ನೈಋತ್ಯ ರೈಲ್ವೆ: 18 ವಿಶೇಷ ರೈಲುಗಳು ಖಾಯಂ

ಹುಬ್ಬಳ್ಳಿ: ನೈಋತ್ಯ ರೈಲ್ವೆಯ 18 ವಿಶೇಷ ರೈಲುಗಳನ್ನು ಮೇ 11ರಿಂದ ಖಾಯಂ ರೈಲುಗಳಾಗಿ ಪರಿವರ್ತಿಸಲಾಗಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ. ಹುಬ್ಬಳ್ಳಿ-ವಿಜಯಪುರ, ಬೆಂಗಳೂರು-ಚನ್ನಪಟ್ಟಣ, ಬೆಂಗಳೂರು-ಅಶೋಕಪುರಂ, ಯಶವಂತಪುರ-ತಾಳಗುಪ್ಪ ಸೇರಿದಂತೆ 18 ರೈಲುಗಳು ಹೊಸ ಸಂಖ್ಯೆಯೊಂದಿಗೆ ದೈನಂದಿನ ಸಂಚಾರ ಆರಂಭಿಸಲಿವೆ. ಸಮಯ ಮತ್ತು ನಿಲುಗಡೆಗಳಲ್ಲಿ ಯಾವುದೇ ಬದಲಾವಣೆ ಇಲ್ಲ. ವೇಳಾಪಟ್ಟಿಗೆ http://www.enquiry.indianrail.gov.in ಅಥವಾ 139ಗೆ ಕರೆ ಮಾಡಿ ಎಂದು ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ. ಮಂಜುನಾಥ್ ಕನಮಡಿ ತಿಳಿಸಿದ್ದಾರೆ.