SK Home Ad
Home ನಮ್ಮ ಜಿಲ್ಲೆ ದಕ್ಷಿಣ ಕನ್ನಡ ಹೂಡಿಕೆದಾರರಿಗೆ ವಂಚನೆ: ಶಿವಾನಂದ ನೀಲಣ್ಣವರ್‌ ಇಡಿ ವಶಕ್ಕೆ

ಹೂಡಿಕೆದಾರರಿಗೆ ವಂಚನೆ: ಶಿವಾನಂದ ನೀಲಣ್ಣವರ್‌ ಇಡಿ ವಶಕ್ಕೆ

0
47

ಮಂಗಳೂರು: ಶಿವಂ ಅಸೋಸಿಯೇಟ್ ಕಂಪನಿಯ ವಂಚನೆಯ ಪ್ರಕರಣಕ್ಕೆ ಸಂಬಂಧಿಸಿ ಸಂಸ್ಥೆಯ ಮಾಲಕ ಶಿವಾನಂದ ನೀಲಣ್ಣವರ್‌ನನ್ನು ಜಾರಿ ನಿರ್ದೇಶನಾಲಯ (ಇಡಿ) ವಶಕ್ಕೆ ಪಡೆದುಕೊಂಡಿದ್ದು, ಮಂಗಳೂರಿನ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದೆ.

ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಯನ್ನು ಆ. 24ರವರೆಗೆ ಅಂದರೆ 12 ದಿನಗಳ ಕಾಲ ಇಡಿ ವಶಕ್ಕೆ ಒಪ್ಪಿಸಿದೆ. ಪ್ರಿವೆನ್ಶನ್ ಆಫ್ ಮನಿ ಲಾಂಡರಿಂಗ್ ಆಕ್ಟ್ 2002ರ ಕಲಂ 19ರ ಅಡಿಯಲ್ಲಿ ಆ. 13ರಂದು ಬಂಧಿಸಲಾಗಿದೆ.

ಬೆಳಗಾವಿ ನಗರದ ಮಲಮಾರುತಿ ಪೊಲೀಸ್ ಠಾಣೆಯಲ್ಲಿ ಅನಿಯಂತ್ರಿತ ಠೇವಣಿ ಯೋಜನೆಗಳ ನಿಷೇಧ ಕಾಯ್ದೆ-2019 ಹಾಗೂ ಕರ್ನಾಟಕ ಹಣಕಾಸು ಸಂಸ್ಥೆಗಳಲ್ಲಿನ ಠೇವಣಿದಾರರ ಹಿತಾಸಕ್ತಿ ಸಂರಕ್ಷಣಾ ಕಾಯ್ದೆ-2004ರ ಅಡಿಯಲ್ಲಿ ದಾಖಲಾಗಿದ್ದ ಎಫ್‌ಐಆರ್ ಆಧರಿಸಿ ಇ.ಡಿ. ತನಿಖೆ ಆರಂಭಿಸಿತ್ತು.

ಸಾರ್ವಜನಿಕರಿಗೆ ಅಸಾಮಾನ್ಯ ಪ್ರಮಾಣದ ಹಾಗೂ ಖಾತರಿಪಡಿಸಿದ ಆದಾಯದ ಭರವಸೆ ನೀಡಿ ಹಣ ಹೂಡಿಕೆ ಮಾಡುವಂತೆ ಪ್ರೇರೇಪಿಸಲಾಗಿತ್ತು ಎಂಬ ಆರೋಪ ಎಫ್‌ಐಆರ್‌ನಲ್ಲಿದೆ.

ರೂ. 2,110.97 ಕೋಟಿ ಸಂಗ್ರಹ: ತನಿಖೆಯಲ್ಲಿ ‘ಶಿವಂ ಅಸೋಸಿಯೇಟ್ಸ್’ ಸಂಸ್ಥೆಯು ಕರ್ನಾಟಕ, ಮಹಾರಾಷ್ಟ್ರ, ಗೋವಾ ಮತ್ತು ಛತ್ತೀಸ್‌ಗಢ ಸೇರಿದಂತೆ ಹಲವು ರಾಜ್ಯಗಳಲ್ಲಿ ವ್ಯವಸ್ಥಿತ ಜಾಲದ ಮೂಲಕ ಸಾರ್ವಜನಿಕರಿಂದ ರೂ. 2,110.97 ಕೋಟಿ ಸಂಗ್ರಹಿಸಿರುವುದು ಬೆಳಕಿಗೆ ಬಂದಿದೆ ಎಂದು ಇ.ಡಿ. ತಿಳಿಸಿದೆ.