SK Home Ad
Home ನಮ್ಮ ಜಿಲ್ಲೆ ರಾಯಚೂರು ಶಾಲೆ ನವೀಕರಣಕ್ಕೆ ಲಂಚ: ಶಿಕ್ಷಣ ಇಲಾಖೆ ಸಿಬ್ಬಂದಿ ಲೋಕಾ ಬಲೆಗೆ

ಶಾಲೆ ನವೀಕರಣಕ್ಕೆ ಲಂಚ: ಶಿಕ್ಷಣ ಇಲಾಖೆ ಸಿಬ್ಬಂದಿ ಲೋಕಾ ಬಲೆಗೆ

0
62

ರಾಯಚೂರು: ಖಾಸಗಿ ಶಾಲೆಯ ನವೀಕರಣಗೊಳಿಸಲು ಲಂಚಕ್ಕೆ ಕೈಯೊಡ್ಡಿದ ಶಿಕ್ಷಣ ಇಲಾಖೆಯ ಎಫ್‌ಡಿಸಿ ಲೋಕಾಯುಕ್ತರ ಬಲೆಗೆ ಬಿದ್ದ ಘಟನೆ ಗುರುವಾರ ನಡೆದಿದೆ.

ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರಥಮ ದರ್ಜೆ ಸಹಾಯಕ(ಎಫ್‌ಡಿಎ) ಮಹಾಬಲೇಶ್ವರ ಎಸ್ ಲೋಕಾಯುಕ್ತರ ಬಲೆಗೆ ಬಿದ್ದವರು. ವಿದ್ಯಾಜ್ಯೋತಿ ಎಂಬ
ಶಾಲೆಯ ಅನುಮತಿ ನವೀಕರಣಗೊಳಿಸಲು 25 ಸಾವಿರ ರೂಗಳ ಲಂಚದ ಬೇಡಿಕೆಯನ್ನು ಇಟ್ಟಿದ್ದ, ರಾಂಪುರದ ಸಿದ್ಧಪ್ಪ ಎಂಬುವವರು ಲಂಚ ನೀಡಲು ಮನಸ್ಸಿಲ್ಲದೇ ಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದರು.

ಗುರುವಾರ 15 ಸಾವಿರ ರೂಪಾಯಿಗಳ ಲಂಚವನ್ನು ಆರೋಪಿತ ಎಫ್‌ಡಿಎ ಮಹಾಬಲೇಶ್ವರ ಪಡೆಯುತ್ತಿರುವಾಗ ಲೋಕಾಯುಕ್ತರ ಅಧಿಕಾರಿಗಳು ಬೀಸಿದ ಜಾಲಕ್ಕೆ ಬಲೆಗೆ
ಬಿದಿದ್ದಾನೆ. ಆರೋಪಿಯನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ.