SK Home Ad
Home ಸಿನಿ ಮಿಲ್ಸ್ ಪೋಸ್ಟರ್ ಅಂಟಿಸುತ್ತಿದ ಹುಡುಗ… ಗೋಡೆಯಲ್ಲಿ ಆತನದೇ ಪೋಸ್ಟರ್!

ಪೋಸ್ಟರ್ ಅಂಟಿಸುತ್ತಿದ ಹುಡುಗ… ಗೋಡೆಯಲ್ಲಿ ಆತನದೇ ಪೋಸ್ಟರ್!

0
9

ನರಸಿಂಹರಾವ್
ನಾನಾ ಪಾಟೇಕರ್… ಭಾರತೀಯ ಚಿತ್ರರಂಗ ಕಂಡ ಅಪರೂಪದ ನಟ. ಭಾರತೀಯ ಚಿತ್ರರಂಗಕ್ಕೆ ಸಂಭಾಷಣೆ ಅಂದರೆ ಹೀಗೆ ಎಂದು ತೋರಿಸಿಕೊಟ್ಟ ನಾನಾ ಬಿಟ್ಟು ಹೋದ ಹೆಜ್ಜೆ ಗುರುತುಗಳೇ ನಿತ್ಯ ನಿರಂತರ…

ನಾನಾ ಪಾಟೇಕರ್ ಮೂಲ ಹೆಸರು ವಿಶ್ವನಾಥ್. ಬಹುತೇಕ ನಟರಂತೆ ನಾನಾ ಪಾಟೇಕರ್ ಅವರ ಮನೆಯಲ್ಲಿ ಬಡತನ ಇದ್ದುದ್ದರಿಂದ ನಾನಾಗೆ ಹಸಿವಿನ ಬರ. ಜೀವನ ನಿರ್ವಹಣೆಗೆ ಕಷ್ಟವಾಗಿತ್ತು. ತಂದೆಯ ಸಣ್ಣ ವ್ಯವಹಾರ ಕುಸಿದುಹೋದಾಗ ಶಾಲೆಗೆ ಹೋಗುತ್ತಿದ್ದ ನಾನಾ, ಮುಂಬೈನ ಗೋಡೆಗಳ ಮೇಲೆ ಸಿನಿಮಾ ಪೋಸ್ಟರ್ ಅಂಟಿಸುತ್ತಿದ್ದ. ಮುಂದೆ ಅದೇ ಗೋಡೆಗಳ ಮೇಲೆ ತನ್ನದೇ ಚಿತ್ರದ ಫೋಟೋ ರಾರಾಜಿಸಬಹುದು ಎಂದು ಆತನಿಗೆ ಗೊತ್ತಿರಲಿಲ್ಲ.

ನಾನಾ ಪಾಟೇಕರ್ ಹಸಿವು, ಬಡತನ, ಅವಮಾನ ಮತ್ತು ಹೋರಾಟವನ್ನೇ ಮೆಟ್ಟಿಲು ಮಾಡಿಕೊಂಡು ಪದ್ಮಶ್ರೀ ಪ್ರಶಸ್ತಿವರೆಗೆ ತನ್ನ ಪಯಣ ಬೆಳೆಸಿದರು. ಆಗಿನ ಸಂದರ್ಭದಲ್ಲಿ 35 ರೂ. ಸಂಬಳ ಪಡೆಯುತ್ತಿದ್ದ ನಾನಾ, ಬಡತನ ಮನುಷ್ಯನನ್ನು ಹೇಗೆ ಅವಮಾನಿಸುತ್ತದೆ ಎಂಬುದನ್ನು ತಾವು ಅನುಭವಿಸಿದ್ದೇನೆ ಎಂದು ನಾನಾ ಹಲವು ಬಾರಿ ಹೇಳಿಕೊಂಡಿದ್ದರು.

ಆದರೆ ರಂಗಭೂಮಿ ಅವರಿಗೆ ಬದುಕಿನ ಮತ್ತೊಂದು ದಾರಿ ತೋರಿಸಿತು. ರಂಗಕರ್ಮಿ ಸುಲಭಾ ದೇಶಪಾಂಡೆ ಇನ್ನಿತರರು ಆತನನ್ನು ಗುರುತಿಸಿ ರಂಗಕ್ಕೆ ಕರೆತಂದರು. ನಾಟಕದ ಸಂದರ್ಭದಲ್ಲಿ ವೇದಿಕೆಯ ಮೇಲೆ ನಿಂತಾಗಲೇ ತಾನು ರಾಜನಂತೆ ಭಾಸವಾಗುತ್ತದೆ ಎಂದು ನಾನಾ ಹೇಳುತ್ತಿದ್ದ. ನಟಿ ಸ್ಮಿತಾ ಪಾಟೀಲ್ ಒತ್ತಾಯವೇ ಅವರನ್ನು ಚಿತ್ರರಂಗಕ್ಕೆ ಕಾಲೂರಲು ಪ್ರಮುಖ ಕಾರಣ. 1978ರಲ್ಲಿ `ಗಮನ’ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟರು.

ಸೇಡು ತೀರಿಸಿಕೊಂಡಿದ್ದ ನಾನಾ…: ನಾನಾ ಪಾಟೇಕರ್‌ಗೆ ಎಂತಹ ಜಿದ್ದು ಇತ್ತೆಂದರೆ… ಒಂದು ಸಿನಿಮಾ ಮಾಡುವಂತೆ ನಿರ್ಮಾಪಕರು, ನಿರ್ದೇಶಕರು ಗಂಟು ಬಿದ್ದರು. ಆಗಷ್ಟೇ ಪ್ರವರ್ಧಮಾನಕ್ಕೆ ಬರುತ್ತಿದ್ದ ನಾನಾ ನನಗೆ ಒಂದು ಕೋಟಿ ರೂ. ಸಂಭಾವನೆ ನೀಡಬೇಕು ಎಂದರು. ಆಗ ನಿರ್ದೇಶಕ, ನಿರ್ಮಾಪಕ ಇಬ್ಬರೂ ಅಷ್ಟು ಕೊಡಲು ಆಗುವುದಿಲ್ಲ ನಮ್ಮಲ್ಲಿ ಇದು ರೂಲ್ ಎಂದು ಹೇಳಿ ನಾನಾ ಪಾಟೇಕರ್‌ಗೆ ವ್ಯಂಗ್ಯವಾಗಿ ಅಪಹಾಸ್ಯ ಮಾಡಿದ್ದರು. ಇದನ್ನೇ ಮನಸ್ಸಿನಲ್ಲಿಟ್ಟುಕೊಂಡಿದ್ದ ನಾನಾ, ಅವರೆಲ್ಲರನ್ನೂ ಮನೆಗೆ ಊಟಕ್ಕೆ ಕರೆದು ಊಟ ಹಾಕಿ ಊಟದ ತಟ್ಟೆ ತೊಳೆದಿಟ್ಟು ಹೋಗಬೇಕು ಇದು ನಮ್ಮ ರೂಲ್ ಎಂದು ಸೇಡು ತೀರಿಸಿಕೊಂಡಿದ್ದರು.