‘ಬೃಂದಾವಿಹಾರಿ’ : ಬೃಂದಾವನದ ಸುಂದರ ಲೋಕದ ಹಿಂದೆ ಅಡಗಿದೆ ಅಚ್ಚರಿಯ ಸತ್ಯ
ಚಿತ್ರ: ಬೃಂದಾವಿಹಾರಿ
ನಿರ್ದೇಶನ: ಶ್ರೀನಿವಾಸ್ ರಾಜು
ನಿರ್ಮಾಣ: ಸಮೃದ್ಧಿ ಮಂಜುನಾಥ್
ತಾರಾಗಣ: ಗಣೇಶ್, ಮಾಳವಿಕಾ ಶರ್ಮಾ, ದೇವಿಕಾ ಭಟ್, ರಾಮ್‌ಕುಮಾರ್, ಶ್ವೇತಾ, ಸಾಧುಕೋಕಿಲ, ರಂಗಾಯಣ ರಘು, ಕುರಿ ಪ್ರತಾಪ್, ಪಾವಗಡ ಮಂಜು, ಜಗಪ್ಪ ಇತರರು.
ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ, ಶ್ರೀನಿವಾಸ್ ರಾಜು ನಿರ್ದೇಶನದ ‘ಬೃಂದಾವಿಹಾರಿ’ ಕನ್ನಡ ಚಿತ್ರ ನವೆಂಬರ್ 20ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಪ್ರೀತಿ, ಕುಟುಂಬ ಸಂಬಂಧಗಳು, ಸ್ನೇಹ ಮತ್ತು ಬದುಕಿನ ವಾಸ್ತವದ ಸುತ್ತ ಹೆಣೆದಿರುವ ಈ ಚಿತ್ರವು ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ. ಅದರಲ್ಲೂ ಚಿತ್ರದ ಕಥೆಯಲ್ಲಿ ಬರುವ ಅನಿರೀಕ್ಷಿತ ತಿರುವು ವಿಶೇಷ ಗಮನ ಸೆಳೆಯುತ್ತಿದೆ.
ಚಿತ್ರದ ನಾಯಕ ಮಾಧವ (ಗಣೇಶ್) ಚಿಕ್ಕಂದಿನಿಂದಲೂ ಬೃಂದಾವನ ಎಂಬ ಊರಿನ ಪರಿಸರದಲ್ಲೇ ಬೆಳೆದವನು. ಆಟ, ಪಾಠ, ಸ್ನೇಹಿತರ ಒಡನಾಟ, ಕೂಡು ಕುಟುಂಬದ ಪ್ರೀತಿ, ಊರಿನ ಜನರ ಆತ್ಮೀಯತೆ ಹೀಗೆ ಅವನ ಬದುಕಿನ ಪ್ರತಿಯೊಂದು ಕ್ಷಣವೂ ಬೃಂದಾವನದ ಸುತ್ತಲೇ ಸಾಗುತ್ತದೆ. ಗಿಲ್ಲಿ-ದಾಂಡು, ಬ್ಯಾಟ್-ಚೆಂಡಿನ ಆಟಗಳಲ್ಲಿ ಚಾಂಪಿಯನ್ ಆಗಿರುವ ಮಾಧವನ ಜೀವನದಲ್ಲಿ ಪ್ರೀತಿಗೂ ವಿಶೇಷ ಸ್ಥಾನವಿದೆ.
ರಾಧೆಯ ಪ್ರೀತಿಯಲ್ಲಿ ಮುಳುಗಿರುವ ಆತನ ಬದುಕಿಗೆ ಮತ್ತೊಂದು ಪ್ರೇಮದ ಪ್ರವೇಶವೂ ಆಗುತ್ತದೆ. ಆದರೆ ಎಲ್ಲವೂ ಸುಂದರವಾಗಿ ಸಾಗುತ್ತಿದೆ ಎನ್ನುವಷ್ಟರಲ್ಲಿ ಅನಿರೀಕ್ಷಿತ ಘಟನೆಗಳು ಆತನ ಬದುಕನ್ನೇ ಬದಲಿಸುತ್ತವೆ.
ಮಾಧವ ತನ್ನ ಕಣ್ಣಿಗೆ ಕಾಣುವ ಜಗತ್ತೇ ನಿಜವೆಂದು ನಂಬಿರುತ್ತಾನೆ. ಆದರೆ ಆತನ ಬದುಕಿನ ಹಿಂದಿರುವ ವಾಸ್ತವ ಬೇರೆಯೇ ಇರುತ್ತದೆ. ಚಿತ್ರದ ಮಧ್ಯಂತರದ ಸುತ್ತ ಕಥೆ ಪಡೆದುಕೊಳ್ಳುವ ತಿರುವು ಪ್ರೇಕ್ಷಕರಿಗೆ ಹೊಸ ಅನುಭವ ನೀಡುತ್ತದೆ. ಬೃಂದಾವನದ ಸುಂದರ ಜಗತ್ತಿನ ಹಿಂದೆ ಅಡಗಿರುವ ರಹಸ್ಯ, ರಿಯಾಲಿಟಿ ಶೋ ಪರಿಕಲ್ಪನೆ ಮತ್ತು ಸಂಬಂಧಗಳ ನಿಜವಾದ ಮೌಲ್ಯವನ್ನು ಸಿನಿಮಾ ತೆರೆದಿಡುತ್ತದೆ.
ನಿರ್ದೇಶಕ ಶ್ರೀನಿವಾಸ್ ರಾಜು ಅವರು ಬೃಂದಾವನದ ಪರಿಸರವನ್ನು ಅದ್ಧೂರಿಯಾಗಿ ಕಟ್ಟಿಕೊಟ್ಟಿದ್ದಾರೆ. ಪ್ರೀತಿ, ಕುಟುಂಬದ ಬಾಂಧವ್ಯ, ಸ್ನೇಹ ಮತ್ತು ಮನುಷ್ಯ ಸಂಬಂಧಗಳ ಮಹತ್ವವನ್ನು ಕಥೆಯ ಮೂಲಕ ಹೇಳಲು ಪ್ರಯತ್ನಿಸಿದ್ದಾರೆ.
ಮಾಧವನ ಪಾತ್ರದಲ್ಲಿ ಗಣೇಶ್ ತಮ್ಮ ಅಭಿನಯದ ಮೂಲಕ ಗಮನ ಸೆಳೆಯುತ್ತಾರೆ. ದೇವಿಕಾ ಭಟ್ ಮತ್ತು ಮಾಳವಿಕಾ ಶರ್ಮಾ ನಾಯಕಿಯರಾಗಿ ಕಾಣಿಸಿಕೊಂಡಿದ್ದು, ತಮ್ಮ ಪಾತ್ರಗಳಿಗೆ ಸೂಕ್ತವಾಗಿ ಅಭಿನಯಿಸಿದ್ದಾರೆ. ರಾಮ್‌ಕುಮಾರ್, ಶ್ವೇತಾ, ಸಾಧುಕೋಕಿಲ, ರಂಗಾಯಣ ರಘು, ಕುರಿ ಪ್ರತಾಪ್, ಪಾವಗಡ ಮಂಜು, ಜಗ್ಗಪ್ಪ ಸೇರಿದಂತೆ ದೊಡ್ಡ ತಾರಾಗಣ ಚಿತ್ರಕ್ಕೆ ಬಲ ತುಂಬಿದೆ. ಹೆಶಮ್ ಅಬ್ದುಲ್ ವಹಾಬ್ ಅವರ ಸಂಗೀತ ಚಿತ್ರಕ್ಕೆ ಪೂರಕವಾಗಿದೆ.
ಗಣೇಶ್ ಮತ್ತು ಶ್ರೀನಿವಾಸ್ ರಾಜು ಜೋಡಿ ಈ ಹಿಂದೆ ‘ಕೃಷ್ಣಂ ಪ್ರಣಯ ಸಖಿ’ ಚಿತ್ರದ ಮೂಲಕ ಗಮನ ಸೆಳೆದಿತ್ತು. ಇದೀಗ ‘ಬೃಂದಾವಿಹಾರಿ’ ಮೂಲಕ ಮತ್ತೊಮ್ಮೆ ಒಂದಾಗಿದ್ದಾರೆ.
- ಬಸವ ಮಂಟಪ ವಿವಾದಕ್ಕೆ ಹೊಸ ತಿರುವು: ಹಂಜ್ ಹತ್ಯೆಗೆ ₹5 ಲಕ್ಷ ಬಹುಮಾನ ಘೋಷಣೆಚಿಕ್ಕೋಡಿ: ಬಸವಣ್ಣನವರ ಕುರಿತು ‘ಬಸವ ಮಂಟಪ’ ಪುಸ್ತಕದಲ್ಲಿ ವಿವಾದಾತ್ಮಕ ಬರಹ ಪ್ರಕಟಿಸಿದ ಆರೋಪಕ್ಕೆ… Read more: ಬಸವ ಮಂಟಪ ವಿವಾದಕ್ಕೆ ಹೊಸ ತಿರುವು: ಹಂಜ್ ಹತ್ಯೆಗೆ ₹5 ಲಕ್ಷ ಬಹುಮಾನ ಘೋಷಣೆ
- ʼಬೃಂದಾವಿಹಾರಿ’: ಬೃಂದಾವನದಲ್ಲಿ ಅರಳಿದ ಪ್ರೀತಿ, ಬದುಕಿನಲ್ಲಿ ಎದುರಾದ ಅನಿರೀಕ್ಷಿತ ತಿರುವು‘ಬೃಂದಾವಿಹಾರಿ’ : ಬೃಂದಾವನದ ಸುಂದರ ಲೋಕದ ಹಿಂದೆ ಅಡಗಿದೆ ಅಚ್ಚರಿಯ ಸತ್ಯ ಚಿತ್ರ:… Read more: ʼಬೃಂದಾವಿಹಾರಿ’: ಬೃಂದಾವನದಲ್ಲಿ ಅರಳಿದ ಪ್ರೀತಿ, ಬದುಕಿನಲ್ಲಿ ಎದುರಾದ ಅನಿರೀಕ್ಷಿತ ತಿರುವು
- ‘ಬಸವ ಮಂಟಪ’ ಕೃತಿ ವಿವಾದ | ಲುಕೌಟ್ ನೋಟಿಸ್ ಹಿನ್ನೆಲೆಯಲ್ಲಿ ಹಂಜ್ ವಿದೇಶ ಪ್ರಯಾಣಕ್ಕೆ ತಡೆಬೆಳಗಾವಿ: ‘ಬಸವ ಮಂಟಪ’ ಕೃತಿ ವಿವಾದಕ್ಕೆ ಸಂಬಂಧಿಸಿದಂತೆ ಲೇಖಕ ರವಿ ಹಂಜ್ ಅವರನ್ನು… Read more: ‘ಬಸವ ಮಂಟಪ’ ಕೃತಿ ವಿವಾದ | ಲುಕೌಟ್ ನೋಟಿಸ್ ಹಿನ್ನೆಲೆಯಲ್ಲಿ ಹಂಜ್ ವಿದೇಶ ಪ್ರಯಾಣಕ್ಕೆ ತಡೆ
- ಕರಾವಳಿಯ ಸೊಗಡಿನಲ್ಲಿ ಹಾರರ್–ಕಾಮಿಡಿ ಕಥೆ: ‘ಶಂಕರಾಭರಣ’ಬಸ್ನಲ್ಲಿ ನಿಗೂಢ ಘಟನೆಗಳು: ಸುಮಂತ್ ಭಟ್ ನಿರ್ದೇಶನದ ‘ಶಂಕರಾಭರಣ’ ಚಿತ್ರ: ಶಂಕರಾಭರಣನಿರ್ದೇಶನ: ಸುಮಂತ್… Read more: ಕರಾವಳಿಯ ಸೊಗಡಿನಲ್ಲಿ ಹಾರರ್–ಕಾಮಿಡಿ ಕಥೆ: ‘ಶಂಕರಾಭರಣ’
- ಗಾನವಿಯನ್ನು ಮಹಾರಾಣಿ ತಂಡದ ಗೇಮ್ ಚೇಂಜರ್; ಕಮ್ಬ್ಯಾಕ್ ಆಟಕ್ಕೆ ಗಗನ್ ಚಿನ್ನಪ್ಪಗೆ ‘ಕಿಚ್ಚನ ಚಪ್ಪಾಳೆ’!BBK13: ‘ಬಿಗ್ ಬಾಸ್ ಕನ್ನಡ ಸೀಸನ್-13’ರ ಹತ್ತನೇ ವಾರದ ಕೊನೆಯಲ್ಲಿ ನಡೆದ ವೀಕೆಂಡ್… Read more: ಗಾನವಿಯನ್ನು ಮಹಾರಾಣಿ ತಂಡದ ಗೇಮ್ ಚೇಂಜರ್; ಕಮ್ಬ್ಯಾಕ್ ಆಟಕ್ಕೆ ಗಗನ್ ಚಿನ್ನಪ್ಪಗೆ ‘ಕಿಚ್ಚನ ಚಪ್ಪಾಳೆ’!
- ‘ನೀವು ನನಗೆ ಸಹೋದರಿಯರಿದ್ದಂತೆ, ಹೋರಾಟ ಕೈಬಿಡಿ’: ಆಶಾ ಕಾರ್ಯಕರ್ತೆಯರಿಗೆ ಸಿಎಂ ಭಾವನಾತ್ಮಕ ಮನವಿಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹೋರಾಟ ನಡೆಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಮುಖ್ಯಮಂತ್ರಿ… Read more: ‘ನೀವು ನನಗೆ ಸಹೋದರಿಯರಿದ್ದಂತೆ, ಹೋರಾಟ ಕೈಬಿಡಿ’: ಆಶಾ ಕಾರ್ಯಕರ್ತೆಯರಿಗೆ ಸಿಎಂ ಭಾವನಾತ್ಮಕ ಮನವಿ




























