Home Advertisement
Home ಸಿನಿ ಮಿಲ್ಸ್ ‘ಲಕ್ಷ್ಮೀ ನಿವಾಸ’ ಸಿದ್ದೇಗೌಡ: ಮೊದಲ ಕಾರು ಖರೀದಿಸಿದ ಧನಂಜಯ್‌ ಭಾವುಕ, ತಾಯಿ, ತಂಗಿ ಜೊತೆಗೆ ಹರ್ಷ...

‘ಲಕ್ಷ್ಮೀ ನಿವಾಸ’ ಸಿದ್ದೇಗೌಡ: ಮೊದಲ ಕಾರು ಖರೀದಿಸಿದ ಧನಂಜಯ್‌ ಭಾವುಕ, ತಾಯಿ, ತಂಗಿ ಜೊತೆಗೆ ಹರ್ಷ ಹಂಚಿಕೊಂಡ ನಟ

0
72

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಲಕ್ಷ್ಮೀ ನಿವಾಸ’ ಧಾರಾವಾಹಿ ಜನಪ್ರಿಯತೆ ಗಳಿಸಿದೆ. ಸಿದ್ದೇಗೌಡ ಪಾತ್ರದಲ್ಲಿ ನಟ ಧನಂಜಯ್‌ ಅಭಿನಯಿಸುತ್ತಿದ್ದಾರೆ. ಇವರ ತಾಯಿ ಕೂಡ ಇದೇ ಧಾರಾವಾಹಿಯಲ್ಲಿ ನಟನೆ ಮಾಡಿದ್ದಾರೆ. ಸಹೋದರಿ ಕೂಡ ಈ ಧಾರಾವಾಹಿಗೆ ಬಣ್ಣ ಹಚ್ಚಿದ್ದಾರೆ. ಒಟ್ಟು ಕುಟುಂಬ ‘ಲಕ್ಷ್ಮೀ ನಿವಾಸ’ದಲ್ಲಿ ಬಣ್ಣ ಹಚ್ಚಿರೋದು ವಿಶೇಷ. ಇವರ ಪರಿಶ್ರಮದಿಂದ ಮೊದಲ ಕಾರು ಖರೀದಿ ಮಾಡಿದ್ದಾರೆ. ಈ ಕುರಿತು ನಟ ಧನಂಜಯ್‌ ಭಾವುಕ ಪೋಸ್ಟ್‌ ಶೇರ್ ಮಾಡಿದ್ದಾರೆ.‘ಲಕ್ಷ್ಮೀ ನಿವಾಸ’ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಟಾಪ್‌ ಸ್ಥಾನದಲ್ಲಿದೆ. ಬಹಳ ದೊಡ್ಡ ಕಲಾವಿದರ ತಂಡ ಹೊಂದಿರುವ ಹೆಗ್ಗಳಿಕೆ ಈ ಧಾರಾವಾಹಿಯದ್ದು. ಮುಖ್ಯವಾಗಿ ಸಿದ್ದೇಗೌಡ ಮತ್ತು ಭಾವನಾ ಪಾತ್ರಕ್ಕೆ ಅಪಾರ ಅಭಿಮಾನಿಗಳಿದ್ದಾರೆ. ಈ ಜೋಡಿ ಪ್ರಾರಂಭದ ದಿನಗಳಲ್ಲಿ ಸಖತ್‌ ಮೋಡಿ ಮಾಡಿತ್ತು. ಈ ಪಾತ್ರವನ್ನ ನಿರ್ವಹಿಸುತ್ತಿರುವ ನಟ ಧನಂಜಯ್‌ ಮತ್ತು ದಿಶಾ ಮದನ್‌ ಅವರಿಗೆ ಜನಪ್ರಿಯತೆ ತಂದುಕೊಟ್ಟಿದೆ.


ಕಷ್ಟಗಳನ್ನ ನೋಡಿಕೊಂಡು ಬೆಳೆದ ನಟ ಧನಂಜಯ್‌ ಅವರು ಕೊನೆಗೂ ತಮ್ಮ ಕನಸನ್ನ ನನಸು ಮಾಡಿಕೊಂಡಿದ್ದಾರೆ. ತಮ್ಮ ಪರಿಶ್ರಮದಿಂದ ಮೊಟ್ಟ ಮೊದಲ ಕಾರು ಖರೀದಿ ಮಾಡಿದ್ದಾರೆ.ಕುಟುಂಬ ಸಿದ್ದೇಗೌಡ ಪಾತ್ರಧಾರಿ ನಟ ಧನಂಜಯ್‌ ಅವರು ಡ್ಯಾನ್ಸ್‌ನಲ್ಲಿ ಆಸಕ್ತಿ ಹೊಂದಿದ್ದರು. ಇದು ಅವರ ನಟನೆ ಜರ್ನಿ ಶುರುವಾಗಲೂ ನಾಂದಿಯಾಯ್ತು. ‘ಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್‌’ ಶೋ ವಿನ್ನರ್‌ ಆಗಿದ್ದಾರೆ. ತಾಯಿ ಅನ್ನಪೂರ್ಣ ಇದೇ ‘ಲಕ್ಷ್ಮೀ ನಿವಾಸ’ದಲ್ಲಿ ಚೆಲುವಿ ತಾಯಿ, ವೆಂಕಿ ಅತ್ತೆ ಬೆಟ್ಟವ್ವನ ಪಾತ್ರ ಮಾಡಿದ್ದಾರೆ. ಇನ್ನು ಸಹೋದರಿ ಹೆಸರು ಮಹಾಲಕ್ಷ್ಮೀ.

ವಿಶ್ವ ಪಾತ್ರದ ಜೋಡಿ ತನು ಪಾತ್ರವನ್ನ ನಿರ್ವಹಿಸುತ್ತಿದ್ದಾರೆ.ಧನಂಜಯ್‌ ಭಾವುಕ “ಕನಸು ನನಸಾಯಿತು, ನಾವು ನಮ್ಮ ಮೊದಲ ಕಾರನ್ನು ಖರೀದಿಸಿದ್ದೇವೆ. ಇದು ನಿಜವಾಗಿಯೂ ನಮ್ಮ ಜೀವನದ ಅತ್ಯಂತ ಸಂತೋಷದ ಕ್ಷಣಗಳಲ್ಲಿ ಒಂದಾಗಿದೆ. ಇದು ಕೇವಲ ಕಾರಲ್ಲ, ಇದು ಒಂದು ಭಾವನೆ, ಒಂದು ಕನಸು, ಸಾಧನೆ ಮತ್ತು ನಾವು ಶಾಶ್ವತವಾಗಿ ಚರೀಶ್‌ ಮಾಡುವ ನೆನಪು. ಪ್ರತಿಯೊಬ್ಬ ಮಧ್ಯಮ ವರ್ಗದ ಹುಡುಗನೂ ಒಂದು ದಿನ ಕಾರು ಹೊಂದುವ ಕನಸು ಕಾಣುತ್ತಾನೆ. ನಾನು ಪ್ರತಿ ಬಾರಿ ರಸ್ತೆಯಲ್ಲಿ ಕಾರುಗಳನ್ನು ನೋಡಿದಾಗ ನಾನು ನನ್ನ ಸ್ವಂತ ಕಾರು ಯಾವಾಗ ಖರೀದಿಸುತ್ತೇನೆ? ಎಂದು ಮೌನವಾಗಿ ಯೋಚಿಸುತ್ತಿದ್ದೆ.. ದೇವರ ದಯೆ ಮತ್ತು ಆಶೀರ್ವಾದದಿಂದ ಅಂತಿಮವಾಗಿ ಅದನ್ನು ಸಾಧಿಸಿದ್ದೇವೆ.

ನಾವು ನಮ್ಮ ಕಾರನ್ನು ಖರೀದಿಸಿದ್ದೇವೆ. ಶುದ್ಧ ಪ್ರಯತ್ನ, ಕಠಿಣ ಪರಿಶ್ರಮ, ತಾಳ್ಮೆ ಮತ್ತು ನಂಬಿಕೆಯ ಮೂಲಕ ಈ ಮೈಲಿಗಲ್ಲನ್ನು ಸಾಧಿಸಿದ್ದೇವೆ. ಸಂತೋಷ, ಕೃತಜ್ಞತೆಯಿಂದ ಹೃದಯವು ತುಂಬಿದೆ. ಎಲ್ಲದರಲ್ಲೂ ನನ್ನ ಪಕ್ಕದಲ್ಲಿ ನಿಂತಿದ್ದಕ್ಕಾಗಿ ನನ್ನ ತಾಯಿಗೆ ತುಂಬಾ ವಿಶೇಷವಾದ ಧನ್ಯವಾದಗಳು” ಎಂದು ನಟ ಧನಂಜಯ್‌ ಭಾವುಕವಾಗಿ ಪೋಸ್ಟ್ ಶೇರ್ ಮಾಡಿದ್ದಾರೆ.