SK Home Ad
Home ನಮ್ಮ ಜಿಲ್ಲೆ ಬೆಳಗಾವಿ ಮಹಾ ನೀರು: ದತ್ತ ದೇಗುಲ ಮತ್ತೆ ಜಲಾವೃತ

ಮಹಾ ನೀರು: ದತ್ತ ದೇಗುಲ ಮತ್ತೆ ಜಲಾವೃತ

0
39

ಬೆಳಗಾವಿ: ಮಹಾರಾಷ್ಟ್ರದ ಪಶ್ಚಿಮಘಟ್ಟದಲ್ಲಿನ ಮಳೆಯಿಂದಾಗಿ ಸುಮಾರು 89 ಕ್ಯೂಸೆಕ್ ನೀರು ರಾಜ್ಯಕ್ಕೆ ಹರಿದು ಬರುತ್ತಿರುವುದರಿಂದ ವೇದಗಂಗಾ, ದೂಧಗಂಗಾ ಮತ್ತು ಕೃಷ್ಣಾ ನದಿಯ ನೀರಿನ ಮಟ್ಟ ಮತ್ತೆ ಎರಡು ಅಡಿಯಷ್ಟು ಏರಿಕೆಯಾಗಿದೆ.

ಶುಕ್ರವಾರ ವೇದಗಂಗಾ ನದಿಯ ಬಾರವಾಡ-ಕುನ್ನೂರ, ಅಕ್ಕೋಳ-ಸಿದ್ನಾಳ ಮತ್ತು ಭೋಜ-ಶಿವಾಪುರವಾಡಿ, ದೂಧಗಂಗಾ ನದಿಯ ಕಾರದಗಾ-ಭೋಜ ಮತ್ತು ಮಲಿಕವಾಡ-ದತವಾಡ ಹಾಗೂ ಕೃಷ್ಣಾ ನದಿಯ ಕಲ್ಲೋಳ-ಯಡೂರ ಮತ್ತು ಮಾಂಜರಿ-ಸವದತ್ತಿ ಬ್ಯಾರೇಜಗಳು ಜಲಾವೃತಗೊಂಡು ಸಂಚಾರ ಸ್ಥಗಿತಗೊಂಡಿವೆ. ಇದರಿಂದಾಗಿ ಸುತ್ತುವರೆದು ಸಂಚರಿಸುವ ಪ್ರಸಂಗ ಬಂದೊದಗಿದೆ. ಸುಕ್ಷೇತ್ರ ನರಸಿಂಹವಾಡಿಯ ಶ್ರೀ ದತ್ತ ದೇವಸ್ಥಾನ ಎರಡನೇ ಬಾರಿ ಜಲಾವೃತಗೊಂಡಿದೆ.

ಸುಳಕುಡ ಬ್ಯಾರೇಜ್ ಮುಖಾಂತರ ದೂಧಗಂಗಾ ನದಿಗೆ 16 ಸಾವಿರ ಮತ್ತು ರಾಜಾಪುರ ಬ್ಯಾರೇಜ್ ಮುಖಾಂತರ ಕೃಷ್ಣಾ ನದಿಗೆ 73 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿವೆ, ಚಿಕ್ಕೋಡಿ-ನಿಪ್ಪಾಣಿ ತಾಲೂಕಿನಲ್ಲಿ ಮಳೆ ಕ್ಷೀಣಿಸಿದೆ.

ಕೊಯ್ನಾ- 77 ಮಿಮೀ, ವಾರಣಾ-64, ರಾಧಾನಗರ-24, ಕಾಳಮ್ಮಾವಾಡಿ-48, ಪಾಟಗಾಂವ-31, ಮಹಾಬಳೇಶ್ವರ-78 ಮತ್ತು ನವಜಾ-66 ಮಿಮೀ ಮಳೆಯಾಗಿರುವ ಬಗ್ಗೆ ವರದಿಯಾಗಿದೆ.