SK Home Ad
Home ಸಿನಿ ಮಿಲ್ಸ್ ‘ಪ್ರೇಮದ ಊರಲಿ’ ನಟ ಶ್ರೀರಾಮ್ ಹೇಳಿಕೆ ವಿವಾದ: ಯಶ್ ಅಭಿಮಾನಿಗಳ ಬಳಿ ಬಹಿರಂಗ ಕ್ಷಮೆ!

‘ಪ್ರೇಮದ ಊರಲಿ’ ನಟ ಶ್ರೀರಾಮ್ ಹೇಳಿಕೆ ವಿವಾದ: ಯಶ್ ಅಭಿಮಾನಿಗಳ ಬಳಿ ಬಹಿರಂಗ ಕ್ಷಮೆ!

0
6

ಬೆಂಗಳೂರು: ಸ್ಯಾಂಡಲ್‌ವುಡ್‌ನಲ್ಲಿ ಇತ್ತೀಚೆಗೆ ಬಿಡುಗಡೆಯಾಗಿ ಯಶಸ್ಸು ಕಂಡಿರುವ ‘ಪ್ರೇಮದ ಊರಲಿ’ ಚಿತ್ರದ ನಟ ಶ್ರೀರಾಮ್ ಅವರ ಇತ್ತೀಚಿನ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ, “ಕನ್ನಡ ಚಿತ್ರರಂಗವನ್ನು ಯಾರೊಬ್ಬರೂ ಒಬ್ಬರೇ ಎತ್ತಲು ಸಾಧ್ಯವಿಲ್ಲ, ಹಿರಿಯ ನಟರು ಮತ್ತು ಪ್ರೇಕ್ಷಕರ ಶ್ರಮದಿಂದಷ್ಟೇ ಇದು ಬೆಳೆದಿದೆ” ಎಂದಿದ್ದರು.

ಈ ಹೇಳಿಕೆಯು ರಾಕಿಂಗ್ ಸ್ಟಾರ್ ಯಶ್ ಅವರಿಗೆ ನೀಡಿದ ಪರೋಕ್ಷ ಟಾಂಗ್ ಎಂದು ಭಾವಿಸಿದ ಯಶ್ ಅಭಿಮಾನಿಗಳು ಜಾಲತಾಣದಲ್ಲಿ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ವಿವಾದ ಮಿತಿ ಮೀರುತ್ತಿದ್ದಂತೆ ಎಚ್ಚೆತ್ತ ನಟ ಶ್ರೀರಾಮ್, ತಕ್ಷಣವೇ ಸ್ಪಷ್ಟನೆ ನೀಡುವ ಮೂಲಕ ವಿವಾದಕ್ಕೆ ತೆರೆ ಎಳೆಯಲು ಮುಂದಾಗಿದ್ದಾರೆ.

“ಯಾರಿಗೂ ಟಾಂಗ್ ನೀಡಿಲ್ಲ, ಅದು ನನ್ನ ಸಿನಿಮಾದ ಬಗ್ಗೆ ಆಡಿದ ಮಾತು ಅಷ್ಟೇ. ವೈರಲ್ ಆಗಿರುವ ವಿಡಿಯೋ ಅಪೂರ್ಣವಾಗಿದೆ. ಅಣ್ಣಾವ್ರ ಮೇಲಿನ ಅಭಿಮಾನದಿಂದ ಆಡಿದ ಮಾತಿಗೆ ಬೇರೆ ಅರ್ಥ ಕಲ್ಪಿಸಬೇಡಿ. ನನ್ನ ಮಾತಿನಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮಿಸಿ” ಎಂದು ಪೂರ್ಣ ವೀಡಿಯೋವನ್ನು ಹಂಚಿಕೊಂಡು ಶ್ರೀರಾಮ್ ಬಹಿರಂಗವಾಗಿ ಕ್ಷಮೆಯಾಚಿಸಿದ್ದಾರೆ.