SK Home Ad
Home ಸಿನಿ ಮಿಲ್ಸ್ BBK13: ಬಿಗ್‌ ಬಾಸ್ ಮನೆಯಲ್ಲಿ ಮತ್ತೆ ಯಶಸ್‌-ಮಂಜ ಜಗಳ: ಟಾಸ್ಕ್‌ ಮಧ್ಯೆ ಕೆದಕಿದ ಹಳೆಯ ಗಾಯ!

BBK13: ಬಿಗ್‌ ಬಾಸ್ ಮನೆಯಲ್ಲಿ ಮತ್ತೆ ಯಶಸ್‌-ಮಂಜ ಜಗಳ: ಟಾಸ್ಕ್‌ ಮಧ್ಯೆ ಕೆದಕಿದ ಹಳೆಯ ಗಾಯ!

0
6

BBK13: ‘ಬಿಗ್‌ ಬಾಸ್ ಕನ್ನಡ ಸೀಸನ್-13’ರ ಆಟ 9ನೇ ವಾರಕ್ಕೆ ಕಾಲಿಟ್ಟಿದ್ದು, ಮನೆಯಲ್ಲಿ ಕ್ಯಾಪ್ಟನ್‌ ಯಶಸ್‌ ಕೃಷ್ಣ ಹಾಗೂ ಅತಿಥಿಯಾಗಿ ಎಂಟ್ರಿ ಕೊಟ್ಟಿರುವ ಮಾಡರ್ನ್ ಮಹಾಕವಿ ಮಂಜ ನಡುವಿನ ವೈಷಮ್ಯ ಮತ್ತಷ್ಟು ಭುಗಿಲೆದ್ದಿದೆ. ಈ ಹಿಂದೆ ದೊಡ್ಡ ಗಲಾಟೆ ಮಾಡಿಕೊಂಡಿದ್ದ ಇವರಿಬ್ಬರೂ ಈಗ ಬಿಗ್‌ ಬಾಸ್ ನೀಡುತ್ತಿರುವ ಟಾಸ್ಕ್‌ ಒಂದರಲ್ಲಿ ನಾಯಕರಾಗಿ ಮುಖಾಮುಖಿಯಾಗಿದ್ದು, ಆಟದ ಮಧ್ಯೆ ಏಕವಚನದಲ್ಲಿ ನಿಂದಿಸಿಕೊಳ್ಳುವ ಮೂಲಕ ಹಳೆಯ ಗಾಯವನ್ನು ಕೆದಕಿಕೊಂಡಿದ್ದಾರೆ.

ಸದ್ಯ ನಡೆಯುತ್ತಿರುವ ಟಾಸ್ಕ್‌ನಲ್ಲಿ ಯಶಸ್‌ ಕೃಷ್ಣ ನೇತೃತ್ವದ ಕಪ್ಪು ತಂಡ ಹಾಗೂ ಮಂಜ ನೇತೃತ್ವದ ಕೆಂಪು ತಂಡ ಸ್ಪರ್ಧಿಸುತ್ತಿವೆ. ಇದರಲ್ಲಿ ಎದುರಾಳಿ ತಂಡದ ನಾಯಕನ ಫೋಟೋಗೆ ಬಣ್ಣ ಬಳಿಯುವುದು ಟಾಸ್ಕ್‌ನ ಪ್ರಮುಖ ನಿಯಮವಾಗಿದೆ. ಇಬ್ಬರೂ ನಾಯಕರು ಎದುರಾಳಿ ತಂಡದ ಆಟವನ್ನು ನಿಯಂತ್ರಿಸುವ ಉಸ್ತುವಾರಿ ಹೊತ್ತಿದ್ದರು. ಆಟದ ವೇಳೆ ಮಂಜ ತಂಡದ ಸದಸ್ಯ ಧನುಷ್ ಬಣ್ಣ ಹಚ್ಚಲು ಬಂದಾಗ, ಮಂಜ ‘ಪಾಸ್’ ನೀಡಿದ್ದರು. ಈ ಸಮಯವನ್ನು ಬಳಸಿಕೊಂಡು ಬಣ್ಣ ಬಳಿಯಲು ಯತ್ನಿಸಿದ್ದನ್ನು ಯಶಸ್ ಪಡೆಯ ಗಗನ್ ಮತ್ತು ತಾಂಡವ್ ವಿರೋಧಿಸಿದರು.

ಈ ಹಂತದಲ್ಲಿ ಮಂಜ ಮತ್ತು ಯಶಸ್‌ ನಡುವೆ ಗಂಭೀರ ವಾಗ್ವಾದ ಆರಂಭವಾಯಿತು. ಯಶಸ್‌ ಕೋಪಗೊಂಡು “ಪಾಜ್‌ ಕೊಟ್ಟು ಸ್ಟಾಚ್ಯು ತರ ನಿಂತುಕೊಂಡು ಬಿಟ್ಟನ ಈ ನನ್ನ ಮಗ” ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದರು. ಇದಕ್ಕೆ ಮಂಜ “ನಾನು ಎಂದೂ ನನ್ನ ಮಗ ಎಂದು ಬೈದಿಲ್ಲ” ಎಂದು ಮರುಪ್ರಶ್ನೆ ಹಾಕಿದಾಗ, ಯಶಸ್‌ “ಅದಕ್ಕಿಂತ ಜಾಸ್ತಿ ಬೈದಿದ್ದೀಯಾ” ಎಂದು ಹಳೆಯ ಗಲಾಟೆಯನ್ನು ನೆನಪಿಸಿ ಕೆಂಡಾಮಂಡಲವಾದರು. ಇಬ್ಬರ ನಡುವಿನ ಈ ಹೊಸ ರಂಪಾಟ ಬಿಗ್ ಬಾಸ್ ಮನೆಯಲ್ಲಿ ಮತ್ತಷ್ಟು ಉದ್ವಿಗ್ನತೆ ಸೃಷ್ಟಿಸಿದೆ.