ಸಂ.ಕ.ಸಮಾಚಾರ ಕಲಬುರಗಿ : ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನ ತಡೋಳಾ ಗ್ರಾಮದಲ್ಲಿ ದರೋಡೆಕೋರರು ದರೋಡೆ ಮಾಡಲು ಯತ್ನಿಸಿದ್ದು, ಅನುಮಾನಗೊಂಡ ಗ್ರಾಮಸ್ಥರು ದರೋಡೆಕೋರನ್ನು ಹಿಡಿಯಲು ಹೋದಾಗ ಅವರ ಮೇಲೆ ಫೈರಿಂಗ್ ನಡೆಸಿದ ಯತ್ನ ಬೆಳಕಿಗೆ ಬಂದಿದೆ.
ಆಳಂದ ತಾಲ್ಲೂಕಿನ ಆಳಂಗ – ತಡೋಳಾ ಕ್ರಾಸ್ ಬಳಿ ಸೋಮವಾರ ತಡರಾತ್ರಿ ನಾಲ್ಕೈದು ಜನರ ಗ್ಯಾಂಗ್ ನಿಂ ರಾಬರಿಗೆ ಸ್ಕೇಚ್ ನಡೆಸಿತ್ತು. ರಾಬರಿಗೆ ಸ್ಕೆಚ್ ಹಾಕಿ ಅನುಮಾನಸ್ಪದವಾಗಿ ಓಡಾಡ್ತಿದ್ದ ನಾಲ್ವರನ್ನು ತಡೋಳಾ ಗ್ರಾಮದವರು ಅನುಮಾನ ಬಂದು ವಿಚಾರಿಸಲು ಹೋದಾಗ ಗ್ರಾಮಸ್ಥರ ಮೇಲೆ ಪೈರಿಂಗ್‌ಗೆ ಮುಂದಾಗಿದ್ದಾರೆ.
ಆಗ ಗ್ರಾಮಸ್ಥೆರಲ್ಲರು ಸೇರಿಕೊಂಡು ಬೆನ್ನತ್ತಿದಾಗ ಹೊಲದಲ್ಲಿ ತಪ್ಪಿಸಿಕೊಂಡು ತಲೆಮರೆಸಿಕೊಂಡಿದ್ದಾರೆ. ಆಗ ಅದೇ ವೇಳೆಯಲ್ಲಿ ಹೊಲದಲ್ಲಿ ಮತ್ತೊಂದು ಬಾರಿ ಪೈರಿಂಗ್ ನಡೆಸಲು ಯತ್ನಿಸಿದ್ದಾರೆ. ಸ್ಥಳಕ್ಕೆ ಪೊಲೀಸರು ಬರುವಷ್ಟರಲ್ಲಿ ಗ್ರಾಮಸ್ಥರಿಂದ ಓರ್ವ ದರೋಡೆಕೋರನ್ನು ವಶಕ್ಕೆ ಪಡೆದಿದ್ದು, ಪೊಲೀಸರು ಬಂದು ಪರಿಶೀಲನೆ ಸಂಧರ್ಭದಲ್ಲಿ ಮತ್ತೊಬ್ಬ ಆರೋಪಿ ವಶಕ್ಕೆ ಪಡೆಯಲಾಗಿದೆ.
ಇನ್ನೂಳಿದ ಮೂರು ಜನ ಆರೋಪಿಗಳು ಸ್ಥಳದಿಂದ ಎಸ್ಕೇಪ್ : ಮಹಾರಾಷ್ಟ್ರದ ಮುರುಮ್ ಜಿಲ್ಲೆಯ ಕೇದಾರ್ ಗ್ರಾಮದ ಗಣೇಶ್ , ಹಾಗೂ ಬಸವಕಲ್ಯಾಣ ತಾಲ್ಲೂಕಿನ ದತ್ತಾತ್ರೇಯ ಎಂಬಾತರನ್ನು ವಶಕ್ಕೆ ಪಡೆಯಲಾಗಿದೆ ಎಂದು ಮೂಲಗಳು ತಿಳಿಸಿವೆ. ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- ಬಿಡುಗಡೆಗೂ ಮುನ್ನವೇ ಅಡ್ವಾನ್ಸ್ ಬುಕಿಂಗ್ನಲ್ಲಿ ಧೂಳೆಬ್ಬಿಸುತ್ತಿದೆ ‘ರಾಮಾಯಣ’;ಮೊದಲ ದಿನದ ಗಳಿಕೆ ಎಷ್ಟು ಗೊತ್ತಾ?
- ತಡೋಳಾ ಗ್ರಾಮಸ್ಥರ ಮೇಲೆ ಫೈರಿಂಗ್ ಮಾಡಲು ಯತ್ನ: ಇಬ್ಬರು ವಶಕ್ಕೆ
- ಕರ್ನಾಟಕ SIR: ಅಂತಿಮ ಮತದಾರರ ಪಟ್ಟಿ ಪ್ರಕಟ: ನಿಮ್ಮ ಹೆಸರು ಇದೆಯೇ ಈಗಲೇ ಪರಿಶೀಲಿಸಿ
- ಸರಕಾರಕ್ಕೆ 10 ದಿನದ ಗಡುವು: ನವೆಂಬರ್ನಲ್ಲಿ ಬೃಹತ್ ಪಾದಯಾತ್ರೆ, ಡಿಸೆಂಬರ್ನಲ್ಲಿ ಸಲ್ಲೇಖನ ವ್ರತ
- ಪರೀಕ್ಷೆ ಮುಂದೂಡುವ ನಿರ್ಧಾರ KEAಗೆ ಬಿಟ್ಟದ್ದು: ಸರ್ಕಾರದ ಹಸ್ತಕ್ಷೇಪವಿಲ್ಲ





















