SK Home Ad
Home ನಮ್ಮ ಜಿಲ್ಲೆ ಕಲಬುರಗಿ ಕಲಬುರಗಿ-ಬೀದರನಲ್ಲಿ ಲಘು ಭೂಕಂಪನ

ಕಲಬುರಗಿ-ಬೀದರನಲ್ಲಿ ಲಘು ಭೂಕಂಪನ

0
30

ಕಲಬುರಗಿ: ನಗರ ಸೇರಿ ಸುತ್ತಮುತ್ತಲಿನ ಪ್ರದೇಶದಲ್ಲಿ ಬುಧವಾರ ತಡರಾತ್ರಿ 1.30ರ ಸುಮಾರಿಗೆ ಕೆಲ ಸೆಕೆಂಡ್‌ಗಳ ಭೂಮಿ ಕಂಪಿಸಿದ್ದು, ಜನ ಭಯಭೀತರಾಗಿ ಮನೆಗಳಿಂದ ಹೊರಗೆ ಓಡಿ ಬಂದಿರುವ ಘಟನೆ ಬೆಳಕಿಗೆ ಬಂದಿದೆ.

ಹೊಸ ಜೇವರ್ಗಿ ರಸ್ತೆಯ ಮಹಾವೀರ ನಗರ, ವೆಂಕಟೇಶ ನಗರ ಮತ್ತು ಹರಿಕೃಷ್ಣ ನಗರ ಸೇರಿ ವಿವಿಧೆಡೆ ಭೂಮಿ ಕಂಪಿಸಿರುವ ಬಗ್ಗೆ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಭೂಮಿ ಕಂಪಿಸುತ್ತಿದ್ದಂತೆ ಹಲವು ಮನೆಗಳಲ್ಲಿ ಬಾಗಿಲು ಕಿಟಕಿಗಳಲ್ಲಿ ಜೋರು ಸದ್ದು ಕೇಳಿಬಂದಿದೆ.

ಮನೆಯೊಳಗೆ ಮೇಲೆ ಇಟ್ಟಿದ್ದ ವಸ್ತುಗಳು ನೆಲಕ್ಕುರಳ್ಳಿ ಬಿದ್ದಿದ್ದು, ಆಗ ಜನರಿಗೆ ಇದು ಭೂಕಂಪದ ಪರಿಣಾಮವೆಂದು ಗೊತ್ತಾಗಿದೆ. ತಕ್ಷಣಕ್ಕೆ ಮನೆಯಿಂದ ಹೊರಗೆ ಬಂದು ಕೆಲಹೊತ್ತು ಕಾಯುವ ಪರಿಸ್ಥಿತಿ ಬಂತು. ಮನೆಯ ಕಿಡಕಿ, ಬಾಗಿಲು, ಅಲಮಾರ ಸೇರಿ ಹಲವು ವಸ್ತುಗಳು ಗಡಗಡ ನಡುಗಿರುವ ಅನುಭವ ಆಗಿದೆ. ಇದರಿಂದ ಅಲ್ಲಲ್ಲಿ ಮನೆಗಳಲ್ಲಿ ಬಿರುಕು ಬಿಟ್ಟಿವೆ.

ತಡರಾತ್ರಿ 4 ರಿಂದ 5 ಸೆಕೆಂಡ್ ಭೂಮಿ ಕಂಪನವಾಗಿದೆ. 257 ಕಿ.ಮೀ ದೂರದ ಮಹಾರಾಷ್ಟ್ರ ರಾಜ್ಯದ ಹಿಂಗೋಲಿಯಲ್ಲಿ ಬುಧವಾರ ರಾತ್ರಿ ಮೂರು ಬಾರಿ ಭೂಕಂಪವಾಗಿದೆ. ತಡರಾತ್ರಿ 1.37ರ ವೇಳೆಗೆ 4.6 ತೀವ್ರತೆ, 2.15 ರ ವೇಳೆಗೆ 3.6 ತೀವ್ರತೆ, 2.17ಕ್ಕೆ 3.9 ತೀವ್ರತೆಯೊಂದಿಗೆ 3.6 ಮ್ಯಾಗ್ನಿಟ್ಯೂಡ್‌ನ ಕಂಪನ. 10 ಕಿಮೀ ಆಳದಲ್ಲಿ ಸಂಭವಿಸಿದೆ.

1.41, 2.49 ಮತ್ತು 4.6 ರಷ್ಟು ತೀವ್ರತೆಯ ಕಂಪನ ಸಂಭವಿಸಿದೆ. ಮಹಾರಾಷ್ಟ್ರದಲ್ಲಿ ಭೂಕಂಪವಾಗಿದ್ದರಿಂದ ಗಡಿ ಜಿಲ್ಲೆಗಳಾದ ಬೀದರ ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ಭೂಕಂಪನ ಅನುಭವವಾಗಿದೆ ಎಂದು ಹವಾಮಾನ ಇಲಾಖೆಯ ಮೂಲಗಳು ತಿಳಿಸಿವೆ.