SK Home Ad
Home ಸಿನಿ ಮಿಲ್ಸ್ ಬಿಗ್‌ಬಾಸ್‌ ಕನ್ನಡ ಸೀಸನ್ 13:‌ ಟೀಚರ್ಸ್‌ ಡೇಗೆ ಕಿಚ್ಚನ ಮೊದಲ ಪಾಠ

ಬಿಗ್‌ಬಾಸ್‌ ಕನ್ನಡ ಸೀಸನ್ 13:‌ ಟೀಚರ್ಸ್‌ ಡೇಗೆ ಕಿಚ್ಚನ ಮೊದಲ ಪಾಠ

0
76

ಬೆಂಗಳೂರು: ಕನ್ನಡ ಬಿಗ್‌ಬಾಸ್‌ ಸೀಸನ್‌ 13 ಶುರುವಾಗೋದು ಯಾವಾಗ ಎನ್ನುವ ಬಿಗ್‌ಬಾಸ್‌ ಅಭಿಮಾನಿಗಳ ಕುತೂಹಲಕ್ಕೆ ಕೊನೆಗೂ ತೆರೆಬಿದಿದ್ದೆ. ಈಗಾಗಲೇ ಬಿಗ್‌ಬಾಸ್‌ ಆರಂಭಕ್ಕೆ ಮುಹೂರ್ತ ನಿಗದಿಯಾಗಿದ್ದು, ಅಧಿಕೃತ ಘೋಷಣೆಯೊಂದೇ ಬಾಕಿ ಉಳಿದಿದೆ.

ಹೌದು ಸ್ವಾಮಿ… ಇದೇ ಸೆಪ್ಟೆಂಬರ್‌ 5ರಿಂದ ನಿಮ್ಮ ನೆಚ್ಚಿನ ರಿಯಾಲಿಟಿ ಶೋ ಬಿಗ್‌ಬಾಸ್‌ ಶುರುವಾಗಲಿದೆ. ಅಷ್ಟೇ ಅಲ್ಲ ಬಿಗ್‌ಬಾಸ್‌ ಅಂದ್ಮೇಲೆ ಕೆಲವೊಂದಿಷ್ಟು ಟ್ವಿಸ್ಟ್‌, ವಿಭಿನ್ನತೆ ಇರಲೇಬೇಕಲ್ವ. ಅದರಂತೆ ಈ ಬಾರಿಯ ಬಿಗ್‌ಬಾಸ್‌ ಕೇವಲ ಕನ್ನಡಿಗರಿಗಷ್ಟೇ ಅಲ್ಲ. ನಾಡಿನ ಗಡಿದಾಟಿ ಎಲ್ಲರಿಗೂ ಮನರಂಜನೆ ನೀಡುವ ಉದ್ದೇಶವನ್ನು ಹೊಂದಿದೆ.

ಈ ಬಾರಿ ಹಿಂದಿ, ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಬಂಗಾಳಿ ಸೇರಿದಂತೆ ಒಟ್ಟು ಆರು ಭಾಷೆಗಳಲ್ಲಿ ಬಿಗ್‌ಬಾಸ್‌ ಕಾರ್ಯಕ್ರಮವನ್ನು ಒಂದೇ ಹಬ್ಬದ ಋತುವಿನಲ್ಲಿ ಆರಂಭಿಸುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ.

ಕಳೆದ ಸೀಸನ್‌ಗೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದ್ದ ಹಿನ್ನೆಲೆಯಲ್ಲಿ ಈ ಬಾರಿಯ ಸ್ಪರ್ಧಿಗಳ ಪಟ್ಟಿಯಲ್ಲಿ ಯಾರು ಇರಲಿದ್ದಾರೆ ಎಂಬ ಚರ್ಚೆ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಜೋರಾಗಿದೆ. ನಿರೂಪಕರಾಗಿ ಕಿಚ್ಚ ಸುದೀಪ್ ಮತ್ತೆ ಕಾಣಿಸಿಕೊಳ್ಳಲಿದ್ದಾರೆ.

ಈ ಬಾರಿ ಬಿಗ್‌ಬಾಸ್‌ ಅನ್ನು ಟಿವಿಯ ಜೊತೆಗೆ ಜಿಯೋಹಾಟ್‌ಸ್ಟಾರ್ ಮೂಲಕವೂ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದ್ದು, ಹೊಸ ಲೋಗೋ, ಹೊಸ ವಿನ್ಯಾಸ ಮತ್ತು ಹಲವು ಅಚ್ಚರಿಯ ಅಂಶಗಳೊಂದಿಗೆ ಕಾರ್ಯಕ್ರಮವನ್ನು ಪ್ರೇಕ್ಷಕರ ಮುಂದೆ ತರಲು ಸಿದ್ಧತೆ ನಡೆದಿದೆ.

ಬಿಗ್‌ಬಾಸ್‌ ಕನ್ನಡ ಸೀಸನ್‌ 13ರ ಪ್ರೀಮಿಯರ್ ದಿನಾಂಕ ಸಂಸ್ಥೆಯೂ ಇದುವರೆಗೆ ಅಧಿಕೃತವಾಗಿ ಘೋಷಿಸಿಲ್ಲ. ಆದರೆ, ಸೆಪ್ಟೆಂಬರ್‌ 5ರಂದು ಶಿಕ್ಷಕ ದಿನಾಚರಣೆಯಂದೆ ಸ್ಪರ್ಧಿಗಳಿಗೆ ಕಿಚ್ಚ ಸುದೀಪ್‌ ಮೊದಲ ಪಾಠ ಮಾಡಲಿದ್ದಾರೆ ಎನ್ನುವುದು ಪಕ್ಕಾ ಎಂದು ಹೇಳಲಾಗುತ್ತಿದೆ.

ಈ ಬಾರಿ ಕಾಮನ್ ಮ್ಯಾನ್ ಎಂಟ್ರಿ: ಸೀಸನ್‌ 13ರಲ್ಲಿ ಕಾಮನ್‌ ಮ್ಯಾನ್‌ಗೂ ದೊಡ್ಮನೆಯಲ್ಲಿ ಸೀಟು ಕಾಯ್ದಿರಸಲಾಗಿದೆ. ಇದಕ್ಕಾಗಿ ಈಗಾಗಲೇ ಸಾಮಾನ್ಯ ಜನರಿಂದ 3 ನಿಮಿಷಗಳ ವಿಡಿಯೋ ತುಣಕನ್ನು ತರಿಸಿಕೊಳ್ಳಲಾಗಿದ್ದು, ಅದರಲ್ಲಿ ಆಯ್ಕೆ ಮಾಡಿ ಆಡಿಷನ್ ಕೂಡ ಮಾಡಲಾಗುತ್ತಿದೆ. ಹೀಗಾಗಿ ಸೆಲೆಬ್ರಿಟಿಗಳ ಪಕ್ಕ ಕುಳಿತುಕೊಳ್ಳುವ ಅವಕಾಶ ಯಾರಿಗೆ ಸಿಗಲಿದೆ ಎನ್ನುವುದು ಮತ್ತಷ್ಟು ಕುತೂಹಲನ್ನು ಸೃಷ್ಟಿಸಿದೆ.

ಸ್ಪರ್ಧಿಗಳು ಯಾರು?: ಈಗಾಗಲೇ ಬಿಗ್‌ಬಾಸ್‌ ಮನೆ ಪ್ರವೇಶಿಸುವ ಸ್ಪರ್ಧಿಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅನೇಕ ಹೆಸರುಗಳು ಹರಿದಾಡುತ್ತಿವೆ. ಇದರಲ್ಲಿ ನಟ-ನಟಿ, ಯೂಟ್ಯೂಬರ್‌, ಸಮಾಜ ಸೇವಕರು, ನಾಯಕರು ಸೇರಿದಂತೆ ಅನೇಕ ಹೆಸರಗಳು ಹರಿದಾಡುತ್ತಿವೆ. ಆದರೆ, ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ದೊರೆಯಬೇಕಾದರೆ ಸೆಪ್ಟೆಂಬರ್‌ 5ರ ವರೆಗೆ ಕಾಯಲೇಬೇಕು.