SK Home Ad
Home ಸಿನಿ ಮಿಲ್ಸ್ ವಿಷ್ಣುವರ್ಧನ್ ಅಮೃತ ಮಹೋತ್ಸವಕ್ಕೆ ಸುದೀಪ್ ಗೈರು: ಅಭಿಮಾನಿಗಳಲ್ಲಿ ಕ್ಷಮೆಯಾಚನೆ

ವಿಷ್ಣುವರ್ಧನ್ ಅಮೃತ ಮಹೋತ್ಸವಕ್ಕೆ ಸುದೀಪ್ ಗೈರು: ಅಭಿಮಾನಿಗಳಲ್ಲಿ ಕ್ಷಮೆಯಾಚನೆ

0
7

ಬೆಂಗಳೂರು: ನಟ ಕಿಚ್ಚ ಸುದೀಪ್ ಅವರು ನಟ ವಿಷ್ಣುವರ್ಧನ್ ಅವರ ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ವೈಯಕ್ತಿಕ ಕಾರಣಗಳಿಂದಾಗಿ ಹಾಜರಾಗಲು ಸಾಧ್ಯವಾಗುತ್ತಿಲ್ಲ ಅದಕ್ಕಾಗಿ ಕ್ಷಮಿಸಿ ಎಂದು ಅಭಿಮಾನಿಗಳಿಗೆ ಕ್ಷಮೆ ಕೋರಿದ್ದಾರೆ.

ಈ ಕುರಿತು ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿರುವ ಸುದೀಪ್, ವಿಷ್ಣುವರ್ಧನ್ ಅಭಿಮಾನಿಗಳಿಗೆ ಪ್ರೀತಿಯ ವಂದನೆ ಸಲ್ಲಿಸಿದ್ದಾರೆ. ಕಾರ್ಯಕ್ರಮಕ್ಕೆ ಹಾಜರಾಗಲು ಸಾಧ್ಯವಾಗದಿರುವುದಕ್ಕೆ ತೀವ್ರ ವಿಷಾದ ವ್ಯಕ್ತಪಡಿಸಿದ್ದಾರೆ.

ವಿಷ್ಣುವರ್ಧನ್ ಅವರು ತಮ್ಮ ಪಾಲಿಗೆ ಸದಾ ಆದರ್ಶ ಹಾಗೂ ಸ್ಫೂರ್ತಿಯಾಗಿದ್ದಾರೆ. ಮುಂದೆಯೂ ಅವರು ತಮ್ಮ ಆರಾಧ್ಯ ನಟರಾಗಿಯೇ ಉಳಿಯಲಿದ್ದಾರೆ ಎಂದು ಸುದೀಪ್ ಹೇಳಿದ್ದಾರೆ.

‘ಈ ವಿಶೇಷ ದಿನದಂದು ನಿಮ್ಮೆಲ್ಲರ ನಡುವೆ ಇರಲು ಸಾಧ್ಯವಾಗದಿರುವುದು ನನಗೆ ತುಂಬಾ ಬೇಸರ ತಂದಿದೆ. ಆದರೆ ನನ್ನ ಗುರುಗಳಾದ ವಿಷ್ಣು ಸರ್‌ಗಾಗಿ ಮಾಡಬೇಕಾದ ಯಾವುದೇ ಕೆಲಸಕ್ಕೂ, ಅವರ ಪರವಾಗಿ ನಿಲ್ಲುವ ಸಂದರ್ಭದಲ್ಲೂ ನಾನು ಸದಾ ನಿಮ್ಮೊಂದಿಗಿರುತ್ತೇನೆ’ ಎಂದು ಸುದೀಪ್ ತಿಳಿಸಿದ್ದಾರೆ.

ಕಾರ್ಯಕ್ರಮಕ್ಕೆ ಬರಲು ಸಾಧ್ಯವಾಗದ ಕಾರಣ ಅಭಿಮಾನಿಗಳಲ್ಲಿ ಕ್ಷಮೆಯಾಚಿಸಿರುವ ಅವರು ಸುದೀಪ್‌ ಸಂದೇಶದ ಕೊನೆಯಲ್ಲಿ ‘ನಿಮ್ಮ ಸಹೋದರ ಕಿಚ್ಚ ಸುದೀಪ್’ ಎಂದು ಬರೆದುಕೊಂಡಿದ್ದಾರೆ.