ಮುಂಬೈ: ಕಾರ್ಕಿನೋಸ್ ಹೆಲ್ತ್ ಕೇರ್ ಎಂಬುದು ರಿಲಯನ್ಸ್ ಇಂಡಸ್ಟ್ರೀಸ್‌ನ ಶೇಕಡಾ ನೂರರಷ್ಟು ಅಂಗಸಂಸ್ಥೆಯಾಗಿದೆ. ಇದೀಗ ಭಾರತದಾದ್ಯಂತ ಒಂದು ಲಕ್ಷಕ್ಕೂ ಹೆಚ್ಚು ಮಹಿಳೆಯರನ್ನು ಎಚ್‌ಪಿವಿ ಡಿಎನ್ಎಗಾಗಿ ಪರೀಕ್ಷಿಸಿದೆ. ಇದರ ಮೂಲಕ ಅತ್ಯುತ್ತಮ ಗುಣಮಟ್ಟದ ಸರ್ವಿಕಲ್ ಕ್ಯಾನ್ಸರ್ ಪರೀಕ್ಷೆ ಹಾಗೂ ಅದರ ಫಾಲೋ ಅಪ್ ಕಾಳಜಿ ವಿಚಾರಕ್ಕೆ ಬಹಳ ಮುಖ್ಯವಾದ ಮೈಲುಗಲ್ಲನ್ನು ಮುಟ್ಟಿದೆ.
ಸರ್ವಿಕಲ್ ಕ್ಯಾನ್ಸರ್ ತಡೆ ಎಂಬುದು ಕೇವಲ ಪರೀಕ್ಷಿಸುವುದಕ್ಕೆ ಮಾತ್ರ ಸೀಮಿತವಲ್ಲ. ಫಾಲೋ ಅಪ್ ಪರೀಕ್ಷೆ ಸರಿಯಾಗಿ ಮಾಡಿಸಿಕೊಳ್ಳದೆ ಸಮಸ್ಯೆ ಮಾಡಿಕೊಂಡಂಥ ಉದಾಹರಣೆಗಳು ಇವೆ. ಈ ಎರಡೂ ಸವಾಲನ್ನು ಕಾರ್ಕಿನೋಸ್ ಹೆಲ್ತ್ ಕೇರ್ ಮಾದರಿಗಳು ತುಂಬ ಸಮರ್ಥವಾಗಿ ಎದುರಿಸುತ್ತಿವೆ. ವಿಶ್ವ ಆರೋಗ್ಯ ಸಂಸ್ಥೆ ಶಿಫಾರಸು ಮಾಡಿದ ಎಚ್‌ಪಿಎ ಡಿಎನ್ಎ ಪರೀಕ್ಷೆ ಮತ್ತು ಜಾಗೃತಿ ಮೂಡಿಸುವುದು, ತಪಾಸಣೆ, ನಿಯಮಾವಳಿಗಳ ಅನುಸರಣೆ, ತುರ್ತಾದ ನಿರ್ವಹಣೆ, ಮಾರ್ಗದರ್ಶನ ಹಾಗೂ ಆ ನಂತರದಲ್ಲಿ ಡಿಜಿಟಲಿ ಸಕ್ರಿಯಗೊಳಿಸಲಾದ ನಿರಂತರ ಆರೈಕೆ ವ್ಯವಸ್ಥೆ ಮೂಲಕ ಕಾರ್ಕಿನೋಸ್ ಹೆಲ್ತ್ ಕೇರ್ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತಾ ಇದೆ.
ಈ ಮಹತ್ವದ ಮೈಲುಗಲ್ಲು ತಲುಪಿದ ಬಗ್ಗೆ ಕಾರ್ಕಿನೋಸ್ ಹೆಲ್ತ್ ಕೇರ್ ಕನ್ಸಲ್ಟಂಟ್ (ಆರಂಭಿಕ ರೋಗಪತ್ತೆ ಮತ್ತು ಮಹಿಳೆಯರ ಕಾಳಜಿ) ಮತ್ತು ಪದ್ಮಶ್ರೀ ಪುರಸ್ಕೃತರಾದ ಡಾ. ನೀರಜಾ ಬಾಟ್ಲಾ ಅವರು ಮಾತನಾಡಿ. ಸರ್ವಿಕಲ್ ಕ್ಯಾನ್ಸರ್‌ಗೆ ಇರುವಂಥ ಬಹಳ ಪರಿಣಾಮಕಾರಿ ಅಂದರೆ ಎಚ್‌ಪಿವಿ ಡಿಎನ್ಎ ಪ್ರಾಥಮಿಕ ವೈದ್ಯಕೀಯ ಪರೀಕ್ಷೆ ಎಂಬುದು ಕೆಲವು ಸಮಯದಿಂದಲೇ ಸಾಕ್ಷ್ಯ ಸಮೇತ ಸ್ಪಷ್ಟವಾಗಿದೆ. ಇನ್ನು ಮುಂದೆ ತುಂಬ ದೊಡ್ಡ ಮಟ್ಟದಲ್ಲಿ ಈ ಪರೀಕ್ಷೆ ಮಾಡಿಸುವುದೊಂದೇ ವಿಷಯ ಅಲ್ಲ. ಅದರ ಜೊತೆಗೆ ವೈದ್ಯಕೀಯ ಪರೀಕ್ಷೆಯಲ್ಲಿ ಪಾಸಿಟಿವ್ ಬಂದ ಮಹಿಳೆಯರು, ಕಾಯಿಲೆ ದೃಢಪಟ್ಟಾಗ ನಿರಂತರವಾಗಿ ಚಿಕಿತ್ಸೆ ಪಡೆಯಬೇಕು. ದೊಡ್ಡ ನಗರಗಳಾಚೆಗೆ ಈ ಸಂಖ್ಯೆಯ ಪ್ರಮಾಣ ವ್ಯಾಪಿಸಿದೆ. ಭಾರತದಲ್ಲಿ ಸರ್ವಿಕಲ್ ಕ್ಯಾನ್ಸರ್ ತೊಡೆದುಹಾಕಲು ಅಗತ್ಯ ಇರುವ ಪ್ರಯತ್ನದ ದಿಕ್ಕನ್ನು ಇದು ನಮಗೆ ತೋರಿಸುತ್ತಿದೆ ಎಂದರು.
ಕಾರ್ಕಿನೋಸ್ ಹೆಲ್ತ್ ಕೇರ್ ಹಿರಿಯ ಅಂಕಾಲಜಿ ಸಲಹೆಗಾರರಾದ ಡಾ. ಗೌರ ಕಿಶೋರ್ ರಥ್ ಅವರು ಮಾತನಾಡಿ, ದಶಕಗಳಿಂದ ನಮಗೆ ಇರುವ ಅಡೆತಡೆ ಅಂದರೆ ಸರ್ವಿಕಲ್ ಕ್ಯಾನ್ಸರ್ ಬಗ್ಗೆ ಇರುವ ತಿಳಿವಳಿಕೆ ಅಲ್ಲ, ಬದಲಿಗೆ ಜನರಿಗೆ ತಲುಪಿಸುವುದು ಸವಾಲಾಗಿದೆ. ಹೆಣ್ಣುಮಕ್ಕಳಿಗೆ ಈ ಉತ್ತಮ ಗುಣಮಟ್ಟದ ಪರೀಕ್ಷೆಯನ್ನು ಸಣ್ಣ ಪಟ್ಟಣ ಮತ್ತು ಜಿಲ್ಲೆಗಳಲ್ಲಿ ಮಾಡಿ, ಆ ನಂತರ ಒಂದು ಸಿಸ್ಟಮ್ ಮೂಲಕ ಫಾಲೋ ಅಪ್ ಸಹ ಮಾಡಬೇಕು. ಫಲಿತಾಂಶವನ್ನು ತಿಳಿಸಿ, ಹಾಗೇ ಬಿಡಬಾರದು. ಸಾರ್ವಜನಿಕ ಆರೋಗ್ಯದ ವಿಷಯದಲ್ಲಿ ಲಾಭ ಎಂಬುದು ಹೀಗೆ ಆಗುತ್ತದೆ ಎಂದರು.
ಕಾರ್ಕಿನೋಸ್ ಹೆಲ್ತ್ ಕೇರ್ ವುಮೆನ್ ವೆಲ್ ನೆಸ್, ಮತ್ತು ಹೆಡ್ ಆಫ್ ಡಿಸ್ಟ್ರಿಬ್ಯುಟೆಡ್ ಕ್ಯಾನ್ಸರ್ ಕೇರ್ ನೆಟ್ ವರ್ಕ್ (ಡಿಸಿಸಿಎನ್) ಚೀಫ್ ಗ್ರೋಥ್ ಆಫೀಸರ್ ಶ್ರೀಪ್ರಿಯಾ ರಾವ್ ಅವರು ಮಾತನಾಡಿ, ನಾವು ಎಷ್ಟು ಮಹಿಳೆಯರಿಗೆ ಈ ವೈದ್ಯಕೀಯ ಪರೀಕ್ಷೆ ಮಾಡಿದೆವು ಎಂಬುದು ಈ ಕೆಲಸಕ್ಕೆ ಅಳತೆಗೋಲಲ್ಲ. ಈ ದಾರಿಯಲ್ಲಿ ನಾವು ಎಷ್ಟು ಜನರನ್ನು ಉಳಿಸಿಕೊಂಡೆವು ಎಂಬುದು ಮುಖ್ಯ. ನಾವು ಇದನ್ನು ಗೌರವ ಹಾಗೂ ಸುಸ್ಥಿರತೆಯಿಂದ ಮಾಡಿದೆವಾ, ಐತಿಹಾಸಿಕವಾಗಿ ನೋಡಿದಲ್ಲಿ ಮಹಿಳೆಯರಿಗೆ ಕೊನೆಯದಾಗಿ ಸೇವೆ ದೊರಕಿದೆ. ಆದರೆ ನಾವು ಇದನ್ನು ಒಂದು ಗುಣಮಟ್ಟದ ಅಳತೆಗೋಲಾಗಿ ನೋಡಿದೆವು. ನಾವು ಈ ಮೈಲುಗಲ್ಲನ್ನು ಶಂಕರ್ ಸರ್ ಎಂದು ಸ್ಮರಿಸುವ ದಿವಂಗತ ಡಾ ಆರ್ ಶಂಕರ್ ನಾರಾಯಣನ್ ಅವರಿಗೆ ಅರ್ಪಿಸುತ್ತೇವೆ. ಅವರ ವೈಜ್ಞಾನಿಕ ನಾಯಕತ್ವ ಮತ್ತು ಬದ್ಧತೆ ಈ ಕೆಲಸಕ್ಕೆ ಅಡಿಪಾಯ ಹಾಕಿಕೊಟ್ಟಿತು. ಇದರ ಜೊತೆಗೆ ನಿರಂತರ ಮಾರ್ಗದರ್ಶನ ಮಾಡುತ್ತಿರುವ ಇಂಟರ್ ನ್ಯಾಷನಕ್ ಏಜೆನ್ಸಿ ಫಾರ್ ರೀಸರ್ಚ್ ಆನ್ ಕ್ಯಾನ್ಸರ್ (ಐಎಆರ್‌ಸಿ) ಡಾ. ಪಾರ್ಥ ಬಸು ಅವರ ಪ್ರಯತ್ನ ಸಹ ಇದೆ ಎಂದರು.
ಸರ್ವಿಕಲ್ ಕ್ಯಾನ್ಸರ್ ಎಂಬುದು ಆರಂಭದಲ್ಲೇ ತಡೆಗಟ್ಟಬಹುದಾದ ಕ್ಯಾನ್ಸರ್ ಆಗಿ ಉಳಿದುಕೊಂಡಿದೆ. ಸರಿಯಾದ ಸಮಯಕ್ಕೆ ವೈದ್ಯಕೀಯ ಪರೀಕ್ಷೆ, ಆರಂಭಿಕ ಹಂತದಲ್ಲಿಯೇ ಪತ್ತೆ ಹಚ್ಚುವುದು, ಮತ್ತು ಸೂಕ್ತ ಫಾಲೋಅಪ್ ಕಾಳಜಿ ಇವುಗಳಿಂದ ಬಹುತೇಕ ಸರ್ವಿಕಲ್ ಕ್ಯಾನ್ಸರ್ ಸಾವುಗಳನ್ನು ತಡೆಯಬಹುದು. ಭಾರತದಲ್ಲಿ ಮಹಿಳೆಯರ ಆರೋಗ್ಯ ಫಲಿತಾಂಶ ಉತ್ತಮಗೊಳಿಸುವುದಕ್ಕೆ ಉತ್ಕೃಷ್ಟ ಗುಣಮಟ್ಟದ ವೈದ್ಯಕೀಯ ಪರೀಕ್ಷೆ ಸಹ ಬಹಳ ಮುಖ್ಯವಾಗಿದೆ.






















