸರ್ಕಾರ, ವಿಶೇಷವಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಅವಧಿಯಲ್ಲಿ ಕೈಗೊಂಡ ಕ್ರಮಗಳು ಮತ್ತು ಅನುದಾನದಿಂದ ಅಭಿವೃದ್ಧಿ ಕಾರ್ಯಗಳು ನಡೆದಿವೆ. ಕಾಂಗ್ರೆಸ್ ಸರ್ಕಾರ ಕಳೆದ ಮೂರೂವರೆ ವರ್ಷಗಳಲ್ಲಿ ನೀರಾವರಿ ಯೋಜನೆಗಳಿಗೆ ಎಷ್ಟು ಅನುದಾನ ನೀಡಿದೆ ಎಂಬುದನ್ನು ಚಳಿಗಾಲದ ಅಧಿವೇಶನದಲ್ಲಿ ಚರ್ಚಿಸಲು ಸಿದ್ಧವಿದ್ದೇವೆ ಎಂದು ಸವಾಲ್ ಹಾಕಿದರು.

ಗೃಹ ಸಚಿವರು ಲೇಖಕ ರವಿ ಹಂಜ್ ಅವರನ್ನು ಕೇವಲ ಬಂಧಿಸಿ ಬಿಡುಗಡೆ ಮಾಡುವ ಕ್ರಮಕ್ಕೆ ಸೀಮಿತವಾಗದೆ, ಕಾನೂನಿನ ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ಬಸವಣ್ಣನವರು ಸೇರಿದಂತೆ ನಾಡಿನ ದಾರ್ಶನಿಕರ ಬಗ್ಗೆ ಜನರ ಭಾವನೆಗಳಿಗೆ ನೋವುಂಟು ಮಾಡುವ ರೀತಿಯಲ್ಲಿ ಬರೆಯುವವರಿಗೆ ತಕ್ಕ ಶಿಕ್ಷೆಯಾಗಬೇಕು. ಇಂತಹ ಕೃತ್ಯಗಳಿಗೆ ಕ್ಷಮಿಸುವ ಪ್ರಶ್ನೆಯೇ ಇಲ್ಲ ಎಂದು ವಿಜ ಯೇಂದ್ರ ಹೇಳಿದರು.