ಬೆಂಗಳೂರು: ರಾಜ್ಯ ಸರ್ಕಾರವು 2027ನೇ ಸಾಲಿನ ಸಾರ್ವತ್ರಿಕ ರಜೆಗಳು ಹಾಗೂ ಸರ್ಕಾರಿ ನೌಕರರಿಗೆ ಅನ್ವಯಿಸುವ ಪರಿಮಿತ ರಜೆಗಳ ಅಧಿಕೃತ ಪಟ್ಟಿಯನ್ನು ಪ್ರಕಟಿಸಿದೆ. ಮುಂದಿನ ವರ್ಷ ಒಟ್ಟು 18 ಸಾರ್ವತ್ರಿಕ ರಜೆಗಳು ಮತ್ತು 19 ಪರಿಮಿತ ರಜೆಗಳನ್ನು ಘೋಷಿಸಲಾಗಿದೆ. ಇದರೊಂದಿಗೆ ಎಲ್ಲ ಭಾನುವಾರಗಳು, ಎರಡನೇ ಹಾಗೂ ನಾಲ್ಕನೇ ಶನಿವಾರಗಳು ಸರ್ಕಾರಿ ರಜೆಗಳಾಗಿರಲಿವೆ.
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಅಧೀನ ಕಾರ್ಯದರ್ಶಿಗಳು ಶನಿವಾರ ಈ ಕುರಿತು ಅಧಿಕೃತ ಆದೇಶ ಹೊರಡಿಸಿದ್ದಾರೆ.
2027ರ ಸಾರ್ವತ್ರಿಕ ರಜೆಗಳ ವಿವರ
ಜನವರಿ 15 – ಸಂಕ್ರಾಂತಿ
ಜನವರಿ 26 – ಗಣರಾಜ್ಯೋತ್ಸವ
ಮಾರ್ಚ್ 6 – ಮಹಾಶಿವರಾತ್ರಿ
ಮಾರ್ಚ್ 10 – ರಂಜಾನ್
ಮಾರ್ಚ್ 26 – ಗುಡ್ಫ್ರೈಡೆ
ಏಪ್ರಿಲ್ 7 – ಯುಗಾದಿ
ಏಪ್ರಿಲ್ 14 – ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ
ಮೇ 1 – ಕಾರ್ಮಿಕರ ದಿನಾಚರಣೆ
ಮೇ 17 – ಬಕ್ರೀದ್
ಜೂನ್ 16 – ಮೊಹರಂ ಕಡೆ ದಿನ
ಸೆಪ್ಟೆಂಬರ್ 4 – ಗಣೇಶ ಚತುರ್ಥಿ
ಸೆಪ್ಟೆಂಬರ್ 29 – ಮಹಾಲಯ ಅಮಾವಾಸ್ಯೆ
ಅಕ್ಟೋಬರ್ 2 – ಗಾಂಧಿ ಜಯಂತಿ
ಅಕ್ಟೋಬರ್ 15 – ವಾಲ್ಮೀಕಿ ಜಯಂತಿ
ಅಕ್ಟೋಬರ್ 28 – ನರಕ ಚತುರ್ದಶಿ
ಅಕ್ಟೋಬರ್ 30 – ಬಲಿಪಾಡ್ಯಮಿ
ನವೆಂಬರ್ 1 – ಕನ್ನಡ ರಾಜ್ಯೋತ್ಸವ
ನವೆಂಬರ್ 16 – ಕನಕದಾಸ ಜಯಂತಿ
ಶನಿವಾರ, ಭಾನುವಾರ ಬರುವ ಹಬ್ಬಗಳಿಗೆ ಪ್ರತ್ಯೇಕ ರಜೆ ಇಲ್ಲ: ಕೆಲವು ಪ್ರಮುಖ ಹಬ್ಬಗಳು ವಾರಾಂತ್ಯದ ದಿನಗಳಲ್ಲಿ ಬರುವುದರಿಂದ ಅವುಗಳನ್ನು ಪ್ರತ್ಯೇಕ ಸಾರ್ವತ್ರಿಕ ರಜೆಗಳ ಪಟ್ಟಿಯಲ್ಲಿ ಸೇರಿಸಿಲ್ಲ. ಏಪ್ರಿಲ್ 18ರಂದು ಮಹಾವೀರ ಜಯಂತಿ, ಮೇ 9ರಂದು ಬಸವೇಶ್ವರ ಜಯಂತಿ, ಆಗಸ್ಟ್ 15ರಂದು ಸ್ವಾತಂತ್ರ್ಯ ದಿನಾಚರಣೆ ಹಾಗೂ ಈದ್ ಮಿಲಾದ್ ಮತ್ತು ಅಕ್ಟೋಬರ್ 10ರಂದು ವಿಜಯದಶಮಿ ಭಾನುವಾರದಂದು ಬರಲಿವೆ. ಅದೇ ರೀತಿ ಅಕ್ಟೋಬರ್ 9ರಂದು ಮಹಾನವಮಿ ಹಾಗೂ ಆಯುಧಪೂಜೆ ಎರಡನೇ ಶನಿವಾರದಂದು ಮತ್ತು ಡಿಸೆಂಬರ್ 25ರಂದು ಕ್ರಿಸ್ಮಸ್ ನಾಲ್ಕನೇ ಶನಿವಾರದಂದು ಬರುವುದರಿಂದ ಪ್ರತ್ಯೇಕ ರಜೆ ಘೋಷಿಸಿಲ್ಲ.
19 ಪರಿಮಿತ ರಜೆಗಳ ಘೋಷಣೆ: ಸರ್ಕಾರಿ ನೌಕರರು ಪೂರ್ವಾನುಮತಿ ಪಡೆದು ವರ್ಷದಲ್ಲಿ ಗರಿಷ್ಠ ಎರಡು ಪರಿಮಿತ ರಜೆಗಳನ್ನು ಬಳಸಿಕೊಳ್ಳಲು ಅವಕಾಶವಿದೆ.
2027ರ ಪರಿಮಿತ ರಜೆಗಳ ಪಟ್ಟಿ ಹೀಗಿದೆ:
ಜನವರಿ 1 – ಹೊಸ ವರ್ಷ
ಫೆಬ್ರವರಿ 15 – ಮಧ್ವ ನವಮಿ
ಮಾರ್ಚ್ 5 – ಜುಮಾತ್-ಉಲ್-ವಿದಾ
ಏಪ್ರಿಲ್ 15 – ಶ್ರೀರಾಮನವಮಿ
ಮೇ 10 – ರಾಮಾನುಜಾಚಾರ್ಯ ಜಯಂತಿ
ಮೇ 11 – ಶಂಕರಾಚಾರ್ಯ ಜಯಂತಿ
ಮೇ 20 – ಬುದ್ಧ ಪೂರ್ಣಿಮೆ
ಆಗಸ್ಟ್ 13 – ವರಮಹಾಲಕ್ಷ್ಮಿ ವ್ರತ
ಆಗಸ್ಟ್ 16 – ಋಗ್ ಉಪಾಕರ್ಮ
ಆಗಸ್ಟ್ 17 – ಯಜುರ್ ಉಪಾಕರ್ಮ
ಆಗಸ್ಟ್ 24 – ಶ್ರೀಕೃಷ್ಣ ಜನ್ಮಾಷ್ಟಮಿ
ಸೆಪ್ಟೆಂಬರ್ 3 – ಸ್ವರ್ಣಗೌರಿ ವ್ರತ
ಸೆಪ್ಟೆಂಬರ್ 8 – ಕನ್ಯಾ ಮರಿಯಮ್ಮ ಜಯಂತಿ
ಸೆಪ್ಟೆಂಬರ್ 14 – ಅನಂತಪದ್ಮನಾಭ ವ್ರತ
ಸೆಪ್ಟೆಂಬರ್ 15 – ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ
ಸೆಪ್ಟೆಂಬರ್ 17 – ವಿಶ್ವಕರ್ಮ ಜಯಂತಿ
ಅಕ್ಟೋಬರ್ 18 – ತುಲಾ ಸಂಕ್ರಮಣ
ಡಿಸೆಂಬರ್ 13 – ಹುತ್ತರಿ ಹಬ್ಬ
ಡಿಸೆಂಬರ್ 24 – ಕ್ರಿಸ್ಮಸ್ ಈವ್
ಈ ಮೂಲಕ 2027ರಲ್ಲಿ ಸರ್ಕಾರಿ ನೌಕರರಿಗೆ 18 ಸಾರ್ವತ್ರಿಕ ರಜೆಗಳ ಜತೆಗೆ, ನಿಯಮಾನುಸಾರ ಆಯ್ಕೆ ಮಾಡಿಕೊಳ್ಳಲು 19 ಪರಿಮಿತ ರಜೆಗಳ ಅವಕಾಶ ಕಲ್ಪಿಸಲಾಗಿದೆ.




















