SK Home Ad
Home ನಮ್ಮ ಜಿಲ್ಲೆ ಉತ್ತರ ಕನ್ನಡ ಡಾ. ನಾರಾಯಣ ಹೊಸ್ಮನೆ ಅಮೆರಿಕಾದ ಶ್ರೇಷ್ಠ ವಿಜ್ಞಾನಿ

ಡಾ. ನಾರಾಯಣ ಹೊಸ್ಮನೆ ಅಮೆರಿಕಾದ ಶ್ರೇಷ್ಠ ವಿಜ್ಞಾನಿ

0
332

ಗೋಕರ್ಣ: ಮೂಲ ಇಲ್ಲಿನ ರಥಬೀದಿ ನಿವಾಸಿಯಾಗಿದ್ದ ಹಾಲಿ ಅಮೇರಿಕಾದಲ್ಲಿರುವ ಖ್ಯಾತ ವಿಜ್ಞಾನಿ ಡಾ. ನಾರಾಯಣ ಹೊಸ್ಮನೆಯವರು ಅಮೆರಿಕಾದ ಶ್ರೇಷ್ಠ ವಿಜ್ಞಾನಿ ಎಂದು ಘೋಷಿಸಲಾಗಿದೆ.

80ರ ದಶಕದಲ್ಲಿ ಅಮೆರಿಕಾಕ್ಕೆ ತೆರಳಿದ ಇವರು, ಕ್ಯಾನ್ಸರ್ ರೋಗಕ್ಕೆ ಪ್ರತಿಬಂಧಕವಾಗಿ ಬೋರಾನ್ (ರಸಾಯನ ಶಾಸ್ತ್ರ) ಬಳಕೆ ಕುರಿತಾದ ಸಂಶೋಧನೆ ನಡೆಸಿ ಯಶಸ್ವಿಯಾಗಿದ್ದು, ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಈಗಾಗಲೇ ವಿಶ್ವಮಟ್ಟದ ಹಲವು ಗೌರವು ದೊರೆತಿದೆ. ಹಾಲಿ ಉತ್ತರ ಇಲಿಯಾನ ವಿಶ್ವವಿದ್ಯಾಲಯದಲ್ಲಿ 50 ವರ್ಷಗಳಿಂದ ವಿಶೇಷ ಸಂಶೋಧಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಆಕಾಡಮಿಕ್ ಫ್ಲಾಟ್ ಫಾರ್ಮ್‌ ಫಾರ್ ರಿಸರ್ಚ್ (ಅಮೆರಿಕಾದ ಸಂಶೋಧಕರ ಅಕಾಡೆಮಿ)ನವರು ಬಿಡುಗಡೆ ಮಾಡಿದ 2026 ರ‍್ಯಾಂಕಿಂಗ್ ಪಟ್ಟಿಯಲ್ಲಿ ರಸಾಯನ ಶಾಸ್ತ್ರ ವಿಭಾಗದ ವಿಜ್ಞಾನಿಯಾಗಿ ಮಾಡಿದ ಸಂಶೋಧನಾ ಸಾಧನೆಗೆ ಈ ಗೌರವ ದೊರೆತಿದೆ.

ಇಲ್ಲಿನ ಹೊಸ್ಮನೆ ವೈದಿಕ ಮನೆತನದಲ್ಲಿ ಜನಿಸಿದ ನಾರಾಯಣ ಅವರಿಗೆ ಚಾಮಿ ಎಂದೇ ಆತ್ಮೀಯವಾಗಿ ಕರೆಯುತ್ತಾರೆ. ಇವರು ಕಲಿತ ಇಲ್ಲಿನ ಕೆನರಾ ಪ್ರಸಾರಕ ಮಂಡಳಿಯ ಭದ್ರಕಾಳಿ ಪೌಢಶಾಲೆಯ ಅಭಿವೃದ್ಧಿಗೆ ಶ್ರೀಚಾಮೀ ವಿದ್ಯಾವಾಹಿನಿ ಟ್ರಸ್ಟ್ ರಚಿಸಿ ಕೊಡುಗೆ ನೀಡುತ್ತಿರುವುದನ್ನು ಸ್ಮರಿಸಬಹುದಾಗಿದೆ.

ತೀರ ಬಡತನಲ್ಲಿ ಕಷ್ಟದಿಂದ ವಿದ್ಯಭ್ಯಾಸ ಮಾಡಿ ಜಗತ್ತು ಗುರುತಿಸುವ ಮಟ್ಟಕ್ಕೆ ಬೆಳೆದು ಪುಣ್ಯ ಕ್ಷೇತ್ರದ ಹಿರಿಮೆ ಹೆಚ್ಚಿಸಿದ ಡಾ. ನಾರಾಯಣ ಹೊಸ್ಮನೆಯವರಿಗೆ ಶ್ರೀಚಾಮಿ ವಿದ್ಯಾವಾಹಿನಿ ಟ್ರಸ್ಟ್‌ನ ಪದಾಧಿಕಾರಿಗಳು ಸದಸ್ಯರು ಸೇರಿದಂತೆ ಅನೇಕರು ಶುಭಕೋರಿ ಅಭಿನಂದಿಸಿದ್ದಾರೆ.