ಬೆಂಗಳೂರು: ಮಾಜಿ ಕ್ರಿಕೆಟರ್ ಹಾಗೂ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಇತ್ತೀಚಿನ ತಾಂತ್ರಿಕತೆ ಬೆಳವಣಿಗೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ಕ್ರಿಕೆಟ್ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ರೋಬೋ ತಂತ್ರಜ್ಞಾನ ಎಲ್ಲರನ್ನೂ ತನ್ನತ್ತ ಸೆಳೆಯುತ್ತಿದೆ ಎಂದು ವೆಂಕಿ ತಿಳಿಸಿದ್ದಾರೆ.
ಆಸ್ಟರ್ ಸಿಎಂಐ ಆಸ್ಪತ್ರೆ ಅತ್ಯಾಧುನಿಕ ನರವಿಜ್ಞಾನ ಚಿಕಿತ್ಸೆಯ ಉದ್ಘಾಟನೆ ಸಮಾರಂಭದಲ್ಲಿ ಪಾಲ್ಗೊಂಡಿದ್ದ ವೆಂಕಟೇಶ್ ಪ್ರಸಾದ್, ಆಸ್ಪತ್ರೆ ನ್ಯೂರೋ ಸರ್ಜರಿ ವಿಭಾಗದ ಅಡಿಯಲ್ಲಿ ಬೆನ್ನುಮೂಳೆ ಶಸ್ತ್ರಚಿಕಿತ್ಸೆ ಬಗ್ಗೆ ವಿವರಿಸುತ್ತಾ ಈ ರೀತಿ ಹೇಳಿದರು.
ಬೆನ್ನುಮೂಳೆ ಶಸ್ತ್ರಚಿಕಿತ್ಸೆ ಮಝೀರ್ ಎಕ್ಸ್ ಮತ್ತು ಮೆದುಳು ಹಾಗೂ ತಲೆ ಸಂಬಂಧಿಸಿ ಶಸ್ತ್ರಚಿಕಿತ್ಸೆ ಆರ್‌ಒಎಸ್‌ಎ ಎಂಬ ಎರಡು ಅತ್ಯಾಧುನಿಕ ರೋಬೋಟಿಕ್ ತಂತ್ರಜ್ಞಾನಗಳನ್ನು ಪರಿಚಿಯಿಸಲಾಗಿದೆ.
ಈ ರೋಬೋಟಿಕ್ ವ್ಯವಸ್ಥೆಗಳು ವೈದ್ಯರಿಗೆ ನಿಖರ ಹಾಗೂ ಸಂಕೀರ್ಣ ಶಸ್ತ್ರಚಿಕಿತ್ಸೆಗಳನ್ನು ಸುರಕ್ಷತೆಯಿಂದ ನಡೆಸಲು ಸಹಾಯ ಮಾಡಲಿವೆ. ಹಾಗಾಗಿ, ವೆಂಕಟೇಶ್ ಈ ಶಸ್ತ್ರಚಿಕಿತ್ಸೆಗಳನ್ನು ಮೆಚ್ಚಿಕೊಂಡಿದ್ದು, ಗುಣಗಾನ ಮಾಡಿದ್ದಾರೆ.






















