Home Advertisement
Home ಸುದ್ದಿ ದೇಶ NEET-UG ಪ್ರಶ್ನೆಪತ್ರಿಕೆ ಸೋರಿಕೆ: ಪ್ರಾಧ್ಯಾಪಕ ಕುಲಕರ್ಣಿ ಅರೆಸ್ಟ್

NEET-UG ಪ್ರಶ್ನೆಪತ್ರಿಕೆ ಸೋರಿಕೆ: ಪ್ರಾಧ್ಯಾಪಕ ಕುಲಕರ್ಣಿ ಅರೆಸ್ಟ್

0
149

ನವದೆಹಲಿ: NEET-UG 2026 ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಪ್ರಮುಖ ಆರೋಪಿ ಹಾಗೂ ಮಾಸ್ಟರ್‌ಮೈಂಡ್ ಎಂದು ಆರೋಪಿಸಲ್ಪಟ್ಟಿರುವ ರಸಾಯನಶಾಸ್ತ್ರ ಪ್ರಾಧ್ಯಾಪಕ ಪಿ.ವಿ. ಕುಲಕರ್ಣಿ ಎನ್ನುವರನ್ನ ಸಿಬಿಐ ಬಂಧಿಸಿದೆ.

ಮೂಲತಃ ಲಾತೂರ್‌ನವರಾದ ಕುಲಕರ್ಣಿ ಮಹಾರಾಷ್ಟ್ರದ ಪುಣೆಯಲ್ಲಿ ಕೆಲಸ ಮಾಡುತ್ತಿದ್ದು, ಅಲ್ಲಿಯೇ ಅವರನ್ನು ಬಂಧಿಸಲಾಗಿದೆ. ಕುಲಕರ್ಣಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ನಡೆಸುವ ವೈದ್ಯಕೀಯ ಪ್ರವೇಶ ಪರೀಕ್ಷೆಯ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದರಿಂದ ಪ್ರಶ್ನೆಪತ್ರಿಕೆಗಳಿಗೆ ಪಡೆಯಲು ಅವಕಾಶ ಇದೆ. ಆದರೆ, ಈ ಕುರಿತಂತೆ ಹೆಚ್ಚಿನ ಮಾಹಿತಿ ಬಹಿರಂಗಪಡಿಸಿಲ್ಲ.

ಪ್ರಶ್ನೆಗಳು ಸೋರಿಕೆಯಾಗಿದ್ದು ಹೇಗೆ?:‌ 2026ರ ಏಪ್ರಿಲ್ ಕೊನೆಯ ವಾರದಲ್ಲಿ ಕುಲಕರ್ಣಿ ಮತ್ತೊಬ್ಬ ಆರೋಪಿ ಮನಿಷಾ ವಾಘ್ಮಾರೆ ಕೆಲ ವಿದ್ಯಾರ್ಥಿಗಳಿಗೆ ಪುಣೆಯಲ್ಲಿರುವ ತಮ್ಮ ನಿವಾಸದಲ್ಲೇ ವಿಶೇಷ ಕೋಚಿಂಗ್ ತರಗತಿಗಳನ್ನು ನಡೆಸಿದ್ದರು, ವಿಶೇಷ ತರಗತಿಗಳ ವೇಳೆ ಕುಲಕರ್ಣಿ ಪ್ರಶ್ನೆಗಳು, ಆಯ್ಕೆಗಳು ಹಾಗೂ ಸರಿಯಾದ ಉತ್ತರಗಳನ್ನು ವಿದ್ಯಾರ್ಥಿಗಳಿಗೆ ಹೇಳಿಕೊಟ್ಟಿದ್ದರು. ವಿದ್ಯಾರ್ಥಿಗಳು ಅವುಗಳನ್ನು ತಮ್ಮ ನೋಟ್‌ಬುಕ್‌ಗಳಲ್ಲಿ ಕೈಬರಹದಲ್ಲಿ ಬರೆದುಕೊಂಡಿದ್ದರು ಎಂದು ಸಿಬಿಐ ತಿಳಿಸಿದೆ.

ಸದ್ಯ ಕಿಂಗ್‌ಪಿನ್‌ ಕುಲಕರ್ಣಿಯನ್ನು ಸಿಬಿಐ ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ. ವಿಚಾರಣೆ ನಡೆಸಿರುವ ಪೊಲೀಸರಿಗೆ ಕುಲಕರ್ಣಿ ನೀಡುವ ಮಾಹಿತಿ ಹಗರಣದ ಹಿಂದಿರುವ ಇನ್ನಷ್ಟು ಜನರನ್ನು ಹೊರತರುವಲ್ಲಿ ಸಹಾಯವಾಗಲಿದೆ.

ವಿದ್ಯಾರ್ಥಿಗಳನ್ನು ಸಂಪರ್ಕಿಸಿ ಲಕ್ಷಾಂತರ ರೂಪಾಯಿ ಪಡೆದು ವಿಶೇಷ ತರಗತಿಗಳಿಗೆ ಕರೆತಂದ ಮಧ್ಯವರ್ತಿಗಳ ಜಾಲವನ್ನು ತನಿಖೆ ಬಯಲಿಗೆಳೆಯುತ್ತಿದೆ. ಈ ಪ್ರಕರಣದಲ್ಲಿ ಸಮಗ್ರ, ನಿಷ್ಪಕ್ಷಪಾತ ಹಾಗೂ ವೃತ್ತಿಪರ ತನಿಖೆ ನಡೆಸಲು ಸಿಬಿಐ ಬದ್ಧವಾಗಿದೆ,” ಎಂದು ಸಂಸ್ಥೆ ತಿಳಿಸಿದೆ.