Home Advertisement
Home ಸಿನಿ ಮಿಲ್ಸ್ ಟಾಕ್ಸಿಕ್ ಸಿನಿಮಾ ರಿಲೀಸ್ ಮತ್ತೆ ಮುಂದೂಡಿಕೆ: ಕಾರಣವೇನು?

ಟಾಕ್ಸಿಕ್ ಸಿನಿಮಾ ರಿಲೀಸ್ ಮತ್ತೆ ಮುಂದೂಡಿಕೆ: ಕಾರಣವೇನು?

0
92

ಬೆಂಗಳೂರು/ಮುಂಬೈ : ಸಿನೆಮಾಕಾನ್‌ನಲ್ಲಿ ಭರ್ಜರಿ ಪ್ರತಿಕ್ರಿಯೆ ಪಡೆದ ನಂತರ, ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಟಾಕ್ಸಿಕ್ ಚಿತ್ರದ ಬಿಡುಗಡೆಯ ದಿನಾಂಕವನ್ನು ಮುಂದೂಡಲಾಗಿದೆ. ಮೊದಲು ಜೂನ್ 4, 2026 ರಂದು ಬಿಡುಗಡೆಯಾಗಬೇಕಿದ್ದ ಈ ಸಿನಿಮಾ ಈಗ ಹೊಸ ದಿನಾಂಕದಲ್ಲಿ ಜಾಗತಿಕ ಮಟ್ಟದಲ್ಲಿ ತೆರೆಕಾಣಲಿದೆ ಎಂದು ನಿರ್ಮಾಣ ಸಂಸ್ಥೆಗಳು ಘೋಷಿಸಿವೆ.

ಚಿತ್ರವನ್ನು ನಿರ್ಮಿಸುತ್ತಿರುವ ​ಕೆವಿಎನ್ ಪ್ರೊಡಕ್ಷನ್ಸ್ (KVN) ಮತ್ತು ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಸಂಸ್ಥೆಗಳು ಈ ಕುರಿತು ಅಧಿಕೃತ ಪ್ರಕಟಣೆ ನೀಡಿದ್ದು, ಹೊಸ ಬಿಡುಗಡೆಯ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸುವುದಾಗಿ ತಿಳಿಸಿವೆ.

ಸಿನೆಮಾಕಾನ್ ಪ್ರತಿಕ್ರಿಯೆ – ನಿರ್ಧಾರಕ್ಕೆ ಪ್ರಮುಖ ಕಾರಣ : ಇತ್ತೀಚೆಗೆ ನಡೆದ CinemaCon ಕಾರ್ಯಕ್ರಮದಲ್ಲಿ ಚಿತ್ರದ ಪ್ರೆಸೆಂಟೇಶನ್‌ಗೆ ಜಾಗತಿಕ ವಿತರಕರು ಮತ್ತು ಚಿತ್ರೋದ್ಯಮದ ಗಣ್ಯರಿಂದ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಪ್ರತಿಕ್ರಿಯೆ ಹಿನ್ನೆಲೆ, ಚಿತ್ರವನ್ನು ಇನ್ನಷ್ಟು ದೊಡ್ಡ ಮಟ್ಟದಲ್ಲಿ, ಅಂತರಾಷ್ಟ್ರೀಯ ಮಾರುಕಟ್ಟೆಗೆ ತಕ್ಕಂತೆ ಬಿಡುಗಡೆ ಮಾಡಲು ತಂಡ ನಿರ್ಧರಿಸಿದೆ.

ಯಶ್ ಅಧಿಕೃತ ಹೇಳಿಕೆ: ಯಶ್ ತಮ್ಮ ಹೇಳಿಕೆಯಲ್ಲಿ, “’ಟಾಕ್ಸಿಕ್’ ಒಂದು ವಿಶೇಷ ಪಯಣ. ಸಿನೆಮಾಕಾನ್‌ನಲ್ಲಿ ಸಿಕ್ಕ ಜಾಗತಿಕ ಪ್ರತಿಕ್ರಿಯೆ ನಮಗೆ ದೊಡ್ಡ ವಿಶ್ವಾಸ ನೀಡಿದೆ. ಈ ಸಿನಿಮಾ ವಿಶ್ವದಾದ್ಯಂತ ತನ್ನ ಸಂಪೂರ್ಣ ಸಾಮರ್ಥ್ಯದಲ್ಲಿ ತಲುಪಬೇಕೆಂಬ ಕಾರಣಕ್ಕೆ ನಾವು ಬಿಡುಗಡೆಯ ದಿನಾಂಕವನ್ನು ಮರುಹೊಂದಿಸಿದ್ದೇವೆ,” ಎಂದು ಹೇಳಿದ್ದಾರೆ.

ಭಾರತೀಯ ಸಿನೆಮಾ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿರುವ ಈ ಸಂದರ್ಭದಲ್ಲಿ, ಗುಣಮಟ್ಟದ ಸಿನಿಮಾವನ್ನು ನೀಡುವುದು ನಮ್ಮ ಜವಾಬ್ದಾರಿ. ಈ ನಿರ್ಧಾರ ಆ ದಿಕ್ಕಿನಲ್ಲಿ ಒಂದು ಹೆಜ್ಜೆ,” ಎಂದು ತಿಳಿಸಿದ್ದಾರೆ.

ತಾರಾಗಣ ಮತ್ತು ತಾಂತ್ರಿಕ ತಂಡ : ಚಿತ್ರವನ್ನು ಗೀತು ಮೋಹನ್ ದಾಸ್ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ರುಕ್ಮಿಣಿ ವಸಂತ್, ತಾರಾ ಸುತಾರಿಯಾ, ನಟಿಸಿದ್ದಾರೆ.

ಬಹುಭಾಷಾ ಬಿಡುಗಡೆ : ‘ಟಾಕ್ಸಿಕ್’ ಚಿತ್ರವನ್ನು ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಚಿತ್ರೀಕರಿಸಲಾಗಿದ್ದು, ನಂತರ ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ಡಬ್ ಮಾಡಿ ಜಾಗತಿಕವಾಗಿ ಬಿಡುಗಡೆ ಮಾಡುವ ಯೋಜನೆ ಇದೆ.