SK Home Ad
Home ನಮ್ಮ ಜಿಲ್ಲೆ ಕೊಪ್ಪಳ ಮಾನವೀಯತೆ ಮೆರೆದ ಸಂಸದ ಹಿಟ್ನಾಳ

ಮಾನವೀಯತೆ ಮೆರೆದ ಸಂಸದ ಹಿಟ್ನಾಳ

0
14

ಕೊಪ್ಪಳ: ತಾಲ್ಲೂಕಿನ ಗಿಣಿಗೇರಿ-ಗುಳದಳ್ಳಿ ರಸ್ತೆಯಲ್ಲಿ ತೆರಳುತ್ತಿದ್ದಾಗ ಬುಧವಾರ ಅಪಘಾತ ಸಂಭವಿಸಿದ್ದು, ಗಾಯಾಳುವನ್ನು ಸಂಸದ ಕೆ.ರಾಜಶೇಖರ ಹಿಟ್ನಾಳ ತಮ್ಮ ಕಾರಿನಲ್ಲಿ ಆಸ್ಪತ್ರೆಗೆ ಕರೆದೊಯ್ದು ಮಾನವೀಯತೆ ಮರೆದಿದ್ದಾರೆ.

ತಾಲ್ಲೂಕಿನ ಗಿಣಿಗೇರಿ ಮತ್ತು ಗುಳದಳ್ಳಿ ರಸ್ತೆಯಲ್ಲಿ ಎರಡು ಬೈಕುಗಳ ನಡುವೆ ಅಪಘಾತ ಸಂಭವಿಸಿದ್ದು, ಬೈಕ್ ಸವಾರ ಗಾಯದಿಂದ ಬಳುತ್ತಿದ್ದ‌ನು. ತಾಲ್ಲೂಕಿನ ಬೂದುಗುಂಪಾ ಗ್ರಾಮದ ಬೂದೇಶ್ವರ ದೇವಸ್ಥಾನಕ್ಕೆ ದೇವರ ದರ್ಶನ ಪಡೆದು, ಮರಳಿ ಕೊಪ್ಪಳಕ್ಕೆ ಬರುವಾಗ ಜನರು ಸೇರಿದ್ದನ್ನು ನೋಡಿ, ಸಂಸದ ಕೆ.ರಾಜಶೇಖರ ಹಿಟ್ನಾಳ ಕಾರು ನಿಲ್ಲಿಸಿದ್ದಾರೆ.

ಬಳಿಕ ವಿಚಾರಿಸಿದಾಗ ಎರಡು ಬೈಕುಗಳು ಡಿಕ್ಕಿಯಾಗಿ ತೆಲಂಗಾಣ ಮೂಲದ ಓರ್ವ ಬೈಕ್ ಸವಾರನ ಮೂಗಿನಲ್ಲಿ ರಕ್ತಸ್ರಾವವಾಗಿ ಬಿದ್ದು ಒದ್ದಾಡುತ್ತಿರುವುದನ್ನು ನೋಡಿ, ಸಂಸದ ಕೆ.ರಾಜಶೇಖರ್, ‘ಆ್ಯಂಬುಲೆನ್ಸ್ ಕರೆ ಮಾಡಿದ್ದೀರಾ? ಎಂದು ಕೇಳಿ, ಅದು ಬರುವುದು ತಡವಾಗಬಹುದು ನನ್ನ ಕಾರಿನಲ್ಲಿ ಯುವಕನನ್ನು ಕೂರಿಸಿ’ ಎಂದು ತಿಳಿಸಿದ್ದಾರೆ.

ನಂತರ ಗಾಯಗೊಂಡ ಯುವಕನನ್ನು ತಮ್ಮ ಕಾರಿನಲ್ಲಿ ಕೂರಿಸಿಕೊಂಡು ಬಂದ ಸಂಸದ ಹಿಟ್ನಾಳ, ನಗರದ ಸರ್ಕಾರಿ ಕಿಮ್ಸ್ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಅಲ್ಲದೇ ಗಾಯಾಳು ಆರೋಗ್ಯವಾಗಿ ಇರಲಿ ಎಂದು ಸಂಸದ ಹಿಟ್ನಾಳ ಶುಭಾರೈಸಿದ್ದಾರೆ.