SK Home Ad
Home ಸುದ್ದಿ ರಾಜ್ಯ ನೀಟ್ ಹೋರಾಟದಿಂದ ಸಂಪುಟ ವಿಸ್ತರಣೆ ಮುಂದಕ್ಕೆ

ನೀಟ್ ಹೋರಾಟದಿಂದ ಸಂಪುಟ ವಿಸ್ತರಣೆ ಮುಂದಕ್ಕೆ

0
11

ಬೆಂಗಳೂರು: ನೀಟ್ ಹೋರಾಟ ಸೇರಿದಂತೆ ವಿವಿಧ ಕಾರಣಗಳಿಂದ ಮುಂದೂಡಲ್ಪಡುತ್ತಿರುವ ರಾಜ್ಯ ಸಚಿವ ಸಂಪುಟ ವಿಸ್ತರಣೆ ಆದಷ್ಟೂ ಶೀಘ್ರವಾಗಿ ಆಗಲಿದೆ ಎಂದು ಸಿಎಂ ಡಿ.ಕೆ. ಶಿವಕುಮಾರ್ ಪುನರುಚ್ಚರಿಸಿದ್ದಾರೆ.

ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾವು ಅದೇ ಕಾರಣಕ್ಕೆ ದೆಹಲಿಗೆ ತೆರಳಿದ್ದರೂ, ನೀಟ್ ವಿಚಾರಕ್ಕೆ ನಡೆಯುತ್ತಿರುವ ಪ್ರತಿಭಟನೆಯಲ್ಲಿ ನಮ್ಮ ನಾಯಕರು ಭಾಗಿಯಾಗಿರುವುದರಿಂದ ಚರ್ಚೆ ಸಾಧ್ಯವಾಗಿಲ್ಲ. ಹಾಗಿದ್ದರೂ ಶೀಘ್ರವೇ ಸರ್ಕಾರದ 2ನೇ ಹಂತದ ಸಚಿವ ಸಂಪುಟ ವಿಸ್ತರಣೆ ಶೀಘ್ರವಾಗಿ ನಡೆಯಲಿದೆ ಎಂದು ತಿಳಿಸಿದರು.

ಎಲ್ಲವೂ ವರಿಷ್ಠರ ತೀರ್ಮಾನ: ಪಕ್ಷದ ಹೈಕಮಾಂಡ್ ಯಾವುದೇ ಕ್ಷಣದಲ್ಲೂ ದೆಹಲಿಗೆ ಆಹ್ವಾನಿಸಬಹುದು ಎಂಬ ನಿರೀಕ್ಷೆಯಲ್ಲಿದ್ದೇನೆ. ಕರೆ ಬಂದ ಕೂಡಲೇ ದೆಹಲಿಗೆ ತೆರಳಿ ನಮ್ಮ ನಾಯಕರೊಂದಿಗೆ ಸಮಾಲೋಚಿಸಿ ಸಚಿವರ ಪಟ್ಟಿಯನ್ನು ಅಂತಿಮಗೊಳಿಸಲಾಗುವುದು ಎಂದರು.

ಇನ್ನೂ ಇಬ್ಬರು ಡಿಸಿಎಂ ಸ್ಥಾನ ಸೃಷ್ಟಿಯ ಬಗ್ಗೆ ನನಗೇನೂ ತಿಳಿಯದು. ಕೆಲವರ ಬೇಡಿಕೆ ಇದೆ. ಅದೆಲ್ಲವನ್ನೂ ಪಕ್ಷದ ವರಿಷ್ಠರು ತೀರ್ಮಾನ ಮಾಡಲಿದ್ದಾರೆ. ಅವರ ಆದೇಶವನ್ನು ಪಾಲನೆ ಮಾಡುವುದಷ್ಟೇ ನನ್ನ ಕೆಲಸ. ವಾರಾಂತ್ಯದಲ್ಲಿ ದೆಹಲಿಯಿಂದ ಬುಲಾವ್ ಬರುವ ನಿರೀಕ್ಷೆಯಲ್ಲಿದ್ದೇನೆ ಎಂದು ಸಿಎಂ ಡಿಕೆಶಿ ಮಾಹಿತಿ ನೀಡಿದರು.