ಗೋಕಾಕ: ಕೆಎಸ್ಆರ್‌ಟಿಸಿ ಬಸ್ ಹಾಗೂ ಬೈಕ್ ನಡುವೆ ಗುರುವಾರ ಮಧ್ಯಾಹ್ನ ತಾಲೂಕಿನ ಕೊಣ್ಣೂರು ಮರಡಿಮಠ ರಸ್ತೆ ಮಧ್ಯ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ತಂದೆ, ಮಗಳು ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ.
ಕೊಣ್ಣೂರು ಪಟ್ಟಣದ ನಿವಾಸಿಗಳಾದ ಸೈಫ್ ಬಸೀರ ಮುಲ್ಲಾ (29), ಮಗಳು ಸಿಜಾ ಸೈಫ್ ಮುಲ್ಲಾ (4) ಹಾಗೂ ಇಮ್ತಿಯಾಜ ಬಡಗಾಂವ (35) ಮೃತ ದುರ್ದೈವಿಗಳಾಗಿದ್ದಾರೆ. ಜಿಹಾನ ಶಾರುಕ್ ಕುಡಚಿಕರ (6) ಪರಿಸ್ಥಿತಿ ಗಂಭೀರವಾಗಿದ್ದು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ನಾಲ್ವರು ಒಂದೇ ಬೈಕ್ ಮೇಲೆ ಗೋಕಾಕ್‌ನ ಶಾಲೆಯಿಂದ ಕೊಣ್ಣೂರಿಗೆ ಹೊರಟಿದ್ದರು. ಪಟ್ಟದ ಕರೆಮ್ಮಾ ದೇವಸ್ಥಾನದ ಹತ್ತಿರ ಅಪಘಾತ ಸಂಭವಿಸಿದ್ದು, ಚಾಲಕ ಬಸ್ ಬಿಟ್ಟು ಪರಾರಿಯಾಗಿದ್ದಾನೆ. ಸ್ಥಳಕ್ಕೆ ಗೋಕಾಕ ಗ್ರಾಮೀಣ ಠಾಣೆ ಪಿಎಸ್ಐ ಕೆ.ಬಿ. ವಾಲಿಕಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.






















