SK Home Ad
Home ನಮ್ಮ ಜಿಲ್ಲೆ ಉತ್ತರ ಕನ್ನಡ ಮಹಾಬಲೇಶ್ವರ ಮಂದಿರ ಗರ್ಭಗುಡಿಗೆ ನುಗ್ಗಿದ ನೀರು

ಮಹಾಬಲೇಶ್ವರ ಮಂದಿರ ಗರ್ಭಗುಡಿಗೆ ನುಗ್ಗಿದ ನೀರು

0
117

ಗೋಕರ್ಣ: ಧಾರಾಕಾರ ಮಳೆಯ ಕಾರಣ ನೀರು ಸರಾಗವಾಗಿ ಹರಿದುಹೋಗದೆ ಪುರಾಣ ಪ್ರಸಿದ್ಧ ಮಹಾಬಲೇಶ್ವರ ಮಂದಿರದ ಗರ್ಭಗುಡಿಯೊಳಗೆ ಮಳೆ ನೀರು ನುಗ್ಗಿ ಅವಾಂತರವಾಗಿದೆ.

ಸಂಗಮ ನಾಲಾ ಮೂಲಕ ಸಮುದ್ರ ಸೇರುವ ಸ್ಥಳದಲ್ಲಿ ಬೃಹತ್ ಪ್ರಮಾಣದಲ್ಲಿ ಮರಳು ತುಂಬಿ ದಿಬ್ಬವಾಗಿತ್ತು. ಭಾರಿ ಮಳೆಯಿಂದ ನೀರು ಮುಂದೆ ಹೋಗದೆ ಸೋಮಸೂತ್ರದ ಮೂಲಕ ವಾಪಸ್ ಮಹಾಬಲೇಶ್ವರ ಮಂದಿರ ಗರ್ಭಗುಡಿಗೆ ನುಗ್ಗಿತ್ತು. ಇದರಿಂದ ಭಕ್ತರಿಗೆ ಸೋಮವಾರ ದೇವರ ಸ್ಪರ್ಶ ದರ್ಶನಕ್ಕೆ ಸಾಧ್ಯವಾಗಲಿಲ್ಲ. ನಂದಿ ಮಂಟಪದಿಂದ ಹೊರಗಡೆ ದರ್ಶನಕ್ಕೆ ವ್ಯವಸ್ಥೆ ಮಾಡಿಕೊಡಲಾಗಿತ್ತು.

ಸಮುದ್ರ ಸೇರುವ ಸಂಗಮ ನಾಲಾ ಬಳಿ ಸಮುದ್ರದ ಅಲೆ ಆರ್ಭಟಕ್ಕೆ ಮರಳು ತುಂಬುತ್ತದೆ. ನೀರು ಸರಾಗವಾಗಿ ಮುಂದಕ್ಕೆ ಹೋಗಲಾಗದೆ ವಾಪಸ್ ಆಗಿ ದೇವರ ಗರ್ಭಗುಡಿಯೊಳಗೆ ಬರುತ್ತದೆ.