SK Home Ad
Home ಕ್ರೀಡೆ IPL 2026: ಲಖನೌಗೆ 188 ರನ್‌ ಟಾರ್ಗೆಟ್‌ ನೀಡಿದ ಚೆನ್ನೈ

IPL 2026: ಲಖನೌಗೆ 188 ರನ್‌ ಟಾರ್ಗೆಟ್‌ ನೀಡಿದ ಚೆನ್ನೈ

0
237

ಲಖನೌ: ಆಕಾಶ್ ಮಹಾರಾಜ್ ಸಿಂಗ್ ಉತ್ತಮ ಬೌಲಿಂಗ್‌ ದಾಳಿಯ ಹೊರತಾಗಿಯೂ ಕಾರ್ತಿಕ ಶರ್ಮಾ ಏಕಾಂಗಿ ಹೋರಾಟದ ನೆರವಿನಿಂದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಲಖನೌ ವಿರುದ್ಧ ಸವಾಲಿನ ಮೊತ್ತವನ್ನು ಕಲೆಹಾಕಿದೆ.

ಟಾಸ್‌ ಗೆದ್ದು ಫೀಲ್ಡಿಂಗ್‌ ಆಯ್ದುಕೊಂಡ ಲಖನೌ ಸೂಪರ್‌ ಜೈಂಟ್ಸ್‌ ಲೆಕ್ಕಾಚಾರದಂತೆ ಆರಂಭದಲ್ಲಿಯೇ ಚೆನ್ನೈ ಬ್ಯಾಟ್ಸಮನ್‌ಗಳನ್ನು ನಿಯಂತ್ರಿಸುವಲ್ಲಿ ಯಶ ಕಂಡಿತು.

ಸಂಜು ಸ್ಯಾಮನ್ಸ್‌ (20) ರುತುರಾಜ್‌ ಗಾಯಕ್ವಾಡ (13) ಮತ್ತು ಉರ್ವಿಲ್‌ ಪಟೇಲ್‌ (6) ಮೂವರು ಆಕಾಶ್‌ಗೆ ವಿಕೆಟ್‌ ಒಪ್ಪಿಸಿದರು. 7.2 ಓವರ್‌ಗಳಲ್ಲಿಯೇ 52 ರನ್‌ಗಳಿಗೆ ಪ್ರಮುಖ ಮೂರು ವಿಕೆಟ್‌ ಕಳೆದುಕೊಂಡ ಚೆನ್ನೈ ಸಂಕಷ್ಟಕ್ಕೆ ಸಿಲುಕಿತ್ತು.

ಈ ವೇಳೆ ಕಾರ್ತಿಕ್ ಶರ್ಮಾ ಮತ್ತು ಡೆವಾಲ್ಡ್ ಬ್ರೆವಿಸ್ ಜೋಡಿ 70 ರನ್‌ಗಳ ಜತೆಯಾಟ ನಡೆಸಿ ತಂಡವನ್ನು ಸಂಕಷ್ಟದಿಂದ ಪಾರು ಮಾಡಿತು. ಆಗ ಮೊಹಮ್ಮದ ಶಮಿ ಎಸೆತದಲ್ಲಿ ಬ್ರೆವಿಸ್ (25) ಆಕಾಶ್‌ಗೆ ಕ್ಯಾಚ್‌ ನೀಡಿ ಔಟಾದರು.

ಕಾರ್ತಿಕ್ ಶರ್ಮಾ 42 ಎಸೆತದಲ್ಲಿ 6 ಬೌಂಡರಿ, 5 ಸಿಕ್ಸರ್‌ನಿಂದ 71 ರನ್‌ಗಳಿಸಿ ಶಹಬಾಜ್ ಅಹ್ಮದ್ ಎಸೆತದಲ್ಲಿ ಐಡೆನ್ ಮಾರ್ಕ್ರಾಮ್‌ಗೆ ಕ್ಯಾಚ್‌ ನೀಡಿ ಹೊರನಡೆದರು.

ಕೊನೆಯಲ್ಲಿ ಶಿವಂ ದುಬೆ ಕೇವಲ 16 ಎಸೆತದಲ್ಲಿ 3 ಬೌಂಡರಿ, 2 ಸಿಕ್ಸರ್‌ನಿಂದ ಅಜೇಯ 32 ರನ್‌ಗಳಿಸಿ ತಂಡದ ಮೊತ್ತವನ್ನು ಹೆಚ್ಚಿಸಿದರು.

ಲಖನೌ ಪರ ಆಕಾಶ್ ಮಹಾರಾಜ್ ಸಿಂಗ್ 26ಕ್ಕೆ 3 ವಿಕೆಟ್‌ ಪಡೆದರೆ, ಮೊಹಮ್ಮದ ಶಮಿ, ಶಹಬಾಜ್ ಅಹಮದ್ ತಲಾ ಒಂದು ವಿಕೆಟ್‌ ಪಡೆದರು.