SK Home Ad
Home ನಮ್ಮ ಜಿಲ್ಲೆ ರಾಯಚೂರು ಮಂತ್ರಾಲಯದಲ್ಲಿ ಭಾರಿ ಮಳೆ: ಭಕ್ತರ ಪರದಾಟ

ಮಂತ್ರಾಲಯದಲ್ಲಿ ಭಾರಿ ಮಳೆ: ಭಕ್ತರ ಪರದಾಟ

0
90

ರಾಯಚೂರು: ಮಂತ್ರಾಲಯದಲ್ಲಿ ಶನಿವಾರ ರಾತ್ರಿ ಆರಂಭಗೊಂಡ ಮಳೆ ಪರಿಣಾಮ ಮಂತ್ರಾಲಯ ಶ್ರೀರಾಘವೇಂದ್ರ ಸ್ವಾಮಿಗಳ ದರ್ಶನಕ್ಕೆ ಬಂದ ಭಕ್ತರಿಗೆ ಪರದಾಡುವಂತಾಗಿದೆ.

ಶನಿವಾರ, ಭಾನುವಾರ ರಜೆಗಳಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಮಂತ್ರಾಲಯಕ್ಕೆ ಆಗಮಿಸಿದ್ದರು. ಆದರೆ, ವಸತಿ ಗೃಹಗಳ ದೊರಕದ ಹಿನ್ನೆಲೆಯಲ್ಲಿ ಶ್ರೀಮಠದ ಆವರಣದಲ್ಲಿಯೇ ಭಕ್ತರು ಮಲಗಿದ್ದರು.

ಶನಿವಾರ ರಾತ್ರಿ ಸುರಿದ ಮಳೆ ಹಿನ್ನೆಲೆಯಲ್ಲಿ ಶ್ರೀರಾಘವೇಂದ್ರ ಸ್ವಾಮಿಗಳ ಮಠದ ಎದುರಿನ ಆವರಣದಲ್ಲಿ ನೀರು ನಿಂತ ಹಿನ್ನೆಲೆಯಲ್ಲಿ ಮಲಗಿದ್ದ ಭಕ್ತರಿಗೆ ತೊಂದರೆಯಾಗಿತ್ತು. ಮಾಹಿತಿ ಪಡೆದ ಶ್ರೀಮಠದ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ಖುದ್ದಾಗಿ ಬಂದು ಶ್ರೀಮಠದ ಕಲ್ಯಾಣ ಮಂಟಪಗಳಿಗೆ ಹಾಗೂ ಅನ್ನಪೂರ್ಣ ಭೋಜನ ಶಾಲಾದಲ್ಲಿ ಮಲಗಲು ವ್ಯವಸ್ಥೆ ಮಾಡಿದರು.