ಗೋಕರ್ಣ: ಪುರಾಣ ಪ್ರಸಿದ್ಧ ಮಹಾಬಲೇಶ್ವರ ದೇವಸ್ಥಾನದ ಗರ್ಭಗುಡಿಯಿಂದ ಹೋಗುವ ತೀರ್ಥ ಸೋಮಸೂತ್ರದ ಹೊರ ಹೋಗದ ಪರಿಣಾಮ ಆತ್ಮಲಿಂಗ ಜಲಾವೃತಗೊಂಡಿತ್ತು.
ಮುಂಜಾನೆಯಿಂದ ಮಧ್ಯಾಹ್ನದವರೆಗೂ ಭಕ್ತರಿಗೆ ಹೊರಗಡೆಯಿಂದ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಸೋಮಸೂತ್ರ ಸಂಗಮ ನಾಲಾ ಸೇರುವಲ್ಲಿ ಹೂಳು ತುಂಬಿದ್ದರ ಪರಿಣಾಮ ದೇವಾಲಯದ ನೀರು ಹೊರ ಹೋಗದೆ ಒಳಗೆ ಸಂಗ್ರಹಣೆಯಾಗಿ ತೊಂದರೆಯಾಗುತ್ತಿದೆ.






















