Home Advertisement
Home ಸುದ್ದಿ ದೇಶ ತಮಿಳುನಾಡು ಎಕ್ಸಿಟ್ ಪೋಲ್‌: DMK ಮೈತ್ರಿಕೂಟಕ್ಕೆ ಪಟ್ಟಾಭಿಷೇಕ

ತಮಿಳುನಾಡು ಎಕ್ಸಿಟ್ ಪೋಲ್‌: DMK ಮೈತ್ರಿಕೂಟಕ್ಕೆ ಪಟ್ಟಾಭಿಷೇಕ

0
98

ತಮಿಳುನಾಡು ವಿಧಾನಸಭೆ ಚುನಾವಣೆಯ ಎಕ್ಸಿಟ್ ಪೋಲ್ ಫಲಿತಾಂಶ ಪ್ರಕಟವಾಗಿದ್ದು, ಬಹುತೇಕ ಸಮೀಕ್ಷೆಗಳು DMK ಮೈತ್ರಿಗೆ ಸ್ಪಷ್ಟ ಮುನ್ನಡೆಯನ್ನು ಸೂಚಿಸಿವೆ. ಒಟ್ಟು 234 ಸ್ಥಾನಗಳ ವಿಧಾನಸಭೆ ಸ್ಥಾನಗಳ ಪೈಕಿ ಸರ್ಕಾರ ರಚಿಸಲು 118 ಸ್ಥಾನಗಳ ಅಗತ್ಯವಿದೆ.

NDTV–People Pulse ಸಮೀಕ್ಷೆಯ ಪ್ರಕಾರ, DMK ಮೈತ್ರಿಗೆ 125-145 ಸ್ಥಾನಗಳು ಸಿಗುವ ಸಾಧ್ಯತೆ ಇದೆ. AIADMK ಮೈತ್ರಿಗೆ 65-80 ಸ್ಥಾನಗಳು ದೊರೆಯಬಹುದು ಎಂದು ಅಂದಾಜಿಸಲಾಗಿದೆ. ನಟರ TVK ಪಕ್ಷಕ್ಕೆ 2-6 ಸ್ಥಾನಗಳು ಮತ್ತು ಇತರೆಗಳಿಗೆ 18-24 ಸ್ಥಾನಗಳು ಸಿಗುವ ನಿರೀಕ್ಷೆಯಿದೆ.

Matrize ಸಮೀಕ್ಷೆಯೂ DMK ಮೈತ್ರಿಗೆ ಮುನ್ನಡೆ ನೀಡಿದ್ದು, 122-132 ಸ್ಥಾನಗಳನ್ನು ಅಂದಾಜಿಸಿದೆ. AIADMK ಮೈತ್ರಿಗೆ 87-110 ಸ್ಥಾನಗಳು ಸಿಗಬಹುದು ಎಂದು ಹೇಳಿದೆ.

Republic–P MARQ ಸಮೀಕ್ಷೆಯ ಪ್ರಕಾರ, DMK ಮೈತ್ರಿಗೆ 125-145 ಸ್ಥಾನಗಳು ಲಭಿಸುವ ಸಾಧ್ಯತೆ ಇದ್ದು, AIADMK ಮೈತ್ರಿಗೆ 65-85 ಸ್ಥಾನಗಳು ಸಿಗಬಹುದು. ಇತರೆಗಳಿಗೆ 16-26 ಸ್ಥಾನಗಳ ಅಂದಾಜು ಮಾಡಲಾಗಿದೆ.

Chanakya ಸಮೀಕ್ಷೆ DMK ಮೈತ್ರಿಗೆ ಅತ್ಯಧಿಕ ಸ್ಥಾನಗಳನ್ನು ನೀಡಿದ್ದು, 145-160 ಸ್ಥಾನಗಳವರೆಗೆ ಗೆಲುವು ಸಾಧಿಸುವ ಸಾಧ್ಯತೆ ಇದೆ ಎಂದು ಸೂಚಿಸಿದೆ. AIADMK ಮೈತ್ರಿಗೆ 50-65 ಸ್ಥಾನಗಳು ಸಿಗಬಹುದು ಎಂದು ಹೇಳಿದೆ.

ಒಟ್ಟಾರೆ, ಎಲ್ಲಾ ಪ್ರಮುಖ ಎಕ್ಸಿಟ್ ಪೋಲ್‌ಗಳು DMK ಮೈತ್ರಿಯೇ ಅಧಿಕಾರಕ್ಕೆ ಮರಳುವ ಸಾಧ್ಯತೆಯನ್ನು ಸೂಚಿಸುತ್ತಿದ್ದು, AIADMK ಮೈತ್ರಿ ಹಿನ್ನಡೆಯಲ್ಲಿದೆ. ಆದಾಗ್ಯೂ, ಅಂತಿಮ ಫಲಿತಾಂಶಗಳು ಪ್ರಕಟವಾದ ಬಳಿಕವೇ ನಿಜವಾದ ಚಿತ್ರ ಸ್ಪಷ್ಟವಾಗಲಿದೆ.