SK Home Ad
Home ನಮ್ಮ ಜಿಲ್ಲೆ ಬೆಂಗಳೂರು ನಿಸ್ವಾರ್ಥ ಸೇವೆಗೆ ಸಿಕ್ಕ ಗೌರವ: ಸಿಬ್ಬಂದಿಗಾಗಿ ಎಚ್‌ಸಿಜಿ ವಿಶೇಷ ದೀಪಾವಳಿ

ನಿಸ್ವಾರ್ಥ ಸೇವೆಗೆ ಸಿಕ್ಕ ಗೌರವ: ಸಿಬ್ಬಂದಿಗಾಗಿ ಎಚ್‌ಸಿಜಿ ವಿಶೇಷ ದೀಪಾವಳಿ

0
8

ಬೆಂಗಳೂರು: ಹಬ್ಬದ ಸಂದರ್ಭದಲ್ಲೂ ಮನೆ-ಮಠ ತೊರೆದು ರೋಗಿಗಳ ನಿರಂತರ ಆರೈಕೆ ಹಾಗೂ ಆಸ್ಪತ್ರೆಯ ಸುಗಮ ಕಾರ್ಯನಿರ್ವಹಣೆಗೆ ಶ್ರಮಿಸುವ ಮುಂಚೂಣಿ ಸಹಾಯಕ ಸಿಬ್ಬಂದಿಗಾಗಿ ಎಚ್‌ಸಿಜಿ ಕ್ಯಾನ್ಸರ್ ಸೆಂಟರ್ (ಕೆ.ಆರ್. ರಸ್ತೆ) ವಿಶೇಷ ದೀಪಾವಳಿ ಆಚರಣೆಯನ್ನು ಆಯೋಜಿಸಿ ಕೃತಜ್ಞತೆ ಸಲ್ಲಿಸಿತು.

ಆಸ್ಪತ್ರೆಯ ತೆರೆಮರೆಯಲ್ಲಿ ಶ್ರಮಿಸುವ ಹೌಸ್‌ಕೀಪಿಂಗ್, ಭದ್ರತಾ ವಿಭಾಗ ಹಾಗೂ ನಿರ್ವಹಣಾ ಸಿಬ್ಬಂದಿ ಮತ್ತು ಅವರ ಮಕ್ಕಳಿಗಾಗಿ ಈ ಹಬ್ಬದ ಕೂಟವನ್ನು ಹಮ್ಮಿಕೊಳ್ಳಲಾಗಿತ್ತು.

ವಿಶೇಷ ಚಟುವಟಿಕೆಗಳು: ಸಿಬ್ಬಂದಿ ಹಾಗೂ ಅವರ ಕುಟುಂಬದ ಸದಸ್ಯರಿಗಾಗಿ ವಿವಿಧ ಆಟೋಟಗಳು ಮತ್ತು ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

ಅಚ್ಚರಿಯ ಶುಭಾಶಯ ಪ್ರದರ್ಶನ: ಹಬ್ಬದ ದಿನಗಳಲ್ಲಿ ಊರಿಗೆ ತೆರಳಲು ಸಾಧ್ಯವಾಗದ ಸಿಬ್ಬಂದಿಗಾಗಿ, ಅವರ ಕುಟುಂಬದವರಿಂದ ಮುಂಚಿತವಾಗಿ ರೆಕಾರ್ಡ್ ಮಾಡಲಾಗಿದ್ದ ವೀಡಿಯೊ ಶುಭಾಶಯ ಸಂದೇಶಗಳನ್ನು ಪ್ರದರ್ಶಿಸಿದ್ದು ಸಿಬ್ಬಂದಿಯಲ್ಲಿ ಭಾವನಾತ್ಮಕ ಕ್ಷಣಗಳನ್ನು ಮೂಡಿಸಿತು.

ಉಡುಗೊರೆ ಹಾಗೂ ಹಬ್ಬದ ಊಟ: ಪಾಲ್ಗೊಂಡಿದ್ದ ಎಲ್ಲಾ ಸಿಬ್ಬಂದಿಗೆ ವಿಶೇಷ ಉಡುಗೊರೆಗಳನ್ನು ನೀಡಿ, ಹಬ್ಬದ ಭೋಜನದ ವ್ಯವಸ್ಥೆ ಮಾಡಲಾಗಿತ್ತು.

ಆಡಳಿತ ಮಂಡಳಿಯ ಮಾತು: “ಒಂದು ಆಸ್ಪತ್ರೆಯ ಯಶಸ್ಸು ಮತ್ತು ಸುಗಮ ಕಾರ್ಯನಿರ್ವಹಣೆ ಪ್ರತಿಯೊಬ್ಬ ಸಿಬ್ಬಂದಿಯ ಒಟ್ಟಾರೆ ಶ್ರಮವನ್ನು ಅವಲಂಬಿಸಿರುತ್ತದೆ. ನಮ್ಮ ತಂಡಗಳಲ್ಲಿ ಸಂತೋಷ ಹಾಗೂ ಒಗ್ಗಟ್ಟನ್ನು ಮೂಡಿಸುವುದು ಮತ್ತು ಪ್ರತಿಯೊಬ್ಬರ ಸೇವೆಯನ್ನು ಗೌರವಿಸುವ ವಾತಾವರಣ ನಿರ್ಮಿಸುವುದು ನಮ್ಮ ಉದ್ದೇಶ. ಈ ಸಣ್ಣ ಆಚರಣೆಯು ಅವರ ಮತ್ತು ಅವರ ಕುಟುಂಬಗಳಲ್ಲಿ ಆತ್ಮೀಯತೆಯ ಭಾವನೆಯನ್ನು ಮೂಡಿಸಿದೆ ಎಂದು ಭಾವಿಸುತ್ತೇವೆ.” ಎಂದು ಎಚ್‌ಸಿಜಿ ಕ್ಯಾನ್ಸರ್ ಆಸ್ಪತ್ರೆ ಉಪಾಧ್ಯಕ್ಷೆ ಹಾಗೂ ಪ್ರಾದೇಶಿಕ ಸಿಒಒ ನೀಷಾ ಕುಮಾರ್ ಹೇಳಿದರು.

ರಜಾ ದಿನಗಳಲ್ಲೂ ಇತರರ ಆರೈಕೆಗಾಗಿ ತಮ್ಮನ್ನು ಅರ್ಪಿಸಿಕೊಳ್ಳುವ ಸಿಬ್ಬಂದಿಯ ನಿಸ್ವಾರ್ಥ ಸೇವೆಯನ್ನು ಗುರುತಿಸುವ ಮೂಲಕ ಈ ಕಾರ್ಯಕ್ರಮವು ದೀಪಾವಳಿಯ ನೈಜ ಆಶಯ ಹಾಗೂ ಮಾನವೀಯ ಮೌಲ್ಯಗಳನ್ನು ಸಾರುವಂತೆ ಮೂಡಿಬಂದಿತು.