ವಿಎಒ ಪರೀಕ್ಷಾ ಅಕ್ರಮ ಪ್ರಕರಣಕ್ಕೆ ಮತ್ತೊಂದು ತಿರುವು; ನಾಲ್ವರು ಪೊಲೀಸರ ಅಮಾನತು, ಸಿಬ್ಬಂದಿಗೆ ನೋಟಿಸ್
ಹಾವೇರಿ: ವಿಎಒ ಪರೀಕ್ಷಾ ಅಕ್ರಮ ಪ್ರಕರಣದಲ್ಲಿ ಸುಳ್ಳು ಆರೋಪ ಮಾಡಿರುವವರ ವಿರುದ್ಧವೂ ಪ್ರಕರಣ ದಾಖಲಿಸುವ ಎಚ್ಚರಿಕೆಯನ್ನು ಜಿಲ್ಲಾಡಳಿತ ನೀಡಿದೆ.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿ ವಿಜಯಮಹಾಂತೇಶ ದಾನಮ್ಮನವರ, ಆರೋಪಿ ಶಂಕರ್ ಬನ್ನೂರು ಪರೀಕ್ಷೆಗೆ ಹಾಜರಾಗಿದ್ದಾನೋ ಇಲ್ಲವೋ ಎಂಬ ಬಗ್ಗೆ ಸಿಸಿಟಿವಿ ದೃಶ್ಯಾವಳಿ, ಪರೀಕ್ಷಾರ್ಥಿಗಳ ಸಹಿ ಹಾಗೂ ಮುಖಚಹರೆ ಗುರುತಿಸುವಿಕೆ ಸೇರಿದಂತೆ ವಿವಿಧ ಸಾಕ್ಷ್ಯಗಳನ್ನು ಪರಿಶೀಲಿಸಲಾಗಿದೆ. ಎಲ್ಲವನ್ನೂ ಸಮಗ್ರವಾಗಿ ಪರಿಶೀಲಿಸಿದ ಬಳಿಕವೇ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಆದರೆ ಸಹಪರೀಕ್ಷಾರ್ಥಿ ಎಂದು ಹೇಳಿಕೊಂಡಿರುವ ವ್ಯಕ್ತಿಯೊಬ್ಬ ಶಂಕರ ಬನ್ನೂರ ಪರೀಕ್ಷೆಗೆ ಬಂದೇ ಇಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಹೇಳಿಕೆ ನೀಡಿರುವುದು ಗಮನಕ್ಕೆ ಬಂದಿದೆ. ಆರೋಪ ಮಾಡಿದವರನ್ನು ವಿಚಾರಣೆಗೆ ಕರೆಯಲಾಗುವುದು. ಅವರು ತಮ್ಮ ಆರೋಪಕ್ಕೆ ಪೂರಕವಾದ ಸೂಕ್ತ ಸಾಕ್ಷ್ಯ ಒದಗಿಸಿದರೆ ತನಿಖೆ ನಡೆಸಲಾಗುವುದು. ಇಲ್ಲವಾದಲ್ಲಿ ಸುಳ್ಳು ಆರೋಪ ಮಾಡಿದವರ ವಿರುದ್ಧವೇ ಪ್ರಕರಣ ದಾಖಲಿಸಲಾಗುವುದು ಎಂದರು.
ನಾಲ್ವರಿಗೆ ನೋಟಿಸ್ : ಪರೀಕ್ಷಾ ಕೇಂದ್ರದಲ್ಲಿ ಕರ್ತವ್ಯ ನಿರ್ವಹಣೆಯಲ್ಲಿ ನಿರ್ಲಕ್ಷö್ಯ ತೋರಿದ ಪ್ರಾಂಶುಪಾಲರು ಸೇರಿದಂತೆ ನಾಲ್ವರಿಗೆ ನೋಟಿಸ್ ನೀಡಲಾಗಿದೆ. ಪ್ರಾಂಶುಪಾಲರಾದ ರಾಮಕಾಂತ ಭಟ್, ಬಸವರಾಜ ಸವದಿ, ರಾಜು ದೆಂಡೆಪ್ಪನವರ ಸೇರಿದಂತೆ ನಾಲ್ವರು ಕರ್ತವ್ಯಲೋಪ ಎಸಗಿರುವುದು ಪ್ರಾಥಮಿಕ ಪರಿಶೀಲನೆಯಲ್ಲಿ ಕಂಡುಬಂದಿದೆ.
ಸಂಬಂಧಪಟ್ಟ ಆಡಳಿತ ಮಂಡಳಿಯು ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ತಪ್ಪಿದಲ್ಲಿ ಸರ್ಕಾರವೇ ಕ್ರಮ ಜರುಗಿಸಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ (ಎಇಇ) ಅವರನ್ನು ಅಮಾನತುಗೊಳಿಸುವಂತೆ ಲೋಕೋಪಯೋಗಿ ಇಲಾಖೆಗೆ ಪತ್ರ ಬರೆಯಲಾಗಿದೆ ಎಂದರು.
ನಾಲ್ವರು ಪೊಲೀಸ್ ಸಿಬ್ಬಂದಿ ಅಮಾನತ್ತು : ಎಸ್ಪಿ ಯಶೋಧಾ ವಂಟಗೋಡಿ ಮಾತನಾಡಿ, ಪರೀಕ್ಷಾ ಕೊಠಡಿಯೊಳಗೆ ಮೊಬೈಲ್ ಫೋನ್ ತೆಗೆದುಕೊಂಡು ಹೋಗಲು ಅವಕಾಶ ನೀಡಿದ ಪೊಲೀಸ್ ಸಿಬ್ಬಂದಿಯ ಕರ್ತವ್ಯಲೋಪದ ಕುರಿತು ಡಿವೈಎಸ್ಪಿ ವರದಿ ಸಲ್ಲಿಸಿದ್ದು, ಈ ಹಿನ್ನೆಲೆಯಲ್ಲಿ ನಾಲ್ವರು ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ. ಇತರ ಇಬ್ಬರ ವಿರುದ್ಧ ಶಿಸ್ತುಕ್ರಮ ಆರಂಭಿಸಲಾಗಿದೆ. ಶಿಗ್ಗಾವಿ ಪೊಲೀಸ್ ಠಾಣೆಯ ಸಿ.ಎ. ಮರೆಣ್ಣನವರ, ವಿ.ಸಿ. ಹೊನ್ನಾಳ್ಳಿ, ಸವಣೂರು ಪೊಲೀಸ್ ಠಾಣೆಯ ಆರ್.ಎಂ. ಮಣಕವಾಡ, ಆಡೂರು ಪೊಲೀಸ್ ಠಾಣೆಯ ಎಸ್.ಆರ್. ನಾಗನೂರು ಎಂಬ ಪೊಲೀಸ್ ಸಿಬ್ಬಂದಿ ಅಮಾನತುಗೊಂಡಿದ್ದಾರೆ ಎಂದರು.
ಶಂಕರ ಬನ್ನೂರ ಪರೀಕ್ಷಾ ಕೊಠಡಿಗೆ ಬಂದಿರಲಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಹೇಳಿಕೆ ನೀಡಿರುವ ಅನಿಲ್ ಕಾಂಬ್ಳೆ ಹಾಗೂ ಸತೀಶ್ ಲಮಾಣಿ ಅವರನ್ನು ವಿಚಾರಣೆ ನಡೆಸಲಾಗುವುದು ಎಂದರು.
- VAOಪರೀಕ್ಷಾ ಅಕ್ರಮ: ಸುಳ್ಳು ಆರೋಪ ಮಾಡಿದವರ ವಿರುದ್ಧವೂ ಕೇಸ್
- ಶೇ.6ರ ಗಡಿ ದಾಟಿದ ಹಣದುಬ್ಬರ: ಡಿಸೆಂಬರ್ನಲ್ಲಿ RBI ಬಡ್ಡಿದರ ಹೆಚ್ಚಳ ಸಾಧ್ಯತೆ?
- ಬೆಂಗಳೂರು–ಮೈಸೂರಿನಲ್ಲಿ ನಾಳೆ ಪ್ರಧಾನಿ ಮೋದಿ: ಮೆಟ್ರೋ, ರೈಲ್ವೆ, ಇಂಧನ ಕ್ಷೇತ್ರಗಳಿಗೆ ಹೊಸ ಯೋಜನೆ
- ಮಾದಕ ವಸ್ತು ಜಾಲ ಪತ್ತೆಗೆ Digital ಅಸ್ತ್ರ: ಬಳ್ಳಾರಿ ಪೊಲೀಸರಿಂದ ‘ನಾರ್ಕ್ ರಿಪೋರ್ಟರ್’ ವೆಬ್ಸೈಟ್ ಲೋಕಾರ್ಪಣೆ
- ‘ತುಂತುರು’ ಹಾಡಿನ ಸವಿನೆನಪಿನ ನಡುವೆ ‘ಅಮೃತವರ್ಷಿಣಿ 2’ ಸುದ್ದಿ: ಅಭಿಮಾನಿಗಳಲ್ಲಿ ಹೆಚ್ಚಿದ ನಿರೀಕ್ಷೆ






















