‘ಮತದಾನದ ಹಕ್ಕಿಗಾಗಿ ಭಿಕ್ಷೆ ಬೇಡುವ ಸ್ಥಿತಿ ಬೇಡ’: ಚುನಾವಣಾ ಆಯೋಗದ ವಿರುದ್ಧ ಪ್ರಕಾಶ್ ರಾಜ್ ಆಕ್ರೋಶ
ಬೆಂಗಳೂರು: ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (SIR) ಹೆಸರಿನಲ್ಲಿ ಅರ್ಹ ಮತದಾರರ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ ಎಂದು ಆರೋಪಿಸಿರುವ ನಟ ಪ್ರಕಾಶ್ ರಾಜ್, ಚುನಾವಣಾ ಆಯೋಗದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ಬೆಂಗಳೂರಿನ ಪ್ರೆಸ್ಕ್ಲಬ್ನಲ್ಲಿ ಮತದಾರರ ಪಟ್ಟಿಯಿಂದ ಹೆಸರು ಡಿಲೀಟ್ ಆಗಿರುವವರೊಂದಿಗೆ ಸುದ್ದಿಗೋಷ್ಠಿ ನಡೆಸಿದ ಅವರು, “ಮತದಾನದ ಹಕ್ಕು ನಮ್ಮ ಮೂಲಭೂತ ಹಕ್ಕು. ಅದನ್ನು ಖಚಿತಪಡಿಸಿಕೊಳ್ಳಲು ಜನರು ಅಧಿಕಾರಿಗಳ ಹಿಂದೆ ಅಲೆಯುವ ಹಾಗೂ ಭಿಕ್ಷೆ ಬೇಡುವ ಸ್ಥಿತಿ ನಿರ್ಮಾಣ ಮಾಡಬೇಡಿ” ಎಂದು ಹೇಳಿದರು.
ಸ್ಥಳಾಂತರಗೊಂಡ ಮತದಾರರಿಗೆ ಫಾರಂ ನಂ.8 ಮೂಲಕ ವಿಳಾಸ ಬದಲಾವಣೆಗೆ ಅವಕಾಶ ನೀಡಬೇಕಿದ್ದು, ಬದಲಾಗಿ ಹೆಸರು ಡಿಲೀಟ್ ಮಾಡಿ ಫಾರಂ ನಂ.6 ಸಲ್ಲಿಸುವಂತೆ ಹೇಳುವುದು ಜನರನ್ನು ಹೊರಗುಳಿಸುವ ಕ್ರಮವಾಗಿದೆ ಎಂದು ಅವರು ಆರೋಪಿಸಿದರು. ಆಗಸ್ಟ್ 17ರಂದು ಪರಿಷ್ಕರಣೆ ಪ್ರಕ್ರಿಯೆ ಪೂರ್ಣಗೊಳ್ಳಲಿದ್ದು, ಅಷ್ಟರೊಳಗೆ ಕ್ರಮ ಕೈಗೊಳ್ಳದಿದ್ದರೆ ರಾಜ್ಯಾದ್ಯಂತ ಪ್ರತಿಭಟನೆ ಹಾಗೂ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡುವುದಾಗಿ ಎಚ್ಚರಿಸಿದರು.
ತಮ್ಮ ಹೆಸರು ಡಿಲೀಟ್ ಆಗಿರುವ ವಿಚಾರ ಸೆಲೆಬ್ರಿಟಿಯಾಗಿರುವ ಕಾರಣ ಹೆಚ್ಚು ಪ್ರಚಾರ ಪಡೆದಿದೆ. ಆದರೆ ಸಾಮಾನ್ಯ ಜನರ ಸಮಸ್ಯೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಪ್ರಕಾಶ್ ರಾಜ್ ಒತ್ತಾಯಿಸಿದರು. SIR ವಿರೋಧಿ ಮುಖಂಡ ನೂರ್ ಶ್ರೀಧರ್ ಕೂಡ ಮಾತನಾಡಿ, ಪ್ರಕ್ರಿಯೆ ಪೂರ್ಣಗೊಳಿಸಲು ಅಧಿಕಾರಿಗಳ ಮೇಲೆ ಒತ್ತಡ ಹೇರಲಾಗುತ್ತಿದೆ ಎಂದು ಆರೋಪಿಸಿದರು.
- ವಿಮಾನದಲ್ಲಿ ಹೈಜಾಕ್ ಭೀತಿ: ಬಳಿಕ ಹೊರಬಿತ್ತು ಅಚ್ಚರಿ ಮಾಹಿತಿ
- ಚಿತ್ರದುರ್ಗದಲ್ಲಿ ವಿಜಯೇಂದ್ರ: ಹರಿಪ್ರಸಾದ್ ವಿರುದ್ಧ ವಾಗ್ದಾಳಿ, ‘ಮಾದಿಗ ಮುನ್ನಡೆ-2’ ಸಮಾವೇಶಕ್ಕೆ ಚಾಲನೆ
- ಮೈಸೂರಿನಲ್ಲಿ ಸೂಪರ್ಸ್ಟಾರ್ ರಜನಿಕಾಂತ್: ಚಾಮುಂಡೇಶ್ವರಿ ತಾಯಿಯ ದರ್ಶನ ಪಡೆದ ತಲೈವಾ
- KRIDL AEE ಪರ್ವೇಜ್ ನಾಪತ್ತೆ: ಭೋಪಾಲ್ನಲ್ಲಿ CCTV ಸುಳಿವು
- ಅಮೆರಿಕ ಸರ್ಕಾರದ Digital ಹೆಜ್ಜೆ: 29,000 ವೆಬ್ಸೈಟ್ಗಳಿಗೆ ಒಂದೇ ತಾಣ






















