Home Advertisement
Home ನಮ್ಮ ಜಿಲ್ಲೆ ಹಾವೇರಿ ಪ್ರಧಾನಿ ಮೋದಿ ಅವರ ವರ್ಕಿಂಗ್ ಸ್ಟೈಲ್ ಬೇರೆ

ಪ್ರಧಾನಿ ಮೋದಿ ಅವರ ವರ್ಕಿಂಗ್ ಸ್ಟೈಲ್ ಬೇರೆ

0
11

ಹಾವೇರಿ: ಕರ್ನಾಟಕ ರಾಜ್ಯದ ಕುರ್ಚಿ ಕಿತ್ತಾಟದ ಕುರಿತು ಮೋದಿಯವರು ರಾಜಕೀಯವಾಗಿ ಹೇಳುವುದು ಸ್ವಾಭಾವಿಕ. ರಾಜ್ಯದಲ್ಲಿ ಕುರ್ಚಿ ಗುದ್ದಾಟ ಇರುವುದೇ ಅಲ್ವಾ…? ಮೋದಿಯವರು ಮಾಡುವಂತಹ ವರ್ಕಿಂಗ್ ಸ್ಟೈಲ್ ಬೇರೆಯಾಗಿದೆ. ಬಂಗಾಳ ಮತ್ತು ಮಹಾರಾಷ್ಟ್ರದಲ್ಲಿ ಯಾವ ರೀತಿ ಅಧಿಕಾರಕ್ಕೆ ಬಂದರು ಎಂಬುದು ಗೊತ್ತಿದೆ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನರೇಂದ್ರ ಮೋದಿ ಅವರ ವರ್ಕಿಂಗ್ ಸ್ಟೈಲ್ ಬೇರೆ. ಕಾಂಗ್ರೆಸ್ ಪಕ್ಷದ ವರ್ಕಿಂಗ್ ಸ್ಟೈಲ್ ಬೇರೆ. ಅವರು ಹೇಳಿದಂತೆ ನಾವು ಹೇಳಲು ಆಗಲ್ಲ ಎಂದರು.

ಪ್ರಧಾನಿ ನರೇಂದ್ರ ಮೋದಿ ಅವರು ಬಂದಾಗ ಭದ್ರತಾ ವೈಫಲ್ಯದ ಕುರಿತು ಮಾತನಾಡಿದ ಅವರು, ಆ ರೀತಿಯಲ್ಲ ಆಗಲ್ಲ. ಪೊಲೀಸರು ಭದ್ರತೆಯಲ್ಲಿ ಇರುತ್ತಾರೆ. ಅವರೇ ಎಲ್ಲ ನೋಡಿಕೊಳ್ಳುತ್ತಾರೆ. ಎಲ್ಲೋ ಆಗಿದ್ದಕ್ಕೂ, ಪ್ರಧಾನ ಮಂತ್ರಿಗೆ ಹೋಲಿಸಲು ಆಗುವುದಿಲ್ಲ. ಪ್ರಧಾನಮಂತ್ರಿ, ಪ್ರಧಾನ ಮಂತ್ರಿನೇ. ಭದ್ರತೆ ಜವಾಬ್ದಾರಿ ನಮ್ಮದು ಅಷ್ಟೇ ಅಲ್ಲ. ಕೇಂದ್ರ ಸರ್ಕಾರದ್ದು ಇರುತ್ತದೆ. ಅದೇನೂ ಆತಂಕಪಡುವಂತಹ ಅವಶ್ಯಕತೆ ಇಲ್ಲ ಎಂದರು.