ಬೆಳಗಾವಿ: ವಿವಾಹಕ್ಕೆ ಪೋಷಕರು ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಗೋವಾದ ಯುವ ಪ್ರೇಮಿಗಳು ದೇಗುಲದಲ್ಲಿ ಮದುವೆ ಮಾಡಿಕೊಂಡು ರಕ್ಷಣೆ ಕೋರಿ ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯ ಬಾಗಿಲು ತಟ್ಟಿರುವ ಘಟನೆ ನಡೆದಿದೆ.
ಈ ಜೋಡಿ ರೋಹನ್ ಮತ್ತು ಇಶಾ ಸ್ಕೇಟರ್. ಇಬ್ಬರೂ ಪ್ರಾಪ್ತ ವಯಸ್ಕರು. ರೋಹನ್ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಸುಲಧಾಳ ಗ್ರಾಮದ ನಿವಾಸಿ. ಗೋವಾದಲ್ಲಿ ಹಲವು ವರ್ಷಗಳಿಂದ ರೋಹನ್ ಆತನ ಕುಟುಂಬದೊಂದಿಗೆ ವಾಸವಿದ್ದಾನೆ. ಗೋವಾದಲ್ಲಿ ಯುವತಿಯ ಪೋಷಕರು ಈತನ ವಿರುದ್ಧ ಕಿಡ್ನ್ಯಾಪ್ ಕೇಸು ಹಾಕಿರುವುದರಿಂದ ಇದೀಗ ಪೊಲೀಸ್ ರಕ್ಷಣೆಗಾಗಿ ಈ ಜೋಡಿ ಗುರುವಾರ ಎಸ್ಪಿ ಬಳಿ ಬಂದಿದ್ದಾರೆ.





















